ಆಧುನಿಕ ಕಾವ್ಯದಲ್ಲಿ ಮಹಿಳಾ ಸಂವೇದನೆ
Main Article Content
Abstract
ಆಧುನಿಕ ಕನ್ನಡ ಕಾವ್ಯದಲ್ಲಿ ಮಹಿಳೆಯ ಸಂವೇದನೆ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. ಪುರಾತನ ಕಾಲದಿಂದ ಮಹಿಳೆಯನ್ನು ಸಮಾಜವು ಚಾರಿತ್ರಿಕ ದಾಖಲೆಗಳಿಂದ ದೂರವಿಟ್ಟು ಮೌನಗೊಳಿಸಿದ್ದರೆ, ಆಧುನಿಕ ಕಾಲದಲ್ಲಿ ಆಕೆ ತನ್ನ ಸ್ವರವನ್ನು ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧ ಎತ್ತಿಕೊಂಡಿದ್ದಾಳೆ. ತನ್ನ ಬದುಕಿನ ನೋವು, ಸಂಕಟ, ಅನ್ಯಾಯ, ಶೋಷಣೆ ಮತ್ತು ಪ್ರತಿರೋಧವನ್ನು ಕಾವ್ಯದ ಮೂಲಕ ವ್ಯಕ್ತಪಡಿಸುತ್ತಿದ್ದಾಳೆ. ಮಹಿಳಾ ಕಾವ್ಯವು ಕೇವಲ ಪುರುಷ ವಿರೋಧಿ ಧೋರಣೆಯಲ್ಲ, ಬದಲಿಗೆ ತನ್ನ ಅಸ್ತಿತ್ವವನ್ನು ದೃಢಪಡಿಸುವ, ಬದುಕನ್ನು ತನ್ನ ದೃಷ್ಟಿಕೋನದಿಂದ ನೋಡುವ ಸಾಹಿತ್ಯದ ಹಾದಿಯಾಗಿದೆ. ಆಧುನಿಕ ಮಹಿಳಾ ಕವಿಗಳು ತಮ್ಮ ಕಾವ್ಯದಲ್ಲಿ ಶೋಷಣೆ, ಲೈಂಗಿಕ ದೌರ್ಜನ್ಯ, ಭಯ, ಸಾಮಾಜಿಕ ಅನ್ಯಾಯಗಳ ಕುರಿತ ಕಳವಳವನ್ನು ಬಿಂಬಿಸುತ್ತಾರೆ. ಈ ಸಾಹಿತ್ಯ ಮಹಿಳೆಯ ಆತ್ಮವಿಶ್ವಾಸಕ್ಕೆ, ಸಾಮಾಜಿಕ ಹೋರಾಟಕ್ಕೆ ಮತ್ತು ಸಾಹಿತ್ಯದ ಪ್ರಾಧಾನ್ಯತೆಗೂ ದಾರಿ ತೋರಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬಲಭೀಮ, (2020), ಮಹಿಳಾ ಸಂವೇದನೆ, ಲಿಖಿತ ಪ್ರಕಾಶನ, ಹಾಸನ.
ಶರೀಫಾ ಕೆ., (2020), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಶಕುಂತಲಾ ದುರಗಿ, (2019), ಮಹಿಳಾ ಸಾಹಿತ್ಯ ಮತ್ತು ಸಂವೇದನೆ, ಸಮನ್ವಯ ಪ್ರಕಾಶನ, ಕಲಬುರಗಿ.
ಮಲ್ಲಿಕಾ ಘಂಟಿ, (2020), ಸ್ತ್ರೀವಾದಿ ಚಿಂತನೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.