ಕನ್ನಡ ಜಾನಪದ ರಂಗಭೂಮಿಯ ಪರಂಪರೆ
Main Article Content
Abstract
ಬದುಕಿನ ಅಸಂಖ್ಯ ಪಾಠಗಳ ಗಣಿ ರಂಗಭೂಮಿ. ಅದರ ಆಳಕ್ಕಿಳಿದಷ್ಟು ಅನುಭವಗಳ ಸುರಳಿ ಬಿಚ್ಚಿಕೊಳ್ಳುತ್ತದೆ. ಶತಮಾನಗಳ ಹಿಂದೆ ತನ್ನ ಸ್ವರೂಪವನ್ನು ಕಟ್ಟಿಕೊಂಡಿದ್ದರೂ, ವಿಭಿನ್ನ ಕಾಲಘಟ್ಟಗಳ ಮನೋಧರ್ಮಗಳಿಗೆ ಅನುಗುಣವಾಗಿ ಹಲವು ಹತ್ತು ಮಾರ್ಪಾಡುಗಳಿಗೆ ಒಳಗಾಗುತ್ತಾ ಇಂದಿಗೂ ತನ್ನ ಬೇರುಗಳನ್ನು ಉಳಿಸಿಕೊಂಡಿದೆ ರಂಗಭೂಮಿ. ಬದುಕಿನ ಬವಣೆಗಳನ್ನೇ ತಮ್ಮ ಅನುಭವದ ಮೂಲಕ ಮನರಂಜನೆಯನ್ನಾಗಿಸಿಕೊಂಡ ಜಾನಪದ ರಂಗಭೂಮಿ, ಹಗಲು ರಾತ್ರಿ ತಾಲೀಮು ನಡೆಸಿ ವಿಶಿಷ್ಟ ಪ್ರಯೋಗಗಳನ್ನು ನೀಡಿದ ರಂಗಭೂಮಿ. ಈ ಜಾನಪದ ರಂಗಭೂಮಿಯು ಪರಂಪರೆಯ ಮುಂದುವರಿಕೆಗೆ ನೀಡಿದ ಕೊಡುಗೆಗಳು ಅಷ್ಟಿಷ್ಟಲ್ಲ. ಅಲ್ಲಿ ಜಾನಪದೀಯ ಸೊಗಡಿತ್ತು; ವಿಭನ್ನ ಕಾಲಘಟ್ಟದ ಸಾಮಾಜಿಕ ಚಹರೆಗಳಿದ್ದವು; ಬದುಕಿನ ವಿವಿಧ ಆಯಾಮಗಳಿದ್ದವು; ಪ್ರೇಕ್ಷಕರಿಗೆ ರಸದೌತಣ ಉಣಬಡಿಸುವ ಉದ್ದೇಶವಿತ್ತು; ನೈತಿಕ ಮೌಲ್ಯವನ್ನು ಸಾರುವ ಸಾಮಾಜಿಕ ಹೊಣೆಗಾರಿಕೆಯಿತ್ತು; ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಕಳಕಳಿಯಿತ್ತು; ಅದನ್ನೊಂದು ವೇದಿಕೆಯನ್ನಾಗಿ ಬಳಸಿಕೊಂಡು ತಾನು ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲವಿತ್ತು; ಏನಾದರೂ ಸರಿ ರಂಗಭೂಮಿಯನ್ನು ಉಳಿಸಿ ಬೆಳೆಸೋಣ ಎನ್ನುವ ಹುಂಬುತನವಿತ್ತು ಇವೆಲ್ಲವೂ ಕನ್ನಡ ರಂಗಭೂಮಿಯನ್ನು ಹುಟ್ಟುಹಾಕಿವೆ, ಬೆಳೆಸಿವೆ ಮತ್ತು ಉಳಿಸಿವೆ. ಇವುಗಳನ್ನು ಅರಿತುಕೊಳ್ಳಬೇಕಾದರೆ ರಂಗಭೂಮಿಯ ಪರಂಪರೆಯನ್ನು ಚಾರಿತ್ರಿಕ ಕ್ರಮದ ಮೂಲಕ ನೋಡಿದರೆ ಸಾಕಾಗುವುದಿಲ್ಲ. ರಂಗಭೂಮಿಯ ನಿಜವಾದ ಚರಿತ್ರೆಯನ್ನು ಅರಿಯಬೇಕಾದರೆ ಅದಕ್ಕಾಗಿ ದುಡಿದ ಜೀವಗಳ ಅನುಭವ ಕಥನಗಳನ್ನು ಅವಲೋಕಿಸಬೇಕು. ಆ ಜೀವಗಳ ಕಷ್ಟಕಾರ್ಪಣ್ಯಗಳನ್ನು, ಸುಖಸಂತೋಷಗಳನ್ನು, ಏಳುಬೀಳುಗಳನ್ನು ಅರಿತುಕೊಳ್ಳಬೇಕು. ಅವರ ತವಕತಲ್ಲಣಗಳನ್ನು ಅರ್ಥೈಸಿಕೊಳ್ಳಬೇಕು. ನಟನೆಯ ಹಿಂದಿನ ತಾಲೀಮನ್ನು, ತೆರೆಯ ಹಿಂದಿನ ವಾಸ್ತವವನ್ನು, ಬಣ್ಣದ ಹಿಂದಿನ ಬದುಕನ್ನು, ಬೆಳಕಿನ ಕೆಳಗಿನ ನೆರಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಅವುಗಳನ್ನು ಮತ್ತೆ ಮತ್ತೆ ಪುನರ್ ಮೌಲ್ಯೀಕರಣಕ್ಕೆ ಒಳಪಡಿಸಬೇಕು. ಹಾಗಾದಾಗ ಮಾತ್ರ ರಂಗಭೂಮಿಯ ನಿಜವಾದ ಚರಿತ್ರೆಯನ್ನು ಕಟ್ಟಿಕೊಡಲು ಸಾಧ್ಯವಾಗುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಕ್ಷರ ಕೆ.ವಿ., (2018), ಮಾವಿನ ಮರದಲ್ಲಿ ಬಾಳೆಯ ಹಣ್ಣು, ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ.
ಅಕ್ಷರ ಕೆ.ವಿ., (2009), ರಂಗಭೂಮಿಯ ಮುಖಾಂತರ, ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ.
ಎನ್ಕೆ, (2001), ಉತ್ತರ ಕರ್ನಾಟಕದ ರಂಗಭೂಮಿ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಗುಡಿಹಳ್ಳಿ ನಾಗರಾಜ, (2000), ರಂಗನಾಟಕ, ಸಿ.ವಿ.ಜಿ. ಪಬ್ಲಿಕೇಷನ್, ಬೆಂಗಳೂರು.
ಜೋಳದರಾಶಿ ದೊಡ್ಡನಗೌಡ, (1998), ನಂದೇ ನಾನೋದಿದೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ಧೂಪದ ಎಂ.ಟಿ., (2010), ಕನ್ನಡ ಜನಪದ ರಂಗ ಪರಂಪರೆ, ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಮಲ್ಲಿಕಾರ್ಜುನ ಕಡಕೋಳ, (2016), ಕಂಚಿಕೇರಿ ಶಿವಣ್ಣ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು.
ಮೃತ್ಯುಂಜಯ ರುಮಾಲೆ, (2012), ಸಿಡಿಗಿನಮಳೆ ವೈ. ಎಂ. ಚಂದ್ರಯ್ಯನವರು, ಲಿಂಗಾಯತ ಅಧ್ಯಯನ ಸಂಸ್ಥೆ, ಡಂಬಳ, ಗದಗ.
ರಂಗನಾಥ. ಎಚ್.ಕೆ, (2007), ಕನ್ನಡ ರಂಗಭೂಮಿ ವಿಕಾಸ, ಸಂಸ್ಕೃತಿ ಬುಕ್ ಏಜನ್ಸೀಸ್, ಬೆಂಗಳೂರು.
ರಾಮಕೃಷ್ಣ ಮರಾಠೆ, (1999), ಕೊಣ್ಣೂರು ನಾಟಕ ಕಂಪನಿ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
ವೈಕುಂಠರಾಜು. ಬಿ.ವಿ., (1997), ಕನ್ನಡ ರಂಗಭೂಮಿ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.
ವೆಂಕಟಗಿರಿ ದಳವಾಯಿ, (2003), ಕನ್ನಡ ರಂಗಭೂಮಿ ಮತ್ತು ಮಹಿಳೆ, ಕನಕ ಸಾಹಿತ್ಯ ಪ್ರತಿಷ್ಠಾನ (ನೋ), ಬೆಂಗಳೂರು.
ವೆಂಕಟೇಶ ಇಂದ್ವಾಡಿ, (2012), ಆಧುನಿಕ ಜನಪದ ರಂಗಭೂಮಿ ಸ್ವರೂಪ ಸಂರಚನೆ, ಕಂಸಳೆ ಪ್ರಕಾಸನ, ಮೈಸೂರು.