ತಂತ್ರಜ್ಞಾನ ಮತ್ತು ಸೃಜನಶೀಲತೆಯ ಅವಸಾನ

Main Article Content

ಶುಭಾಂಗಿ ಅಶೋಕ ಕುಂಬಾರ್

Abstract

ಮಾನವ ಸಮಾಜದ ಬೆಳವಣಿಗೆಯಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರವಹಿಸಿದೆ. ಚಕ್ರದ ಅವಿಷ್ಕಾರದಿಂದ ಇಂದಿನ ಕೃತಕ ಬುದ್ಧಿಮತ್ತೆಯವರೆಗೆ ಪ್ರತಿಯೊಂದು ಹಂತವೂ ಮಾನವನ ಜೀವನವನ್ನು ಸುಲಭಗೊಳಿಸಿದೆ. ಆದರೆ ಇತ್ತೀಚಿನ ವರ್ಷದಲ್ಲಿ “ತಂತ್ರಜ್ಞಾನ ಸೃಜನಶೀಲತೆಯ ಅವಸಾನ” ಎಂಬ ಚರ್ಚೆ ಗಂಭೀರವಾಗಿ ನಡೆಯುತ್ತಿದೆ. ತಂತ್ರಜ್ಞಾನ ಎಂದರೆ ವೈಜ್ಞಾನಿಕ ಜ್ಞಾನವನ್ನು ಬಳಸಿ ವಸ್ತುಗಳು, ಯಂತ್ರಗಳು, ಉಪಕರಣಗಳು ಮತ್ತು ತಂತ್ರಗಳನ್ನು ಸೃಷ್ಟಿಸಿ ಹೊಸ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಅಸ್ತಿತ್ವದಲ್ಲಿರುವ ಪರಿಹಾರಗಳನ್ನು ಸುಧಾರಿಸಲು ಬಳಸುವ ಪ್ರಕ್ರಿಯೆಯಾಗಿದೆ. ಇಂದಿನ 21ನೇ ಶತಮಾನದ ಯುಗವನ್ನು ತಂತ್ರಜ್ಞಾನದ ಯುಗ ಎಂದು ಕರೆಯಲಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವ ಬದುಕಿನಲ್ಲಿ ಅಪಾರ ಬದಲಾವಣೆಗಳನ್ನು ತಂದಿದೆ. ಒಂದು ಕಡೆ ತಂತ್ರಜ್ಞಾನದ ವೇಗದ ಬೆಳವಣಿಗೆಗಳು, ಮಾನವನ ಜೀವನವನ್ನು ಸುಗಮಗೊಳಿಸಿದರೆ, ಮತ್ತೊಂದು ಕಡೆ ಅದು ಮಾನವನ ಸಹಜ ಸೃಜನಶೀಲತೆಯನ್ನು ನಿಧಾನವಾಗಿ ಕುಗ್ಗಿಸುತ್ತಿರುವುದನ್ನು ಕಾಣಬಹುದು. ಇದು ಸಮಾಜದ ಪ್ರಗತಿಗೆ ಮತ್ತು ಮಾನವನ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ದೈನಂದಿನ ಕ್ರಿಯೆಗಳು, ಸಂವಹನ, ವಿದ್ಯೆ, ಕೆಲಸ, ಮನರಂಜನೆ ಎಲ್ಲವೂ ತಂತ್ರಜ್ಞಾನದಿಂದ ಪ್ರೇರೇಪಿತವಾಗಿದೆ. ಆದರೆ ಇದು ಮನುಷ್ಯನ ವಿಚಾರ ಶಕ್ತಿಯನ್ನು ಕಳೆದುಕೊಳ್ಳುವ ಹಾಗೆ ಮಾಡುತ್ತಿದೆ ಹಾಗೂ ಸಂಪನ್ಮೂಲಗಳ ಸವಕಳಿಯಂತಹ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತಿರುವ ರೀತಿಯನ್ನು ನಾವು ಕಾಣಬಹುದಾಗಿದೆ.

Article Details

Section

Research Articles

Author Biography

ಶುಭಾಂಗಿ ಅಶೋಕ ಕುಂಬಾರ್

ಬಿ.ಎಸ್ಸಿ- 3ನೇ ಸೆಮಿಸ್ಟರ್, ಕೆ.ಎಲ್.ಇ ಸಂಸ್ಥೆಯ ಜಿ.ಐ. ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ನಿಪ್ಪಾಣಿ.

 

How to Cite

ಶುಭಾಂಗಿ ಅಶೋಕ ಕುಂಬಾರ್. (2025). ತಂತ್ರಜ್ಞಾನ ಮತ್ತು ಸೃಜನಶೀಲತೆಯ ಅವಸಾನ. ಅಕ್ಷರಸೂರ್ಯ (AKSHARASURYA), 8(02), 169 to 173. https://aksharasurya.com/index.php/latest/article/view/1404

References

ಶಿವಕುಮಾರ್ ಎಸ್.ಕೆ, (2018), ಶೈಕ್ಷಣಿಕ ತಂತ್ರಜ್ಞಾನ, ವಿಸ್ಮಯ ಪ್ರಕಾಶನ, ಬೆಂಗಳೂರು.

ಸುರೇಶ ಕೆ.ಎಂ., (2024, 09) ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಸ್ಪರ್ಧಾ ವಿಜೇತ ಪ್ರಕಾಶನ, ಬೆಂಗಳೂರು.

ಪದ್ಮಪ್ರಸಾದ ಎಸ್.ಪಿ., (2019), ಶಿಕ್ಷಣದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ, ಅನನ್ಯ ಪ್ರಕಾಶನ, ತುಮಕೂರು.