ಆಧುನಿಕ ಮಾಧ್ಯಮಗಳಲ್ಲಿ ಸಂತ ಶಿಶುನಾಳ ಶರೀಫರು

Main Article Content

ಮಹೇಶ ಅಂಗಡಿ

Abstract

ಸಂತ ಶಿಶುನಾಳ ಶರೀಫರು ಕರ್ನಾಟಕದ ಜನಮನಗಳನ್ನು ಗೆದ್ದ ತತ್ವಜ್ಞಾನಿ, ಕವಿ ಹಾಗೂ ಸಮಾಜ ಸೇವಕರಾಗಿದ್ದಾರೆ. ಅವರ ತತ್ವಪದಗಳು ಸರಳತೆ, ಸಾಂದ್ರತೆ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡುವ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತವೆ. ಈ ಚಿಂತನೆಗಳು ಕೇವಲ ಮಠಮಂದಿರಗಳಲ್ಲದೆ ಆಧುನಿಕ ಮಾಧ್ಯಮಗಳ ಮೂಲಕವೂ ವ್ಯಾಪಕವಾಗಿ ಹರಡಿವೆ. ಆಕಾಶವಾಣಿ (ರೇಡಿಯೋ) ಮೂಲಕ ಶರೀಫರ ತತ್ವಪದಗಳು ಜನಪದ ಗೀತೆ, ಸುಗಮ ಸಂಗೀತ, ಭಜನೆ ಹಾಗೂ ನಾಟಕ ರೂಪಕಗಳಲ್ಲಿ ಪ್ರಸಾರಗೊಂಡು ಜನಮನೆಗಳಿಗೆ ತಲುಪಿವೆ. ದೂರದರ್ಶನದಲ್ಲಿ ʼಈಶ್ವರ ಅಲ್ಲಾ ನೀನೇ ಎಲ್ಲಾʼ ಧಾರಾವಾಹಿ ಹಾಗೂ ʼತತ್ವರಸಾಯನʼ ಕಾರ್ಯಕ್ರಮಗಳ ಮೂಲಕ ಶರೀಫರ ಜೀವನ ಹಾಗೂ ತತ್ವಗಳನ್ನು ದೃಶ್ಯರೂಪದಲ್ಲಿ ಪ್ರೇಕ್ಷಕರು ಕಂಡಿದ್ದಾರೆ. ಚಲನಚಿತ್ರ ಮಾಧ್ಯಮದ ಮೂಲಕ ಟಿ.ಎಸ್.ನಾಗಾಭರಣ ನಿರ್ದೇಶಿಸಿದ ʼಸಂತ ಶಿಶುನಾಳ ಶರೀಫʼ ಚಿತ್ರವು ಅವರ ತತ್ವಪದಗಳನ್ನು ಜೀವಂತಗೊಳಿಸಿ ಅಂತರಾಷ್ಟ್ರೀಯ ಮಟ್ಟದ ಮೆಚ್ಚುಗೆಯನ್ನೂ ಪಡೆದಿದೆ. ಹೀಗಾಗಿ, ಆಧುನಿಕ ಮಾಧ್ಯಮಗಳು ಶಿಶುನಾಳ ಶರೀಫರ ಸಂದೇಶವನ್ನು ಇಂದಿನ ಪೀಳಿಗೆಗೂ ತಲುಪಿಸುವಲ್ಲಿ ಶ್ರೇಷ್ಠ ಪಾತ್ರ ವಹಿಸಿವೆಯೆಂದು ಹೇಳಬಹುದು.

Article Details

Section

Research Articles

Author Biography

ಮಹೇಶ ಅಂಗಡಿ

ಕನ್ನಡ ಉಪನ್ಯಾಸಕರು, ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ, ಸಂಶಿ.

How to Cite

ಮಹೇಶ ಅಂಗಡಿ. (2025). ಆಧುನಿಕ ಮಾಧ್ಯಮಗಳಲ್ಲಿ ಸಂತ ಶಿಶುನಾಳ ಶರೀಫರು. ಅಕ್ಷರಸೂರ್ಯ (AKSHARASURYA), 8(02), 125 to 141. https://aksharasurya.com/index.php/latest/article/view/1399

References

ಶಿವಾನಂದ ಗುಬ್ಬಣ್ಣವರ (ಸಂ), (1981), ಬರಕೋ ಪದ ಬರಕೋ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಶಿವಾನಂದ ಗುಬ್ಬಣ್ಣನವರ, (1992), ಶಿಶುನಾಳ ಶರೀಫ್ ಸಾಹೇಬರು, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಹಗಡ ಜಿ. ಎಂ, (1997), ಶ್ರೀ ಶಿಶುನಾಳ ಶರೀಫರ ತತ್ವಪದಗಳು, ಪುಸ್ತಕ ಲೋಕ, ಧಾರವಾಡ.

ಹಡಗಲಿ ಜೆ.ಎ, (2009), ಕನ್ನಡ ಹವ್ಯಾಸಿ ರಂಗಭೂಮಿಒಂದು ಅಧ್ಯಯನ, ಚಂದ್ರನಾಥ ಪ್ರಕಾಶನ, ಧಾರವಾಡ.