ಹೊಸ ವಿಳಾಸದ ಹೆಜ್ಜೆಗಳು: ಸಾಮಾಜಿಕ ತಲ್ಲಣಗಳು
Main Article Content
Abstract
ಸಾಮಾಜಿಕ ತಲ್ಲಣಗಳನ್ನು ಪ್ರತಿಬಿಂಬಿಸುವ ಕಾವ್ಯ ಕನ್ನಡ ಸಾಹಿತ್ಯದಲ್ಲಿ ಹೊಸ ಹಾದಿಯನ್ನು ತೆರೆಯುತ್ತಿದೆ. ಡಾ. ಸಂತೋಷ ನಾಯಕ್ ಅವರ “ಹೊಸ ವಿಳಾಸದ ಹೆಜ್ಜೆಗಳು” ಕವನ ಸಂಕಲನವು ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳು, ಶಾಂತಿ, ಸಹಜೀವನ, ಸ್ತ್ರೀಪರ ಸಂವೇದನೆ ಮತ್ತು ಧಾರ್ಮಿಕ ಶೋಷಣೆಯ ವಿರುದ್ಧದ ಆಕ್ರೋಶಗಳನ್ನು ಪ್ರತಿಬಿಂಬಿಸುತ್ತದೆ. ಈ ಸಂಕಲನದಲ್ಲಿ ಕವಿ ಮೌನ ಮುರಿಯುವ ಪ್ರಯತ್ನ ಮಾಡುತ್ತಾ ಸಾಮಾಜಿಕ ಬದಲಾವಣೆಯ ಅವಶ್ಯಕತೆಯನ್ನು ಕವಿತೆಗಳ ಮೂಲಕ ಅಭಿವ್ಯಕ್ತಿಸುತ್ತಾರೆ. ಪಾರಿವಾಳದ ಪ್ರತೀಕದ ಮೂಲಕ ಶಾಂತಿ ಮತ್ತು ಸಹಜೀವನದ ಸಂದೇಶವನ್ನು ಹರಡುವ ಈ ಕಾವ್ಯ, ಸಾಮಾಜಿಕವಾಗಿ ಶೋಷಿತ ಜನರ ನೋವು, ಸಂಕಟ, ಆಶಾಭಾವನೆಗಳನ್ನು ಶಕ್ತಿ ತುಂಬಿದ ಸ್ವರದಲ್ಲಿ ಹೊರಹಾಕುತ್ತದೆ. ಧರ್ಮ, ಸಂಪ್ರದಾಯ, ಪಿತೃತ್ವದ ಹೆಸರಿನಲ್ಲಿ ನಡೆಯುವ ಶೋಷಣೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೃತಿಯಾಗಿ ಇದು ಗುರುತಿಸಿಕೊಳ್ಳುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸಂತೋಷ ನಾಯಕ್, (2022), ಹೊಸ ವಿಳಾಸದ ಹೆಜ್ಜೆಗಳು, ಯಾಜಿ ಪ್ರಕಾಶನ, ಬಾಗಲಕೋಟೆ.
ಪುಷ್ಪ ಎಚ್.ಎಲ್., (2023), ಸಾಮರಸ್ಯ ಧ್ಯಾನಿಸುವ ಸಾಲುಗಳು, ಉದಯಕಾಲ ಪತ್ರಿಕೆ ಲೇಖನ.
ನಾಗೇಶ ಜೆ. ನಾಯಕ್, (2023), ಹಗೆ ಮರೆತರೆ ನಗೆ ತೋಟ ನಲಿವುದು ವಿಮರ್ಶಕರು, ಉದಯಕಾಲ ಪತ್ರಿಕೆ ಲೇಖನ.
ನಾಗರೇಖಾ ಗಾಂವಕರ, (2023), ಹೊಸ ವಿಳಾಸದ ಹೆಜ್ಜೆಗಳು, ವಿಶ್ವಧ್ವನಿ ಆನ್‌ಲೈನ್ ಪತ್ರಿಕೆ.