ಸಾಹಿತ್ಯದ ಮೇಲೆ ಮಾಧ್ಯಮಗಳ ಪ್ರಭಾವ
Main Article Content
Abstract
ಈ ಲೇಖನದಲ್ಲಿ ಸಾಹಿತ್ಯದ ಮೇಲೆ ಮಾಧ್ಯಮಗಳ ಪ್ರಭಾವವನ್ನು ವಿಶ್ಲೇಷಿಸಲಾಗಿದೆ. ಭಾಷೆ ಮತ್ತು ಸಾಹಿತ್ಯ ಮಾನವ ಸಂವಹನದ ಮೂಲಭೂತ ಸಾಧನಗಳಾಗಿದ್ದು, ಅವುಗಳ ಪ್ರಸಾರ ಮತ್ತು ವ್ಯಾಪಕತೆಗೆ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿವೆ. ಮುದ್ರಣ ಮಾಧ್ಯಮದಿಂದ ಪ್ರಾರಂಭವಾದ ಈ ಪ್ರಕ್ರಿಯೆ, ರೇಡಿಯೋ, ದೂರದರ್ಶನ, ಸಿನಿಮಾ, ಇಂಟರ್‌ನೆಟ್, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹೊಸ ಆಯಾಮಗಳನ್ನು ಪಡೆದಿದೆ. ಮಾಧ್ಯಮಗಳು ಸಾಹಿತ್ಯವನ್ನು ಜನಪ್ರಿಯಗೊಳಿಸುವುದರ ಜೊತೆಗೆ ಶಿಕ್ಷಣ, ಮನರಂಜನೆ, ಪ್ರಚಾರ ಮತ್ತು ಸಮಾಜ ಪರಿವರ್ತನೆಯ ಸಾಧನಗಳಾಗಿವೆ. ಸಾಹಿತ್ಯದ ಪ್ರಚಾರಪ್ರಸಾರ, ಕಲೆ ಸಂಸ್ಕೃತಿಯ ಉಳಿವು ಮತ್ತು ನವ್ಯ ಸಾಹಿತ್ಯ ಸೃಜನಶೀಲತೆಗೆ ಮಾಧ್ಯಮಗಳು ಆಧಾರವಾಗಿವೆ. ತಂತ್ರಜ್ಞಾನಾಧಾರಿತ ಡಿಜಿಟಲ್ ಯುಗದಲ್ಲಿ ಸಾಹಿತ್ಯ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿರುವುದು ಇದರ ವಿಶೇಷತೆ. ಹೀಗಾಗಿ, ಪಾರಂಪರಿಕ ಮಾಧ್ಯಮಗಳ ನೆಲೆಯ ಮೇಲೆ ಆಧುನಿಕ ಮಾಧ್ಯಮಗಳು ಸಾಹಿತ್ಯದ ವೈವಿಧ್ಯತೆಯನ್ನು ಹೆಚ್ಚಿಸಿ, ನವಪೀಳಿಗೆಯ ಸೃಜನಾತ್ಮಕ ಚಿಂತನೆಗೆ ದಾರಿ ಮಾಡಿಕೊಟ್ಟಿವೆ ಎಂಬುದು ಈ ಲೇಖನದ ಸಾರವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬುಳ್ಳಣ್ಣವರ ಬಿ.ಎಚ್. ಮತ್ತು ರಮೇಶ ಮ. ಕಲ್ಲನಗೌಡರ, (2022), ಸಮೂಹ ಸಂವಹನ ಮಾಧ್ಯಮ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಸಂಗಮೇಶ ಸವದತ್ತಿಮಠ, (2015), ಕನ್ನಡ ಭಾಷಾ ವ್ಯಾಸಂಗ, ರೂಪರಶ್ಮಿ ಪ್ರಕಾಶನ, ಧಾರವಾಡ.