ಹೈದರಬಾದ್ ಕರ್ನಾಟಕ ಆಧುನಿಕ ವಚನ ಸಾಹಿತ್ಯ

Main Article Content

ಮಲ್ಲಯ್ಯ

Abstract

ಹನ್ನೆರಡನೆಯ ಶತಮಾನದಲ್ಲಿ ಶರಣರು ರೂಪಿಸಿದ ವಚನ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಸಮಾಜೋದ್ಧಾರಕ, ಧಾರ್ಮಿಕ ಕ್ರಾಂತಿಕಾರಕ ಹಾದಿಯನ್ನು ತೋರಿಸಿತು. ಆ ಪರಂಪರೆಯ ಪ್ರಭಾವದಿಂದ ಆಧುನಿಕ ಕಾಲದಲ್ಲಿಯೂ ಹೊಸ ರೂಪ, ಹೊಸ ಚಿಂತನೆಗಳನ್ನು ಪ್ರತಿಬಿಂಬಿಸುವ ಆಧುನಿಕ ವಚನ ಸಾಹಿತ್ಯ ಹುಟ್ಟಿಕೊಂಡಿದೆ. ವಿಶೇಷವಾಗಿ ಹೈದರಬಾದ್ ಕರ್ನಾಟಕ ಪ್ರದೇಶದಲ್ಲಿ ಸಮಾಜದ ನಾನಾ ವರ್ಗಗಳ ವ್ಯಕ್ತಿಗಳು; ಸಾಹಿತಿಗಳು, ಶಿಕ್ಷಕರು, ವೃತ್ತಿಜೀವಿಗಳು, ಮಹಿಳೆಯರು, ಮಠಾಧೀಶರು, ಕವಿಗಳು, ವಕೀಲರು ಮುಂತಾದವರು, ತಮ್ಮ ಅನುಭವ, ಸಂವೇದನೆ, ಚಿಂತನೆಗಳನ್ನು ಆಧುನಿಕ ವಚನಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಧರ್ಮಆಧ್ಯಾತ್ಮಕ್ಕಿಂತ ಸಾಮಾಜಿಕ ಜಾಗೃತಿ, ಮಾನವೀಯ ಮೌಲ್ಯಗಳು, ಸಮಾನತೆ, ವಿಜ್ಞಾನ, ಶಿಕ್ಷಣ, ಶೋಷಣೆ ವಿರುದ್ಧದ ಬಂಡಾಯದ ಧ್ವನಿಗಳು ಹೆಚ್ಚು ಒತ್ತು ಪಡೆದಿವೆ. ಡಾ.ಸಿದ್ಧಯ್ಯ ಪುರಾಣಿಕ, ಡಾ.ಶೈಲಜಾ ಉಡಚಣ, ಡಾ.ಚನ್ನಣ್ಣ ವಾಲೀಕಾರ, ಡಾ.ಕೆ.ಬಿ.ಬ್ಯಾಳಿ, ಸತ್ಯಜ್ಞ, ಬಿ.ಎಸ್.ಖುಬಾ ಮುಂತಾದ ವಚನಕಾರರು ಹೊಸ ದಾರಿಯನ್ನು ತೆರೆದಿದ್ದಾರೆ. ಇವರು ವಚನದ ಮೂಲ ಪರಂಪರೆಯನ್ನು ಅನುಸರಿಸಿದರೂ ಅದಕ್ಕೆ ಆಧುನಿಕ ರೂಪ, ಶೈಲಿ, ವೈಜ್ಞಾನಿಕತೆ, ಸಾಮಾಜಿಕ ಪ್ರಜ್ಞೆಯನ್ನು ತುಂಬಿದ್ದಾರೆ. ಹೈದರಬಾದ್ ಕರ್ನಾಟಕದ ಆಧುನಿಕ ವಚನ ಸಾಹಿತ್ಯವು ಕನ್ನಡ ನಾಡಿನ ಆಧುನಿಕ ವಚನ ಚಳವಳಿಗೆ ಪ್ರಾದೇಶಿಕ ವೈಶಿಷ್ಟ್ಯವನ್ನು ನೀಡುವುದರೊಂದಿಗೆ ಭವಿಷ್ಯದ ಅಧ್ಯಯನಕ್ಕೆ ಸಮೃದ್ಧ ನೆಲೆಯನ್ನು ಒದಗಿಸಿದೆ.

Article Details

Section

Research Articles

Author Biography

ಮಲ್ಲಯ್ಯ

ಕನ್ನಡ ಸಹ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜ್, ದೇವದುರ್ಗ, ರಾಯಚೂರು.

How to Cite

ಮಲ್ಲಯ್ಯ. (2025). ಹೈದರಬಾದ್ ಕರ್ನಾಟಕ ಆಧುನಿಕ ವಚನ ಸಾಹಿತ್ಯ. ಅಕ್ಷರಸೂರ್ಯ (AKSHARASURYA), 8(02), 101 to 110. https://aksharasurya.com/index.php/latest/article/view/1396

References

ಬುಳ್ಳಾ ಎನ್.ಬಿ., (2000), ಸಿದ್ಧಯ್ಯ ಪುರಾಣಿಕ ಜೀವನ ಸಾಹಿತ್ಯ, ಜ್ಯೋತಿಶ್ರೀ ಪ್ರಕಾಶನ, ಕಲಬುರಗಿ.

ನೀಲಮ್ಮ ಕತ್ನಳ್ಳಿ, (2000), ಮಹಾದೇವ ಬಣಕಾರ ಜೀವನ ಸಾಹಿತ್ಯ, ಶಹಬಾದ ಪ್ರಕಾಶನ, ಕಲಬುರಗಿ.

ಗವಿಸಿದ್ಧಪ್ಪ ಪಾಟೀಲ, (2015), ಆಧುನಿಕ ವಚನ ಸಿರಿ, ಮೇಘಾ ಪಬ್ಲಿಕೇಷನ್ಸ್, ಬೆಂಗಳೂರು.

ಗವಿಸಿದ್ಧಪ್ಪ ಪಾಟೀಲ, (2016), ತನು ಸವೆದಂತೆ ಆಧುನಿಕ ವಚನ ಸಂಕಲನ, ಸಾಕ್ಷಿ ಪ್ರತಿಷ್ಠಾನ, ಹುಮನಾಬಾದ.