ಜನಪದ ಆಚರಣೆಗಳು: ಒಂದು ಅವಲೋಕನ
Main Article Content
Abstract
ಮಾನವನು ಪ್ರಕೃತಿಯ ಆರಾಧನೆಯನ್ನು ಮಾಡುತ್ತಿದ್ದಂತೆ ಅದಕ್ಕೆ ಪೂರಕವಾದಂತಹ ಕೆಲವು ನಂಬಿಕೆಗಳನ್ನು ಹುಟ್ಟುಹಾಕಿಕೊಂಡ. ನಂಬಿಕೆಯು ಗ್ರಾಮೀಣ ಜನರಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿರುವುದಾಗಿದೆ. ನಂಬಿಕೆಯು ಒಂದು ಪುನರಾವರ್ತನೆ ಹಾಗೂ ಸಾಮೂಹಿಕ ನಿರೀಕ್ಷೆಗಳಿಗೆ ಪ್ರಮುಖವಾಗಿರುತ್ತವೆ. ನಂಬಿಕೆಯು ಗ್ರಾಮೀಣ ಜನರ ಜೀವನಾನುಭವದ ಉತ್ಪನ್ನವಾಗಿದೆ. ಹೀಗೆ ಮಾನವನ ಬದುಕಿಗೂ ನಂಬಿಕೆಗೂ ಅವಿನಾಭಾವ ಸಂಬಂಧವಿದೆ. ಅವು ವಿಧಿನಿಷೇಧಗಳು, ನಿರ್ದೇಶನಗಳು, ಆದೇಶ ಮತ್ತು ಆಜ್ಞೆಯ ರೂಪದಲ್ಲಿ ಪ್ರತಿನಿತ್ಯ ಬದುಕಿನೊಂದಿಗೆ ಸಂಬಂಧವನ್ನು ಕಂಡುಕೊಂಡಿವೆ. ನಂಬಿಕೆ ಎನ್ನುವುದು ಜನಪದರು ಪರಂಪರಾಗತವಾಗಿ ಒಪ್ಪಿಕೊಂಡು ಬಂದಿರುವ ತಿಳುವಳಿಕೆ. ಅನೇಕ ಕೆಲಸಗಳನ್ನು ಕೈಗೊಳ್ಳುವಲ್ಲಿ ಹಾಗೂ ಯಶಸ್ಸನ್ನು ಹೊಂದಲು ಪುಷ್ಟೀಕರಣ ನೀಡುತ್ತವೆ. ಮಾನವನ ಮೂಲ ಪ್ರವೃತ್ತಿಯು ಪ್ರಕೃತಿಯಲ್ಲಾದ ಬದಲಾವಣೆ ಹಾಗೂ ಅದರಿಂದುಂಟಾದಂತಹ ಅನುಭವಗಳ ಆಧಾರದ ಮೇಲೆ ನಂಬಿಕೆಗಳು ಹುಟ್ಟಿಕೊಂಡವು. ಇವು ಕಾಲಕ್ರಮೇಣ ಜನಪದರ ಜೀವನದಲ್ಲಿ ಅನೇಕ ಬದಲಾವಣೆ ಪಡೆದುಕೊಂಡು ಪ್ರಸ್ತುತ ದಿನಮಾನದಲ್ಲಿ ಜನಪದರ ಜೀವನಾಡಿಯಾಗಿ ಬದಲಾಗಿವೆ. ನಂಬಿಕೆ ಹಿನ್ನೆಲೆಯ ಆಚರಣೆಗಳನ್ನು ಕೈಬಿಡಲು ಜನರ ಮನದಲ್ಲಿ ಭಯವಿದೆ. ಏಕೆಂದರೆ ಬಹುಪಾಲು ನಂಬಿಕೆಗಳು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿವೆ. ಆದ್ದರಿಂದ ನಂಬಿಕೆಗಳು ಜನರಲ್ಲಿ ಗಾಢವಾಗಿ ಬೇರೂರಿವೆ. ನಂಬಿಕೆಗಳ ಕಾರ್ಯ ರೂಪಗಳೇ ಆಚರಣೆಗಳಾಗಿವೆ ಎಂದು ಹೇಳಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಡಾ. ಸಿದ್ದಲಿಂಗಯ್ಯ, (2015), ಗ್ರಾಮದೇವತೆಗಳು, ಅಂಕಿತ ಪುಸ್ತಕ ಪ್ರಕಾಶಕರು, ಬೆಂಗಳೂರು.
ವಿದ್ವಾನ್ ವಿ.ಎಸ್. ಭಟ್, (2002), ಭಾರತೀಯ ಹಬ್ಬಗಳ ವೈಶಿಷ್ಟ್ಯ, ವಿಶ್ವನಾಥ ಪ್ರಕಾಶನ, ಶಿವಮೊಗ್ಗ.
ರಹಮತ್ ತರೀಕೆರೆ, (2005), ಕರ್ನಾಟಕ ನಾಥಪಂಥ, ಅಭಿನವ ಪ್ರಕಾಶನ, ಬೆಂಗಳೂರು.