ಬೀಜದಿಂದ ಹೆಮ್ಮರವಾದ ಕನ್ನಡ ಸಾಹಿತ್ಯ ಚರಿತ್ರೆ
Main Article Content
Abstract
ಒಂದು ಬೀಜದ ಒಳಗೆ ಹಲವು ಮರಗಳ ಸೃಷ್ಟಿ ಅಡಗಿರುತ್ತವೆ. ಅಂದರೆ ಬೀಜವು ಮೊಳಕೆ ಒಡೆದು ಲಕ್ಷಾಂತರ ಸಸ್ಯ ಸಂಕುಲಗಳ ಸೃಷ್ಟಿಗೆ ಕಾರಣೀಭೂತವಾಗಿರುತ್ತದೆ. ಹೇಗೆಂದರೆ ಬೀಜ ಮೊಳಕೆ ಒಡೆದು ಮರವಾಗಿ ಬೆಳೆದು ಲಕ್ಷಾಂತರ ಬೀಜಗಳನ್ನು ಈ ಪ್ರಕೃತಿಗೆ ಕೊಟ್ಟು ಕಗ್ಗಾಡನ್ನು ಸೃಷ್ಟಿಸುವ ಹಾಗೆ ಕನ್ನಡ ಸಾಹಿತ್ಯ ಎಂಬುವುದು ಕೇವಲ ಸಂವಹನ ಭಾಷೆಯಾಗಿರದೆ ಅನೇಕ ರೀತಿಯ ಸಾಹಿತ್ಯ ಪ್ರಕಾರಗಳನ್ನ ತನ್ನೊಳಗೆ ಅಡಗಿಸಿಗೊಂಡು ಬೆಳೆದು ನಿಂತ ಹೆಮ್ಮರದ ಸಾಹಿತ್ಯವಾಗಿದೆ. ಜಗತ್ತಿನ ಇತರೆ ಭಾಷೆಗಳಿಗೆ ಹೋಲಿಸಿದರೆ ವಿಶಿಷ್ಟ ರೀತಿಯ ಸಾಹಿತ್ಯ ಪ್ರಕಾರಗಳು ಕನ್ನಡ ಸಾಹಿತ್ಯದಲ್ಲಿ ಕಂಡುಬರುತ್ತವೆ. ಉದಾಹರಣೆಗೆ: ವಚನ ಸಾಹಿತ್ಯ, ಷಟ್ಪದಿ ಸಾಹಿತ್ಯ, ರಗಳೆ ಸಾಹಿತ್ಯ, ಸಾಂಗತ್ಯ ಇನ್ನು ಅನೇಕ ಸಾಹಿತ್ಯ ಪ್ರಕಾರಗಳು ಅನ್ಯಭಾಷೆಯ ಸಾಹಿತಿಗಳ ಕಲ್ಪನೆಗೂ ನಿಲುಕದ ಸಾಹಿತ್ಯ ರಚನೆಯು ಕನ್ನಡದಲ್ಲಿ ಮೂಡಿ ಬಂದಿದೆ. ಇದು ಕನ್ನಡ ಭಾಷೆಯ ವೈಶಿಷ್ಟ್ಯವಾಗಿದೆ. ಕನ್ನಡ ಭಾಷೆ ಶಿಷ್ಟಸಾಹಿತ್ಯ ಅಷ್ಟೇ ಅಲ್ಲದೆ ಮೌಖಿಕ ಸಾಹಿತ್ಯದಲ್ಲೂ ಸಹ ಅನ್ಯಭಾಷೆಯ ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಎಲ್ಲೂ ಇಲ್ಲದ ಸಾಹಿತ್ಯ ಪ್ರಕಾರಗಳು ಇದರಲ್ಲಿ ಹುಟ್ಟುಕೊಂಡಿವೆ. ಉದಾಹರಣೆ: ಜನಪದ ಗೀತೆಗಳು, ಜನಪದ ಕತೆಗಳು, ಜನಪದ ಪೌರಾಣಿಕ ಕಥೆಗಳು, ಜನಪದ ಒಡಪುಗಳು, ಜನಪದ ಒಗಟುಗಳು, ಜನಪದ ರಂಗರೂಪಗಳು, ಜನಪದ ನಂಬಿಕೆಗಳು, ಜನಪದ ನೃತ್ಯಗಳು, ಜನಪದ ಸಂಗೀತ, ಜನಪದ ಯಕ್ಷಗಾನ, ಜನಪದ ಗೊಂಬೆಯಾಟ ಹೀಗೆ ಇನ್ನು ಮುಂತಾದ ಜನಪದ ಸಾಹಿತ್ಯ ಪ್ರಕಾರಗಳು ಕಂಡುಬರುತ್ತವೆ. ಇದು ಕನ್ನಡ ಭಾಷೆಗೆ ಇರುವ ಶಕ್ತಿ ಅಥವಾ ವೈಶಿಷ್ಟ್ಯದ ಶಕ್ತಿ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶಿವರುದ್ರಪ್ಪ ಜಿ.ಎಸ್., (2013) ಕನ್ನಡ ಸಾಹಿತ್ಯ ಸಮೀಕ್ಷೆ. ಸಪ್ನ ಬುಕ್ ಹೌಸ್, ಬೆಂಗಳೂರು.