ಸಾಹಿತ್ಯದಲ್ಲಿ ಮಾಧ್ಯಮಗಳ ಪ್ರಭಾವ

Main Article Content

ಭಾಗ್ಯಶ್ರೀ ಎಸ್.‌ ಕಲಶೆಟ್ಟಿ

Abstract

ಸಾಹಿತ್ಯ ಒಂದು ಸಾಗರ, ಸಾಗರದಲ್ಲಿ ಧುಮುಕಿ ಈಜುವ ಜೀವನ ಬಹು ಸುಂದರ, ಆನಂದವನ್ನು ಕೊಡುವುದರ ಜೊತೆಗೆ ಮನುಕುಲಕ್ಕೆ ಅಮೃತವನ್ನು ಧಾರೆಯೆರಿಯುವ ಸಾಹಿತ್ಯದ ಕೊಡುಗೆ ಅಪಾರ. ಸಾಹಿತ್ಯದಲ್ಲಿ ನಾನಾ ಪ್ರಕಾರಗಳು. ಅದು ಮನುಷ್ಯನಿಗೆ ಒಂದಿಲ್ಲದ ಒಂದು ರೀತಿ ಆಯುಷ್ಯ ಹೆಚ್ಚಿಸುವ ಸಂಜೀವಿನಿಯಂತೆ. ಸಾಹಿತ್ಯ ಜನರ ನಡುವೆ ಸಂಬಂಧ ಕಲ್ಪಿಸುವ ಅದ್ಭುತ ಸಾಧನ. ಸಾಹಿತ್ಯ, ಸಂಗೀತ, ಯಕ್ಷಗಾನ, ನಾಟಕ, ನೃತ್ಯ, ಇತ್ಯಾದಿಗಳ ಮೂಲಕ ನಂಟು ಏರ್ಪಡುವುದು. ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಜನರು ಸೇರಿ ಸಂತೋಷ ಹಂಚಿಕೊಳ್ಳುತ್ತಿದ್ದರು. ಆದರೆ ಆಧುನಿಕತೆಯಲ್ಲಿ ಸಮೂಹ ಮಾಧ್ಯಮಗಳ ಬಳಕೆಯಿಂದ ಜನರ ನಡುವಿನ ಬಾಂಧವ್ಯ ಮಾಧ್ಯಮಗಳ ಮೂಲಕವೇ ಆಗುತ್ತಿದೆ.
ಸಾಹಿತ್ಯದಲ್ಲಿ ಪಂಪಪೂರ್ವಯುಗದಿಂದಲೂ ಸಾಹಿತ್ಯವಿತ್ತು. ಆದರೆ ಸಮೂಹ ಮಾಧ್ಯಮಗಳ ಬಳಕೆ ಇರಲಿಲ್ಲ. ಆದರೆ ದಂಡಿ, ವಾಮನ, ಅಸಗ, ಗುಣನಂದಿ, ಮುಂದೆ ಬಂದ ಪಂಪ, ಪೊನ್ನ, ರನ್ನ ಸಹೃದಯರಿಗೆ ಕನ್ನಡ ಕಂಪುನ್ನು ಎಲ್ಲಡೆ ಬೀರಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ ವಚನಗಳ ಮೂಲಕ ಸಾಹಿತ್ಯವನ್ನು ಬೆಳೆಸಿದರು. ಆಧುನಿಕತೆಯಲ್ಲಿ ಕುಮಾರವ್ಯಾಸ ಸಾಹಿತ್ಯ ಎಂಬ ಮರವನ್ನು ವಿಶಾಲವಾಗಿ ಬೆಳೆಸಿದರು. ಮೊದಲು ಸಾಹಿತ್ಯ, ಕತೆ, ನಾಟಕ, ಪದ್ಯ, ಪಾಠಗಳ ಮೂಲಕ ಜನರಿಗೆ ನೇರವಾಗಿ ತಲುಪುತ್ತಿತ್ತು. ಆದರೆ ಈಗ ಅದೇ ಮಾಧ್ಯಮಗಳ ಮೂಲಕ ತಲುಪುತ್ತದೆ. ವ್ಯತ್ಯಾಸವಿಷ್ಟೆ, ಜನಸಾಮಾನ್ಯರು ಎಲ್ಲರೂ ಒಟ್ಟಿಗೆ ಕೂಡಿ ಸಾಹಿತ್ಯ ರುಚಿಯನ್ನು ಸವಿಯುತ್ತಿದ್ದರು. ಆದರೆ ಮಾಧ್ಯಮಗಳ ಆರಂಭದಿಂದ ಮನುಷ್ಯ ಒಬ್ಬಂಟಿಯಾಗಿದ್ದಾನೆ. ಉದಾ: ಮೊಬೈಲ್. ಕನ್ನಡ ಸಾಹಿತ್ಯ ಪರಂಪರೆ ಉಳಿಸಿ, ಆಧುನಿಕತೆಯನ್ನು ಅಳವಡಿಸಿ.
ಸಾಹಿತ್ಯ ಮತ್ತು ಮಾಧ್ಯಮಗಳೆರಡು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತೆ ಕಾಣಿಸುತ್ತದೆ. ಒಂದು ಅಂತರಂಗದ ಜೊತೆ ಸಖ್ಯ ಬೆಳೆಸುತ್ತದೆ. ಇನ್ನೊಂದು ಬಹಿರಂಗದಲ್ಲಿ. ಆದರೆ ಇವೆರಡನ್ನು ದೂರವಿಡಲು ಸಾಧ್ಯವಿಲ್ಲ. ಸಾಹಿತ್ಯದ ರೂಪ, ಸೊಗಡು ಒಂದೊಂದು ಕಾಲಕ್ಕೆ ಒಂದೊಂದು ರೀತಿಯಲ್ಲಿ ಬದಲಾವಣೆ ಸ್ವರೂಪ ಪಡೆಯುತ್ತದೆ. ಸಾಹಿತ್ಯದಲ್ಲಿ ನಿರಂತರ ಬದಲಾವಣೆಯಾಗುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಮೊದಲು ಸಂಜೆ ಹೊತ್ತು ಮನೆ ಜಗಲಿಯ ಮೇಲೆ ಕುಳಿತು ಕತೆ ಹೇಳುತ್ತಿದ್ದರು. ಅವರ ಮಾತು, ಧ್ವನಿಗಳೇ ಮಾಧ್ಯಮಗಳಾಗಿದ್ದವು.
ಸಾಹಿತ್ಯದಲ್ಲಿ ಯಾವುದೇ ಒಂದು ವಿಷಯವನ್ನು ಜನರಿಂದ ಜನರಿಗೆ ತಿಳಿಸಲು ನಾಟಕ, ಸಂಗೀತದ ಮೂಲಕ ತಲುಪುತ್ತಿತ್ತು. ಆದರೆ ಈಗಿನ ಯುಗದಲ್ಲಿ ಮಾಧ್ಯಮಗಳೇ ಜನರಿಂದ ಜನರಿಗೆ ತಲುಪಿಸುವ ಸೇತುವೆಯಾಗಿದೆ. ಮೊದಲು ಜನರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಲು ಅಜ್ಜಿಯ ಸಹಾಯ ಪ್ರೀತಿಯಿಂದ ಆಲಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಜಂಗಮವಾಣಿ, ದೂರದರ್ಶನ, ಅಂಚೆ, ಮಿಂಚಂಚೆ, ವೆಬ್‌ಸೈಟ್, ಇಂಟರ್‌ನೆಟ್ ಬಳಕೆ. ಬ್ರಿಟಿಷರ ಆಗಮನ ತರುವಾಯ ನಮ್ಮ ಸಾಹಿತ್ಯ ಸಂಸ್ಕೃತಿಗಳು ದೇಶದಲ್ಲಿ ಬದಲಾವಣೆ ಹೊಂದಿ ಅಂಚೆ ವ್ಯವಸ್ಥೆ ವ್ಯಾಪಕವಾಗಿ ಹರಡಿತು.

Article Details

Section

Research Articles

Author Biography

ಭಾಗ್ಯಶ್ರೀ ಎಸ್.‌ ಕಲಶೆಟ್ಟಿ

ಸಹಾಯಕ ಪ್ರಾಧ್ಯಾಪಕರು, ಬಿ.ಬಿ.ಎ (ಮಹಿಳಾ) ವಿಭಾಗ, ಶರಣ ಬಸವ ವಿಶ್ವವಿದ್ಯಾಲಯ, ಕಲಬುರಗಿ.

How to Cite

ಭಾಗ್ಯಶ್ರೀ ಎಸ್.‌ ಕಲಶೆಟ್ಟಿ. (2025). ಸಾಹಿತ್ಯದಲ್ಲಿ ಮಾಧ್ಯಮಗಳ ಪ್ರಭಾವ. ಅಕ್ಷರಸೂರ್ಯ (AKSHARASURYA), 8(02), 26 to 31. https://aksharasurya.com/index.php/latest/article/view/1388

References

ಸತೀಶ ಕುಮಾರ, (2021), ಸಮೂಹ ಮಾಧ್ಯಮ ಸಂಶೋಧನೆ, ಸ್ನೇಹ ಎಂಟರ್‌ಪ್ರೈಸಸ್, ಬೆಂಗಳೂರು.

ಪುರ್ಣಿಮಾ ಟಿ.ಸಿ., (2006), ಆಧುನಿಕ ಸಮೂಹ ಮಾಧ್ಯಮಗಳು ಮತ್ತು ಕನ್ನಡ ಅಭಿವೃದ್ಧಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.

ಜೋಸಫ್ ಕೆ.ಜೆ., (2014), ಸುದ್ದಿ ಸಂಪಾದನೆ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.

ಸಿಬಂತಿ ಪದ್ಮನಾಭ ಕೆ.ವಿ, (2020), ಡಿಜಿಟಲ್ ಮಾಧ್ಯಮ ಲೋಕ, ಸಾಧನ ಪಬ್ಲಿಕೇಷನ್, ಬೆಂಗಳೂರು.