ಹಾಲುಮತ ಜನಪದ ಮಹಾಕಾವ್ಯದಲ್ಲಿನ ಶೈಲಿ ಮತ್ತು ತಂತ್ರ
Main Article Content
Abstract
ಈ ಲೇಖನದಲ್ಲಿ ಹಾಲುಮತ ಜನಪದ ಮಹಾಕಾವ್ಯದಲ್ಲಿನ ಶೈಲಿ ಮತ್ತು ತಂತ್ರವನ್ನು ವಿಶ್ಲೇಷಿಸಲಾಗಿದೆ. ಶೈಲಿಯು ಕಾವ್ಯದ ಆಂತರ್ಯದ ಅಂಶವಾಗಿದ್ದು, ಅದು ಕವಿಯ ಚಿಂತನೆ, ಭಾವನೆ, ಸಮಾಜ ಸಂಸ್ಕೃತಿಗಳ ಪ್ರತಿಬಿಂಬವನ್ನು ಹೊತ್ತು ತರುತ್ತದೆ. ಹಾಲುಮತ ಮಹಾಕಾವ್ಯಗಳಲ್ಲಿ ಪ್ರಾಸಬದ್ಧತೆ, ಶಬ್ದಚಿತ್ರಗಳು, ಛಂದೋ ವೈವಿಧ್ಯ, ಮೌಖಿಕ ಪರಂಪರೆಯ ಪದಪ್ರಯೋಗಗಳು ಪ್ರಮುಖವಾಗಿ ಕಾಣುತ್ತವೆ. ಜನಪದೀಯ ಸಾಂಸ್ಕೃತಿಕ ವೀರರು, ಭಕ್ತಿ, ವೀರಗಾಥೆಗಳು ಹಾಗೂ ಸಾಮಾಜಿಕ ಪರಂಪರೆಗಳನ್ನು ಶಬ್ದಚಿತ್ರಗಳ ಮೂಲಕ ಕಾವ್ಯಮಯವಾಗಿ ಅಭಿವ್ಯಕ್ತಿಸಲಾಗಿದೆ. ಗದ್ಯಪದ್ಯ ಸಮ್ಮಿಶ್ರ ರೂಪ, ಆಡುಭಾಷೆಯ ವೈಶಿಷ್ಟ್ಯ, ಪುನರಾವರ್ತನೆ, ಉಪಮೆ ಮತ್ತು ಸ್ವಭಾವೋಕ್ತಿ ಬಳಕೆ ಹಾಲುಮತ ಮಹಾಕಾವ್ಯದ ಶೈಲಿಶಿಲ್ಪವನ್ನು ಸಮೃದ್ಧಗೊಳಿಸುತ್ತವೆ. ಈ ಮೂಲಕ ಹಾಲುಮತ ಮಹಾಕಾವ್ಯವು ಜನಜೀವನ, ನಂಬಿಕೆ, ಸಂಸ್ಕೃತಿ ಮತ್ತು ಕಲಾತ್ಮಕ ಕೌಶಲ್ಯದ ಅನನ್ಯ ದಾಖಲೆಗಳಾಗಿ ಪರಿಣಮಿಸಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಡಿವೆಪ್ಪ ಮಾಳಪ್ಪ ಸೋಮೈ, (2013), ಶ್ರೀ ಮಹಿಮಾಂತಕ ಮಹಾಲಿಂಗರಾಯರ ಹಾಲುಮತ ಪುರಾಣ, ವಿದ್ಯಾನಿಧಿ ಪ್ರಕಾಶನ, ಗದಗ.
ಅಮರೇಶ ನುಗಡೋಣಿ, (2010), ಕನ್ನಡ ಸಂಶೋಧನೆಯ ವೈಧಾನಿಕತೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಅಂಗಡಿ ಎಸ್.ಎಸ್., (2017), ಕನ್ನಡ ಭಾಷಾಧ್ಯಯನ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.
ಅಂಗಡಿ ಎಸ್.ಎಸ್., (2003), ಸಂಬಂಧವಾಚಕಗಳು ಮತ್ತು ಸಂಶೋಧನೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕಬ್ಬಿನಾಲೆ ವಸಂತ ಭಾರದ್ವಾಜ, (2016), ಕನ್ನಡ ಭಾಷೆ ರಚನೆ, ಚೇತನ ಬುಕ್ ಹೌಸ್, ಮೈಸೂರು.
ಕೃಷ್ಣಮೂರ್ತಿ, ಸಿ.ಎನ್., (2011), ಕನ್ನಡ ಕಾವ್ಯ ಪರಂಪರೆಯ ಪರಿಚಯ, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.