ಹೊಸ ತಲೆಮಾರಿನ ಬರಹಗಾರರ ತಲ್ಲಣಗಳು
Main Article Content
Abstract
ಬರಹವು ಬರಹಗಾರನ ಆಲೋಚನೆ, ಭಾವನೆ, ಅನುಭವ, ಜ್ಞಾನ ಮತ್ತು ಕಲ್ಪನೆಗಳನ್ನು ಅಕ್ಷರಗಳ ಮೂಲಕ ದಾಖಲಿಸುವ ಪ್ರಕ್ರಿಯೆಯಾಗಿದ್ದು, ಪ್ರತಿಯೊಂದು ಯುಗದಲ್ಲಿಯೂ ಸಾಹಿತ್ಯವು ಸಮಾಜದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಜೀವನದ ಪ್ರತಿಬಿಂಬವಾಗಿದೆ. ಇಂದಿನ ಜಾಗತೀಕರಣ, ತಂತ್ರಜ್ಞಾನ, ಹೊಸ ಮೌಲ್ಯಗಳು, ಸಾಮಾಜಿಕ ಬದಲಾವಣೆ ಹಾಗೂ ಬದುಕಿನ ಒತ್ತಡಗಳು ಹೊಸ ತಲೆಮಾರಿನ ಬರಹಗಾರರಿಗೆ ಹಲವು ತಲ್ಲಣಗಳನ್ನು ಉಂಟುಮಾಡಿವೆ. ಏನು ಬರೆಯಬೇಕು? ಯಾರಿಗಾಗಿ ಬರೆಯಬೇಕು? ಯಾವ ಭಾಷೆಯಲ್ಲಿ ಬರೆಯಬೇಕು? ಪುಸ್ತಕ ರೂಪದಲ್ಲಾ ಅಥವಾ ಡಿಜಿಟಲ್ ವೇದಿಕೆಯಲ್ಲಿ ಬರೆಯಬೇಕಾ? ಎಂಬ ಪ್ರಶ್ನೆಗಳು ಇವರ ಮುಂದೆ ನಿಂತಿವೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಜಗತ್ತು, ಮಾರುಕಟ್ಟೆ ಧೋರಣೆಗಳು, ಭಾಷಾಸಾಮಾಜಿಕ ಅಸಮಾನತೆಗಳು, ಪ್ರಶಸ್ತಿಗಳ ರಾಜಕೀಯ – ಇವುಗಳೆಲ್ಲ ಬರಹಗಾರರಲ್ಲಿ ಗೊಂದಲವನ್ನು ಸೃಷ್ಟಿಸುತ್ತವೆ. ಆದರೂ ಈ ತಲ್ಲಣಗಳೇ ಸೃಜನಶೀಲತೆಗೆ ಚಿಲುಮೆಗಳಾಗಿ ಹೊಸ ಸಾಹಿತ್ಯ ಪರಂಪರೆಯನ್ನು ರೂಪಿಸುತ್ತಿವೆ. ಇಂದಿನ ಬರಹಗಾರರು ಲಿಂಗಸಮಾನತೆ, ಮಾನವ ಹಕ್ಕುಗಳು, ಪರಿಸರ ಸಂರಕ್ಷಣೆ, ಮಾನಸಿಕ ಆರೋಗ್ಯ, ಜಾಗತೀಕರಣ ಮುಂತಾದ ಪ್ರಸ್ತುತ ವಿಷಯಾಧಾರಿತ ಸಾಹಿತ್ಯವನ್ನು ಸೃಷ್ಟಿಸುತ್ತಿದ್ದು, ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರಿಸುತ್ತಿದ್ದಾರೆ. ಹೀಗಾಗಿ, ಹೊಸ ತಲೆಮಾರಿನ ಬರಹಗಾರರ ತಲ್ಲಣಗಳು ಸಾಹಿತ್ಯದ ಸ್ಥಗಿತವಲ್ಲ; ಅದು ಸಾಹಿತ್ಯ ಸೃಷ್ಟಿಯ ಹೊಸ ಮಾರ್ಗದ ಸೂಚನೆಯಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅನಂತಮೂರ್ತಿ ಯು.ಆರ್., (1965), ಸಂಸ್ಕಾರ, ಅಕ್ಷರ ಪ್ರಕಾಶನ, ಸಾಗರ.
ಮುಗಳಿ ರಂ.ಶ್ರೀ., (1953), ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್ ಹೌಸ್, ಮೈಸೂರು.
ನಿಂಗಣ್ಣ ಚಿ.ಸಿ., (2017), ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ.