ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ಬಸವಣ್ಣನವರು: ಒಂದು ಅವಲೋಕನ

Main Article Content

ಮಹಾದೇವಪ್ಪ ಕೊಪ್ಪದ
ಎಸ್.ಎಂ.ಗಂಗಾಧರಯ್ಯ

Abstract

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಸವಣ್ಣನವರು ಅನನ್ಯ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ. ವಚನ ಸಾಹಿತ್ಯದ ಮೂಲಕ ಸಮಾಜಮುಖಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ರಾಂತಿಯನ್ನು ಸೃಷ್ಟಿಸಿದ ಬಸವಣ್ಣನವರ ಜೀವನ ಮತ್ತು ಸಾಧನೆಗಳು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅನಾವರಣಗೊಂಡಿವೆ. ವಿಶೇಷವಾಗಿ ಕಾದಂಬರಿ ಪ್ರಕಾರದಲ್ಲಿ ಬಸವಣ್ಣನವರ ಬದುಕು, ತತ್ವ, ಆಧ್ಯಾತ್ಮಿಕ ಸಾಧನೆಗಳು, ಸಾಮಾಜಿಕ ಸುಧಾರಣಾ ಚಳವಳಿಗಳು ಹಾಗೂ ಅನುಭವ ಮಂಟಪದ ಚಟುವಟಿಕೆಗಳನ್ನು ಆಧಾರವಾಗಿಸಿಕೊಂಡು ಹಲವಾರು ಕೃತಿಕಾರರು ಕಾದಂಬರಿಗಳನ್ನು ರಚಿಸಿದ್ದಾರೆ. ದಿ.ಬಿ.ಪುಟ್ಟಸ್ವಾಮಯ್ಯ, ಡಾ. ಎಚ್.ತಿಪ್ಪೇರುದ್ರಸ್ವಾಮಿ, ಜಿ.ಹೆಚ್.ಹನ್ನೆರಡುಮಠ, ಲಕ್ಕಪ್ಪ ಅ. ಶಿರಹಟ್ಟಿ, ಶಾಂತಾದೇವಿ ಮಾಳವಾಡ, ಮಂಗಾಪುರಮಠ ಚಂದ್ರಶೇಖರಶಾಸ್ತ್ರಿ ಮುಂತಾದ ಕಾದಂಬರಿಕಾರರು ಬಸವಣ್ಣನವರ ಚರಿತ್ರೆಯನ್ನು ವೈವಿಧ್ಯಮಯ ದೃಷ್ಟಿಕೋನಗಳಿಂದ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಗಳಲ್ಲಿ ಬಸವಣ್ಣನವರ ರಾಜಕೀಯ, ಧಾರ್ಮಿಕ, ಸಾಮಾಜಿಕ, ತತ್ವಜ್ಞಾನಿ ಹಾಗೂ ಪವಾಡಪುರುಷ ಎಂಬ ಅಂಶಗಳು ಪ್ರಬಲವಾಗಿ ವ್ಯಕ್ತವಾಗಿವೆ. ಹೀಗಾಗಿ, ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ಬಸವಣ್ಣನವರ ವ್ಯಕ್ತಿತ್ವವು ಸಮಗ್ರವಾಗಿ ಪ್ರತಿಬಿಂಬಿತವಾಗಿದೆ ಎಂಬುದನ್ನು ಈ ಅವಲೋಕನ ಸ್ಪಷ್ಟಪಡಿಸುತ್ತದೆ.

Article Details

Section

Research Articles

Author Biographies

ಮಹಾದೇವಪ್ಪ ಕೊಪ್ಪದ

ಸಂಶೋಧನಾ ವಿದ್ಯಾರ್ಥಿ ಹಾಗೂ ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ, ಬೈಲಹೊಂಗಲ, ಬೆಳಗಾವಿ.

ಎಸ್.ಎಂ.ಗಂಗಾಧರಯ್ಯ

ಪ್ರಾಧ್ಯಾಪಕರು ಹಾಗೂ ನಿರ್ದೇಶಕರು, ಫ. ಗು. ಹಳಕಟ್ಟಿ ಸ್ನಾತಕೋತ್ತರ ಅಧ್ಯಯನ ಕೇಂದ್ರ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

How to Cite

ಮಹಾದೇವಪ್ಪ ಕೊಪ್ಪದ, & ಎಸ್.ಎಂ.ಗಂಗಾಧರಯ್ಯ. (2025). ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ಬಸವಣ್ಣನವರು: ಒಂದು ಅವಲೋಕನ. ಅಕ್ಷರಸೂರ್ಯ (AKSHARASURYA), 8(02), 93 to 100. https://aksharasurya.com/index.php/latest/article/view/1395

References

ಪುಟ್ಟಸ್ವಾಮಯ್ಯನವರ ಬಿ., (2013), ಉದಯರವಿ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ಪುಟ್ಟಸ್ವಾಮಯ್ಯನವರ ಬಿ., (2013), ರಾಜ್ಯಪಾಲ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ಪುಟ್ಟಸ್ವಾಮಯ್ಯನವರ ಬಿ., (2013), ಕಲ್ಯಾಣೇಶ್ವರ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ಪುಟ್ಟಸ್ವಾಮಯ್ಯನವರ ಬಿ., (2013), ನಾಗಬಂಧ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ಪುಟ್ಟಸ್ವಾಮಯ್ಯನವರ ಬಿ., (2013), ಮುಗಿಯದ ಕನಸು, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ಪುಟ್ಟಸ್ವಾಮಯ್ಯನವರ ಬಿ., (2013), ಕ್ರಾಂತಿ ಕಲ್ಯಾಣ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ತಿಪ್ಪೇರುದ್ರಸ್ವಾಮಿಯವರ ಎಚ್., (2000), ಕರ್ತಾರನ ಕಮ್ಮಟ, ಸಿದ್ಧಗಂಗಾ ಪ್ರಕಾಶನ, ತುಮಕೂರು.

ಶಾಂತಾದೇವಿ ಮಾಳವಾಡ, (2013), ಬಸವ ಪ್ರಕಾಶ, ಸುರುಚಿ ಪ್ರಕಾಶನ, ಮೈಸೂರು.

ಚಂದ್ರಶೇಖರ ಶಾಸ್ತ್ರಿ, (1979), ಶಿವಶರಣ ಸಾಮ್ರಾಟ್ ಬಸವಣ್ಣ, ಶಿವಕಾಶಿ ಪ್ರಕಾಶನ, ಬೆಂಗಳೂರು.

ಚಿದಾನಂದಪ್ಪ ಎಂ.ಆರ್., (2020), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬಸವಣ್ಣ, ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.

ಗುಂಜಾಳ ಎಸ್.ಆರ್., (1967), ಬಸವ ಸಾಹಿತ್ಯ ದರ್ಪಣ, ಬಸವ ಸಮಿತಿ, ಬೆಂಗಳೂರು.