ಜನಪದ ಸಾಹಿತ್ಯ ಮತ್ತು ಆಧುನಿಕತೆ: ಒಂದು ಅವಲೋಕನ

Main Article Content

ಆನಂದ ಬಾರಿಕರ

Abstract

ಜನಪದ ಸಾಹಿತ್ಯ ಮತ್ತು ಆಧುನಿಕತೆಯ ನಡುವಿನ ಸಂಬಂಧವು ಸಂಕೀರ್ಣ ಮತ್ತು ಬಹುಮುಖಿಯಾಗಿದೆ. ಜನಪದ ಸಾಹಿತ್ಯವು ಆಧುನಿಕ ಜಗತ್ತಿನ ಸಂದರ್ಭದಲ್ಲಿ ತನ್ನ ಸಾಂಪ್ರದಾಯಿಕ ರೂಪ, ವಿಷಯ ಮತ್ತು ಮಹತ್ವವನ್ನು ಹೇಗೆ ಉಳಿಸಿಕೊಳ್ಳುತ್ತದೆ ಎಂಬುದನ್ನು ಈ ಸಂಬಂಧವು ತೋರಿಸುತ್ತದೆ. ಜನಪದ ಸಾಹಿತ್ಯವು ಒಂದು ಸಮುದಾಯದ ಬದುಕಿನ ಶೈಲಿ, ಸಂಸ್ಕೃತಿ ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಮೂಲತಃ ಕೃಷಿ ಸಂಸ್ಕೃತಿ, ದೇವರುದಿಂಡಿರು, ಜಾತ್ರೆ, ಹಬ್ಬಗಳು ಮತ್ತು ಕುಟುಂಬ ಸಂಬಂಧಗಳಿಗೆ ಸಂಬಂಧಿಸಿದೆ. ಜನಪದ ಹಾಡುಗಳು, ಕಥೆಗಳು, ಒಗಟುಗಳು ಮತ್ತು ಗಾದೆ ಮಾತುಗಳು ಮೌಖಿಕವಾಗಿ ತಲೆಮಾರುಗಳಿಂದ ಹರಿದುಬಂದಿವೆ. ಈ ಸಾಹಿತ್ಯವು ಒಂದು ಸಮುದಾಯದ ಸಾಮೂಹಿಕ ಸ್ಮೃತಿ ಮತ್ತು ಜ್ಞಾನದ ಆಗರವಾಗಿದೆ. 
ಪ್ರಸ್ತುತ ಲೇಖನದಲ್ಲಿ ಜಾನಪದ ಸಾಹಿತ್ಯ ಮೇಲೆ ಆಧುನಿಕತೆಯ ಪರಿಣಾಮಗಳು ಮತ್ತು ಒಡ್ಡಿರುವ ಸವಾಲುಗಳ ಪರಾಮರ್ಶನ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಜಾನಪದ ಸಾಹಿತ್ಯ ಮತ್ತು ಆಧುನಿಕರಣದಲ್ಲಿ ಪ್ರಧಾನವಾಗಿ ಶಿಕ್ಷಣ, ನಗರೀಕರಣ, ತಂತ್ರಜ್ಞಾನ ಇವು ಆಧುನಿಕ ಸಂದರ್ಭದಲ್ಲಿ ಜನಪದ ಸಾಹಿತ್ಯದ ಪುನರುಜ್ಜೀವನಕ್ಕೆ ಕಾರಣವಾಗಿವೆ. ಟಿ.ವ್ಹಿ., ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಮೋಬೈಲ್ ಮಾಧ್ಯಮಗಳಲ್ಲಿರುವ ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಂತಹ ತಂತ್ರಜ್ಞಾನಗಳ ಮೂಲಕ ಪ್ರಸಾರವಾಗುವ ಸಂಸ್ಕೃತಿ ಕಾರ್ಯಕ್ರಮಗಳಲ್ಲಿ, ಸಿನಿಮಾ, ರಂಗಭೂಮಿ ನಾಟಕಗಳಲ್ಲಿ ಜನಪದ ಹಾಡುಗಳು, ಕಥೆಗಳು ಆಧುನಿಕ ರೂಪದಲ್ಲಿ ಬಳಸಲ್ಪಡುತ್ತಿವೆ. ಆಧುನಿಕತೆಯು ಜನಪದ ಸಾಹಿತ್ಯಕ್ಕೆ ಸವಾಲುಗಳನ್ನು ಒಡ್ಡಿದರೂ, ಅದು ಅದಕ್ಕೆ ಹೊಸ ಜೀವನ ಮತ್ತು ವೇದಿಕೆಗಳನ್ನು ಒದಗಿಸಿದೆ. ಇದು ಜನಪದ ಸಾಹಿತ್ಯದ ರೂಪವನ್ನು ಬದಲಿಸಿರಬಹುದು, ಆದರೆ ಅದರ ಮೂಲ ಸಾರ ಮತ್ತು ಮೌಲ್ಯಗಳು ಇಂದಿಗೂ ಉಳಿದಿವೆ. ಹೀಗೆ ಪ್ರಸ್ತುತ ಲೇಖನದಲ್ಲಿ ಕೆಲವು ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಸಾದ್ಯಂತವಾಗಿ ಮಾಡಿದೆ.

Article Details

Section

Research Articles

Author Biography

ಆನಂದ ಬಾರಿಕರ

ಬೋಧನಾ ಸಹಾಯಕರು, ಕನ್ನಡ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ.

How to Cite

ಆನಂದ ಬಾರಿಕರ. (2025). ಜನಪದ ಸಾಹಿತ್ಯ ಮತ್ತು ಆಧುನಿಕತೆ: ಒಂದು ಅವಲೋಕನ. ಅಕ್ಷರಸೂರ್ಯ (AKSHARASURYA), 8(01), 37 to 49. https://aksharasurya.com/index.php/latest/article/view/1357

References

ಪರಮಶಿವಯ್ಯ ಜಿ.ಶಂ., (1997), ಜನಪದ ಕೆಲವು ಮುಖಗಳು, ಚೇತನ್ ಬುಕ್ ಹೌಸ್, ಮೈಸೂರು.

ಸಿಂಪಿಲಿಂಗಣ್ಣ, (1960), ಜನಾಂಗದ ಜೀವಾಳ, ವಸಂತ ಮುದ್ರಣಾಲಯ, ಧಾರವಾಡ.

ಶಂಕರ ನಾರಾಯಣ್ ತೀ.ನಂ., (1970), ಜಾನಪದ ಕೈಪಿಡಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಹಾಮಾನಾ, (2006), ಜಾನಪದ ಸ್ವರೂಪ, ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.