ಜಾನಪದ ಸಾಹಿತ್ಯದಲ್ಲಿ ಆಧುನಿಕತೆಯ ಚಹರೆಗಳು
Main Article Content
Abstract
ಜಾನಪದ ಸಾಹಿತ್ಯವು ಜನಜೀವನದ ಅನುಭವ, ಭಾವನೆ, ನಂಬಿಕೆಗಳ ಪ್ರತಿಬಿಂಬವಾಗಿದ್ದು, ಕಾಲದ ಬದಲಾವಣೆಯೊಂದಿಗೆ ಜಾನಪದವೂ ಹೊಸ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ. ಆಧುನಿಕತೆಯ ಪ್ರಭಾವದಿಂದ ಜಾನಪದ ಗೀತೆಗಳು, ಕಥೆಗಳು, ಹಬ್ಬ–ಜಾತ್ರೆಗಳು, ನೃತ್ಯ–ಸಂಗೀತಗಳು ನವೀನ ವಿಷಯಗಳನ್ನು ಒಳಗೊಂಡು ಸಮಾಜದಲ್ಲಿ ಜಾಗೃತಿಯ ಸಾಧನವಾಗುತ್ತಿವೆ. ತಂತ್ರಜ್ಞಾನ, ಮಾಧ್ಯಮಗಳು, ಜಾಗತೀಕರಣ ಇವುಗಳ ನೆರವಿನಿಂದ ಜಾನಪದವು ಪ್ರಾದೇಶಿಕ ಗಡಿಗಳನ್ನು ಮೀರಿ ಜಾಗತಿಕ ವೇದಿಕೆಯತ್ತ ಸಾಗುತ್ತಿದೆ. ಹಳೆಯ ಪರಂಪರೆಯ ತಾತ್ವಿಕ ಅಂಶಗಳನ್ನು ಉಳಿಸಿಕೊಂಡೇ ಹೊಸ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಮೌಲ್ಯಗಳನ್ನು ಒಳಗೊಳ್ಳುತ್ತಿರುವುದು ಇದರ ಆಧುನಿಕತೆಯ ಮುಖ್ಯ ಲಕ್ಷಣವಾಗಿದೆ. ಹೀಗಾಗಿ ಜಾನಪದ ಸಾಹಿತ್ಯವು ಕೇವಲ ಪಾರಂಪರಿಕ ಧಾರೆ ಮಾತ್ರವಲ್ಲದೆ, ಆಧುನಿಕ ಸಮಾಜದ ಚಿಂತನೆ, ಬದಲಾವಣೆ ಮತ್ತು ಸಂವೇದನೆಗಳನ್ನು ಪ್ರತಿಬಿಂಬಿಸುವ ಜೀವಂತ ಕಲಾ–ಸಂಸ್ಕೃತಿಯ ರೂಪವಾಗಿ ಹೊರಹೊಮ್ಮುತ್ತಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾಗಭೂಷಣ ಬಗ್ಗನಡು, (2014), ಆಧುನಿಕ ಜಾನಪದ, ಶ್ರೀ ಅನ್ನಪೂರ್ಣ ಪ್ರಕಾಶಕರು ಮತ್ತು ವಿತರಕರು, ಬೆಂಗಳೂರು ಗ್ರಾಮಾಂತರ.
ರಾಮಚಂದ್ರೇಗೌಡ ಹಿ.ಶಿ., (2021), ಕನ್ನಡ ಜನಪದ ಸಾಹಿತ್ಯ ಪ್ರಕಾರಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಅಂಗಡಿ ಎಸ್.ಎಸ್., (2017), ಕನ್ನಡ ಜಾನಪದ ಸಾಹಿತ್ಯ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.
ಮುಮ್ತಾಜ್ ಬೇಗಂ, (2019), ಜನಪದ ಸಾಹಿತ್ಯದಲ್ಲಿ ತವರುಮನೆ, ಗಾಯತ್ರಿ ಪ್ರಕಾಶನ, ಬಳ್ಳಾರಿ.
ಸುವರ್ಣ ಎಂ. ಹಿರೇಮಠ, (2020), ಜಾನಪದ ವೈಭವ, ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು, ಕಲಬುರಗಿ.
ಮುಮ್ತಾಜ್ ಬೇಗಂ, (2020), ಜನಪದ ಸಾಹಿತ್ಯದಲ್ಲಿ ಮೌಲ್ಯ ಪ್ರತಿಪಾದನೆ, ಜೀವನ ಪ್ರಕಾಶನ, ಕೊಪ್ಪಳ.