ಆಧುನಿಕ ಯುಗದಲ್ಲಿ ರಾಜ್ಯಶಾಸ್ತ್ರ ಮತ್ತು ಕನ್ನಡ ಸಾಹಿತ್ಯದಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯ
Main Article Content
Abstract
ಅಭಿವ್ಯಕ್ತಿಯ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿದ್ದು, ಸಾಹಿತ್ಯ ಮತ್ತು ರಾಜಕೀಯ ಎರಡರಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಕನ್ನಡ ಸಾಹಿತ್ಯದಲ್ಲಿ ಸಮಾಜದ ದುರ್ಬಲತೆಗಳನ್ನು, ಅಸಮಾನತೆಯನ್ನು, ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ ಅಭಿವ್ಯಕ್ತಿಗಳು ವಚನಸಾಹಿತ್ಯದಿಂದ ಇಂದಿನ ಆಧುನಿಕ ಬರಹಗಳವರೆಗೂ ಕಾಣಿಸಿಕೊಳ್ಳುತ್ತವೆ. ಇತ್ತ, ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಇಸಾಹಿತ್ಯವು ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಹೊಸ ದಾರಿ ತೆರೆದಿದ್ದರೂ, ಅದೇ ಸಮಯದಲ್ಲಿ ನಿರ್ಬಂಧಗಳು, ಸೆನ್ಸರ್ ಪ್ರಕ್ರಿಯೆಗಳು ಮತ್ತು ಮಾಹಿತಿಯ ದುರುಪಯೋಗವು ಹೊಸ ಸವಾಲುಗಳನ್ನೂ ತಂದುಕೊಟ್ಟಿವೆ.
ರಾಜ್ಯಶಾಸ್ತ್ರದ ದೃಷ್ಟಿಯಿಂದ, ಅಭಿವ್ಯಕ್ತಿಯ ಸ್ವಾತಂತ್ರ್ಯವು ಕೇವಲ ಸಂವಿಧಾನಿಕ ಹಕ್ಕಾಗಿಯೇ ಅಲ್ಲ, ಸಮಗ್ರ ನಾಗರಿಕ ಸಮಾಜದ ಬೆಳವಣಿಗೆಯ ಅಸ್ತಿತ್ವವಾದುದು. ಕನ್ನಡ ಸಾಹಿತ್ಯವು ಈ ಹಕ್ಕಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳನ್ನು ಅನಾವರಣಗೊಳಿಸುವ ಮಹತ್ವದ ಮಾಧ್ಯಮವಾಗಿದೆ. ತಂತ್ರಜ್ಞಾನವು ಇದಕ್ಕೆ ವೇಗ ಮತ್ತು ವ್ಯಾಪ್ತಿ ನೀಡಿದರೆ, ರಾಜಕೀಯ ವ್ಯವಸ್ಥೆಯು ಅದಕ್ಕೆ ದಿಕ್ಕು ಮತ್ತು ನಿಯಂತ್ರಣ ನೀಡುತ್ತದೆ. ಈ ಲೇಖನವು ಆಧುನಿಕತೆ, ರಾಜ್ಯಶಾಸ್ತ್ರ ಮತ್ತು ಕನ್ನಡ ಸಾಹಿತ್ಯದ ಸಮ್ಮಿಲನದಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯದ ಸ್ಥಿತಿ, ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಗುಂಡಪ್ಪ ಡಿ. ವಿ., (2021), ರಾಜ್ಯಶಾಸ್ತ್ರ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.
ಗಂಗಾಧರ ಪಿ. ಎಸ್., ಡಾ., (2021), ಸಮಗ್ರ ರಾಜ್ಯಶಾಸ್ತ್ರ, ಮೈಸೂರ ಬುಕ್ ಹೌಸ್, ಮೈಸೂರು.
ರಾಜಶೇಖರ್ ಎಚ್. ಎಂ., (2000), ಭಾರತ ಸರ್ಕಾರ ಮತ್ತು ರಾಜಕೀಯ, ಕಿರಣ ಪ್ರಕಾಶನ, ಮೈಸೂರು.
ಹಿರೇಮಠ ಬಿ.ಎಸ್., (2007), ಸುವರ್ಣ ಕರ್ನಾಟಕ ದರ್ಶನ, ವಿದ್ಯಾ ಪಬ್ಲಿಷಿಂಗ್ ಹೌಸ್, ಬೆಂಗಳೂರು.
ಸಾಂಬಮೂರ್ತಿ (ಸಂ), (2009), ಭಾಷಾ ತಂತ್ರಜ್ಞಾನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.
ತಿಪ್ಪೇರುದ್ರಸ್ವಾಮಿ ಎಚ್., (2016), ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಡಿ.ವಿ.ಕೆ ಮೂರ್ತಿ ಪ್ರಕಾಶನ, ಕೃಷ್ಣಮೂರ್ತಿಪುರಂ, ಮೈಸೂರು04.
ಅನಂತರಾಮು ಟಿ.ಆರ್., (2020), ವಿಜ್ಞಾನ ತಂತ್ರಜ್ಞಾನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಮಹಾದೇವ ನಾ. ಜೋಶಿ, (2002), ಸಂಸ್ಕೃತ ಸಾಹಿತ್ಯ ಪರಿಚಯ, ರೂಪಾ ಪ್ರಕಾಶನ, ಧಾರವಾಡ.