ವಿಜ್ಞಾನ ಮತ್ತು ಸಾಹಿತ್ಯದ ತಾತ್ವಿಕತೆಗಳು

Main Article Content

ಸುಮನ ಕಾಮಣ್ಣವರ

Abstract

ವಿಜ್ಞಾನ ಮತ್ತು ಸಾಹಿತ್ಯ ಇವೆರಡೂ ಮಾನವ ಜೀವನವನ್ನು ಸುಂದರಗೊಳಿಸುವ ಅದ್ಭುತ ಜ್ಞಾನಶಕ್ತಿಗಳು. ವಿಜ್ಞಾನವು ಬೌದ್ಧಿಕತೆಯನ್ನು ಬೆಳೆಸುವ, ವೈಜ್ಞಾನಿಕ ಲೋಕವನ್ನು ತೆರೆದಿಡುವ ಮಹಾಪಥವಾಗಿದೆ. ಸಾಹಿತ್ಯವು ಭಾವನೆಗಳನ್ನು ಪೋಷಿಸುವ, ಉದ್ದೀಪನಗೊಳಿಸುವ ಮಹಾಶಕ್ತಿಯಾಗಿದೆ. ಒಂದು ಕಡೆ ವಿಜ್ಞಾನವು ಯುಕ್ತಿ, ಪ್ರಯೋಗ, ಆವಿಷ್ಕಾರಗಳ ಮೂಲಕ ಮಾನವ ಜೀವನವನ್ನು ಧೀಮಂತಗೊಳಿಸಿದರೆ, ಮತ್ತೊಂದೆಡೆ ಸಾಹಿತ್ಯವು ಕಲೆ, ಕಾವ್ಯ ನಾಟಕ, ಮಹಾಕಾವ್ಯಗಳ ಮೂಲಕ ಹೃದಯಕ್ಕೆ ಇಂಬು ನೀಡುತ್ತದೆ. ಇಂದಿನ ದಿನಗಳಲ್ಲಿ ವಿಜ್ಞಾನದ ಜ್ಞಾನವಿಲ್ಲದೆ ಜೀವನವೇ ಇಲ್ಲ. ಎಲ್ಲವುಗಳ ಬಗ್ಗೆ ತಿಳಿವಳಿಕೆ ಬೇಕು. ಅದರಲ್ಲೂ ನಮ್ಮ ಬದುಕಿಗೆ ವಿಜ್ಞಾನದ ಅರಿವು ಬೇಕು. ಆದರೆ ನಮ್ಮ ಜೀವನದ ಆಂತರ್ಯವನ್ನು ಇಮ್ಮಡಿಗೊಳಿಸುವ ಸಾಹಿತ್ಯದ ಓದಿನ ಅರಿವೂ ಬೇಕು. ನಮ್ಮ ಮನಸ್ಸಿಗೆ ಸಂತೋಷವನ್ನು ನೀಡುವ ಕಾವ್ಯ, ಕಥೆ, ನಾಟಕ, ಚುಟುಕು ಪರಿಚಯವಿಲ್ಲದಿದ್ದರೆ ಜೀವನ ಬಂಜರವಾಗುತ್ತದೆ. ಇದಕ್ಕೆ ಡಿವಿಜಿ, ಮಾನವ ಜೀವನವು ಬಹಳ ಸರ್ವಶ್ರೇಷ್ಠವಾದುದು, ಎಲ್ಲವನ್ನೂ ಒಳಗೊಂಡಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದಿದ್ದಾರೆ. ಸಾಹಿತ್ಯವು ಮನುಷ್ಯನಿಗೆ ಮಾನವೀಯ ಮೌಲ್ಯಗಳನ್ನು ನೀಡುತ್ತ, ಅದು ಭಾವನಾತ್ಮಕತೆಯನ್ನು ಬೆಳೆಸುತ್ತದೆ. ಪ್ರೀತಿ, ಕರುಣೆ, ಪರೋಪಕಾರ, ಮಾಧುರ್ಯದ ಮಹತ್ವವನ್ನು ತಿಳಿಸುತ್ತದೆ. ವಿಜ್ಞಾನ ಜೀವನಕ್ಕೆ ಸೌಲಭ್ಯ ನೀಡಿದರೆ, ಸಾಹಿತ್ಯ ಜೀವನಕ್ಕೆ ಅಗಾಧವಾದ ಅರ್ಥವನ್ನು ನೀಡುತ್ತದೆ. ಹಾಗಾಗಿ ವಿಜ್ಞಾನ ಮತ್ತು ಸಾಹಿತ್ಯದ ತಾತ್ವಿಕತೆಗಳು ಪರಸ್ಪರ ಪೂರಕವಾದವು. ಇವೆರಡರ ಸಮನ್ವಯದಲ್ಲಿ ಮಾತ್ರ ಮಾನವ ಜೀವನ ಪರಿಪೂರ್ಣವಾಗುತ್ತದೆ. ಈ ಲೇಖನದಲ್ಲಿ ಈ ಎರಡು ಕ್ಷೇತ್ರದ ಅರಿವು ಎಷ್ಟು ಮುಖ್ಯವೆನ್ನುವುದನ್ನು ಚರ್ಚೆಮಾಡುತ್ತೇನೆ.

Article Details

Section

Research Articles

Author Biography

ಸುಮನ ಕಾಮಣ್ಣವರ

ಬಿ.ಎಸ್ಸಿ ತೃತೀಯ ಸೆಮಿಸ್ಟರ್, ಜಿ.ಐ. ಬಾಗೇವಾಡಿ ಕಾಲೇಜು, ನಿಪ್ಪಾಣಿ.

 

How to Cite

ಸುಮನ ಕಾಮಣ್ಣವರ. (2025). ವಿಜ್ಞಾನ ಮತ್ತು ಸಾಹಿತ್ಯದ ತಾತ್ವಿಕತೆಗಳು. ಅಕ್ಷರಸೂರ್ಯ (AKSHARASURYA), 8(01), 140 to 142. https://aksharasurya.com/index.php/latest/article/view/1369

References

ಅನಂತರಾಮು ಟಿ. ಆರ್., (2020), ವಿಜ್ಞಾನ ತಂತ್ರಜ್ಞಾನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ರಾಘವೇಂದ್ರ ಎಚ್. ಎಸ್., (2015), ವಿಶ್ಲೇಷಣೆ, ಸುರಭಿ ಪ್ರಕಾಶನ, ಬೆಂಗಳೂರು.

ನಾಗಭೂಷಣ ಓ.ಎಲ್. (ಸಂ), (2016), ವಿಜ್ಞಾನ ಸಾಹಿತ್ಯ ನಿರ್ಮಾಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.

ಶೈಲಜಾ ಬಿ.ಎಸ್. (ಸಂ), (2007), ವಿಜ್ಞಾನ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ತಿರುಮಲೇಶ ಕೆ.ವಿ. (ಸಂ), (2018), ಜ್ಞಾನ ವಿಜ್ಞಾನ ತಂತ್ರಜ್ಞಾನ, ಕೇಂದ್ರ ಸಾಹಿತ್ಯ ಅಕಾಡೆಮಿ, ದೆಹಲಿ.