ಜನಪದ ಸಾಹಿತ್ಯ: ಆಧುನಿಕ ತಲ್ಲಣಗಳು
Main Article Content
Abstract
ಈ ಲೇಖನದಲ್ಲಿ ಜನಪದ ಸಾಹಿತ್ಯ: ಆಧುನಿಕ ತಲ್ಲಣಗಳು ಎಂಬ ವಿಷಯವನ್ನು ಚರ್ಚಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯವು ಬೇರುಗಳಂತಿದೆ. ಜನಪದ ಗೀತೆ, ಕಥೆ, ನೃತ್ಯ, ಕಲೆ, ಆಚರಣೆ, ಸಂಪ್ರದಾಯಗಳ ಮೂಲಕ ಜನರ ಬದುಕು, ನಂಬಿಕೆ, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳು ವ್ಯಕ್ತವಾಗುತ್ತವೆ. ಆದರೆ, ಆಧುನಿಕ ಯುಗದಲ್ಲಿ ತಂತ್ರಜ್ಞಾನ, ಜಾಗತೀಕರಣ, ಆರ್ಥಿಕ ಬದಲಾವಣೆಗಳು ಹಾಗೂ ಸಮಾಜದ ಜೀವನಶೈಲಿಗಳ ಬದಲಾವಣೆಗಳಿಂದ ಜನಪದ ಕಲೆಆಚರಣೆಗಳು ನಿಧಾನವಾಗಿ ನಶಿಸುತ್ತಿರುವುದನ್ನು ಗಮನಿಸಬಹುದು. ಹಿಂದೆ ಜನರ ಬದುಕಿನ ಅಂಗವಾಗಿದ್ದ ಗೀತೆ, ಗಾದೆ, ಬಯಲಾಟ, ಜಾತ್ರಾಹಬ್ಬಗಳು ಈಗ ವೇದಿಕೆಮಟ್ಟದ ಪ್ರದರ್ಶನಗಳಾಗಿ ಬದಲಾಗುತ್ತಿವೆ. ಪಾರಂಪರಿಕ ಜ್ಞಾನವನ್ನು ಮಾರುಕಟ್ಟೆಗೊಳಿಸುವ ಪ್ರಕ್ರಿಯೆಯೂ ಹೆಚ್ಚಾಗಿದೆ. ಇಂತಹ ಸ್ಥಿತಿಯಲ್ಲಿ ಜನಪದ ಕಲೆಸಾಹಿತ್ಯವನ್ನು ಉಳಿಸಿ ಬೆಳೆಸುವುದು ಅವಶ್ಯಕ. ನವಮಾಧ್ಯಮ ಹಾಗೂ ತಂತ್ರಜ್ಞಾನಗಳನ್ನು ಬಳಸಿಕೊಂಡು ಜನಪದ ಪರಂಪರೆಯನ್ನು ಆಧುನಿಕ ಜೀವನದೊಂದಿಗೆ ಹೆಜ್ಜೆ ಹಾಕುವ ಪ್ರಯತ್ನವೇ ಇಂದಿನ ಅಗತ್ಯ. ಹೀಗಾಗಿ, ಜನಪದದ ಜೀವಂತಿಕೆ ಕೇವಲ ಸಂಗ್ರಹದಲ್ಲಿ ಅಲ್ಲ, ಬದಲಾಗಿ ಅದರ ಅನುಷ್ಠಾನ, ಪ್ರಸಾರ ಹಾಗೂ ಹೊಸ ಪೀಳಿಗೆಗೆ ತಲುಪಿಸುವಿಕೆಯಲ್ಲಿ ಇದೆ ಎಂಬುದು ಲೇಖನದ ಸಾರವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಭಜಂತ್ರಿ ಬಿ.ಎಸ್. (ಸಂ), (2021), ಜನಪದ ಸಾಹಿತ್ಯ ಮತ್ತು ಜನಪದ ಗಣಿತ, ಪ್ರಸಾರಾಂಗ, ಕ.ವಿ.ವಿ., ಧಾರವಾಡ.
ನಲ್ಲೂರ ಪ್ರಸಾದ (ಸಂ), (1992), ನವೋದಯ ಸಾಹಿತ್ಯ ಮತ್ತು ಜನಪದ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು.
ನಾಗಭೂಷಣ ಬಗ್ಗನಡು (ಸಂ), (2014), ಆಧುನಿಕ ಜನಪದ, ಶ್ರೀ ಅನ್ನಪೂರ್ಣ ಪ್ರಕಾಶಕರು, ಬೆಂಗಳೂರು.