ತಂತ್ರಜ್ಞಾನ ಯುಗದಲ್ಲಿ ಸಾಹಿತ್ಯ ಸೃಷ್ಟಿಯ ಸಾಂಸ್ಕೃತಿಕ ಮಹತ್ವ

Main Article Content

ಎಲ್.ಎಸ್. ಪಡತಾರೆ

Abstract

ಪ್ರಸ್ತುತದಲ್ಲಿ ತಂತ್ರಜ್ಞಾನವು ಮನುಷ್ಯನನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮಹಾಪಥವಾಗಿದೆ. ಲೋಕದಲ್ಲಿ ಮಾನವ ಜೀವನವು ಸಂಪೂರ್ಣವಾಗಿ ತಾಂತ್ರಿಕ ನೆಲೆಗಟ್ಟಿನಲ್ಲಿ ನಿಂತಂತಿದೆ. ತಂತ್ರಜ್ಞಾನವೆನ್ನುವುದು ಮನುಷ್ಯನ ಉದ್ಧಾರಕ್ಕೆ ಇರುವ ಹೆಬ್ಬಾಗಿಲಾದರೂ, ಅವನ ಒಳಿತಿಗಾಗಿ ಸರಿಯಾದ ದಾರಿಯನ್ನು ಸೃಷ್ಟಿಸುವ ನೈಜಶಕ್ತಿ ತಂತ್ರಜ್ಞಾನಕ್ಕಿಲ್ಲ. ಬೌದ್ಧಿಕವಾಗಿ ಮನುಷ್ಯ ಎಡವಿದಾಗ ತಂತ್ರಜ್ಞಾನವು ತಾತ್ಕಾಲಿಕವಾದ ಪರಿಹಾರವನ್ನು ಸೂಚಿಸಬಹುದು. ಆದರೆ ಆದ ಗಾಯಕ್ಕೆ ಸೂಕ್ಷ್ಮಸಂವೇದನೆಯ ಔಷಧಿಯನ್ನು ನೀಡುವ ಶಕ್ತಿ ತಂತ್ರಜ್ಞಾನಕ್ಕಿಲ್ಲ ಎಂಬುದು ಅಷ್ಟೇ ಸತ್ಯವಾಗಿದೆ. ಆದರೆ ಆಯಾ ಕಾಲದ ಸಾಹಿತ್ಯದ ಸೃಷ್ಟಿಯು ಮನುಷ್ಯನಿಗಾದ ನೋವನ್ನು ಶಮನಮಾಡುವ ಶಕ್ತಿಯನ್ನು ಹೊಂದಿದೆ. ಆ ಕಾರಣದಿಂದ ಸಾಹಿತ್ಯವನ್ನು ಅನುಭವ ಜನ್ಯದ “ಅನುಭವಾಮೃತ”ವೆಂದು ಹಿರಿಯರು ಸಂಬೋಧಿಸಿದ್ದಾರೆ. ಹಿಂದಿನ ಸಂಪ್ರದಾಯದ ಯುಗಕ್ಕೂ ಇಂದಿನ ತಂತ್ರಜ್ಞಾನದ ಯುಗಕ್ಕೂ ಅಗಾಧವಾದ ವ್ಯತ್ಯಾಸವನ್ನು, ನಮ್ಮ ಇಂದಿನ ಜೀವನ ಶೈಲಿಯಿಂದ ಕಂಡುಕೊಂಡಿದ್ದೇವೆ. ಮಾನವ ಜನಾಂಗವು ಅನೇಕ ಬದಲಾವಣೆಯ ಮಹಾಪರ್ವಗಳನ್ನು ಆಧರಿಸಿ ಅಭಿವೃದ್ಧಿಯೆಂದು ಹೇಳುವ ನಮ್ಮ ಈ ಸಮಾಜ ಆಂತರಿಕವಾದ ಗಟ್ಟಿತನವನ್ನು ಎಷ್ಟರಮಟ್ಟಿಗೆ ಸಾಧಿಸಿಕೊಂಡಿದೆ ಎಂಬುದನ್ನು ನಾವು ಪ್ರಶ್ನೆ ಮಾಡಿದಾಗ ಅದಕ್ಕೆ ನಮ್ಮ ಸೃಜನಶೀಲ ಸಾಹಿತ್ಯವು ಬಹುದೊಡ್ಡ ಮಟ್ಟದ ಉತ್ತರವನ್ನು ನೀರಸವೆಂಬಂತೆ ಸೂಚಿಸುವುದನ್ನು ಕಳೆದ ಎರಡು ದಶಕದಿಂದ ನೋಡುತ್ತಿದ್ದೇವೆ. ಈ ಲೇಖನದಲ್ಲಿ ನಾನು ತಾಂತ್ರಿಕ ಯುಗವೊಂದರಲ್ಲಿ ಸಾಹಿತ್ಯವು ಯಾವೆಲ್ಲ ಹಿನ್ನೆಲೆಯಿಂದ ಹೊಸಹೊಸ ರೂಪವನ್ನು ಪಡೆಯುತ್ತದೆ ಎಂಬುದನ್ನು ಚರ್ಚೆ ಮಾಡುತ್ತ, ಸತ್ವಭರಿತವಾದ ಸಾಹಿತ್ಯ ಸೃಷ್ಟಿಯ ಹಿನ್ನೆಲೆ ಮುನ್ನಲೆಗಳನ್ನು ವಿವರಿಸಲು ಇಚ್ಛಿಸುತ್ತೇನೆ. ಜೊತೆಗೆ ಬರವಣಿಗೆಗೆ ಇರುವ ಪ್ರಖರವಾದ ಶಕ್ತಿ ಎಂಥಹದ್ದು ಎಂಬುದನ್ನು ಇಲ್ಲಿ ತೋರಿಸಲು ಪ್ರಯತ್ನಿಸುತ್ತೇನೆ.

Article Details

Section

Research Articles

Author Biography

ಎಲ್.ಎಸ್. ಪಡತಾರೆ

ಶ್ರೀಮತಿ ಅ. ಅ. ಪಾಟೀಲ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು, ಚಿಕ್ಕೋಡಿ.

How to Cite

ಎಲ್.ಎಸ್. ಪಡತಾರೆ. (2025). ತಂತ್ರಜ್ಞಾನ ಯುಗದಲ್ಲಿ ಸಾಹಿತ್ಯ ಸೃಷ್ಟಿಯ ಸಾಂಸ್ಕೃತಿಕ ಮಹತ್ವ. ಅಕ್ಷರಸೂರ್ಯ (AKSHARASURYA), 8(01), 73 to 78. https://aksharasurya.com/index.php/latest/article/view/1361

References

ಅನಂತರಾಮು ಟಿ. ಆರ್., (2020), ವಿಜ್ಞಾನ ತಂತ್ರಜ್ಞಾನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ರಾಘವೇಂದ್ರ ಎಚ್. ಎಸ್., (2015), ವಿಶ್ಲೇಷಣೆ, ಸುರಭಿ ಪ್ರಕಾಶನ, ಬೆಂಗಳೂರು.

ನಾಗಭೂಷಣ ಓ.ಎಲ್. (ಸಂ), (2016), ವಿಜ್ಞಾನ ಸಾಹಿತ್ಯ ನಿರ್ಮಾಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.

ಶೈಲಜಾ ಬಿ. ಎಸ್. (ಸಂ), (2007), ವಿಜ್ಞಾನ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ತಿರುಮಲೇಶ ಕೆ.ವಿ. (ಅನು), (2018), ಜ್ಞಾನ ವಿಜ್ಞಾನ ತಂತ್ರಜ್ಞಾನ, ಕೇಂದ್ರ ಸಾಹಿತ್ಯ ಅಕಾಡೆಮಿ, ದೆಹಲಿ.