ಜಾನಪದ ಸಾಹಿತ್ಯ ಮತ್ತು ಆಧುನಿಕತೆ

Main Article Content

ಗುರುರಾಜ ಎಸ್. ನವಲಗುಂದ

Abstract

ಜಾನಪದ ಸಾಹಿತ್ಯವು ಕೇವಲ ಗ್ರಾಮೀಣ ಪ್ರದೇಶದ ಅಥವಾ ಅನಕ್ಷರಸ್ಥರ ಬದುಕಿನ ಅಭಿವ್ಯಕ್ತಿಯಲ್ಲ. ಇದು ಮಾನವ ನಾಗರಿಕತೆಯ ಮೂಲಬೇರುಗಳನ್ನು ಅರಸುವ ಹಾಗೂ ಮನುಷ್ಯನ ಅಸ್ತಿತ್ವದ ಮೂಲಭೂತ ಪ್ರಜ್ಞೆಯನ್ನು ಒಳಗೊಂಡಿರುವ ಒಂದು ಸಾರ್ವಕಾಲಿಕ ಜ್ಞಾನ ಭಂಡಾರವಾಗಿದೆ. ಇಡೀ ಜಗತ್ತಿನ ಶಿಷ್ಟ ಸಾಹಿತ್ಯದ ಮೂಲವನ್ನು ಜಾನಪದದಲ್ಲಿ ಕಾಣಬಹುದು ಎಂದು ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಈ ತತ್ವವನ್ನು ಬಿ. ಎಂ. ಶ್ರೀ ಅವರು ʼಜನವಾಣಿ ಬೇರು; ಕವಿವಾಣಿ ಹೂವುʼ ಎಂಬ ಹೃದಯಸ್ಪರ್ಶಿ ರೂಪಕದ ಮೂಲಕ ಸಮರ್ಥವಾಗಿ ವಿವರಿಸಿದ್ದಾರೆ. ಆಧುನಿಕತೆಯು ಕೇವಲ ತಂತ್ರಜ್ಞಾನದ ಪ್ರಗತಿಯಲ್ಲ, ಬದಲಾಗಿ ಮಾನವನ ಜೀವನಶೈಲಿ, ಚಿಂತನೆ ಮತ್ತು ಮೌಲ್ಯಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಒಂದು ಪ್ರವಾಹವಾಗಿದೆ. ಜಾನಪದ ಮತ್ತು ಆಧುನಿಕತೆಯ ನಡುವಿನ ಸಂಬಂಧವು ಸರಳವಾಗಿದೆಯೆಂದು ಭಾವಿಸುವುದು ಸರಿಯಲ್ಲ; ಇದು ಸಂಘರ್ಷ, ಹೊಂದಾಣಿಕೆ, ಮತ್ತು ಪರಸ್ಪರ ಪ್ರಭಾವದ ಒಂದು ಸಂಕೀರ್ಣ ಕ್ರಿಯೆಯಾಗಿದೆ. ಮಹಾತ್ಮ ಗಾಂಧೀಜಿಯವರು ಆಧುನಿಕತೆಯನ್ನು ʼಮೊಸಳೆ ಮೇಲಿನ ಸವಾರಿʼಗೆ ಹೋಲಿಸಿ, ಅದರ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ.
ಪ್ರಸ್ತುತ ಪ್ರಬಂಧವು ಜಾನಪದ ಸಾಹಿತ್ಯದ ಮೂಲ ಸ್ವರೂಪ ಮತ್ತು ಲಕ್ಷಣಗಳನ್ನು ವ್ಯಾಖ್ಯಾನಿಸಿ, ಆಧುನಿಕತೆಯು ಅದರ ಮೇಲೆ ಬೀರಿದ ಸವಾಲುಗಳು ಮತ್ತು ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. ಜಾನಪದವು ಹೇಗೆ ಈ ಸವಾಲುಗಳನ್ನು ಎದುರಿಸಿ ಹೊಸ ರೂಪಗಳಲ್ಲಿ ಪುನರ್ ವ್ಯಾಖ್ಯಾನಗೊಂಡಿದೆ ಮತ್ತು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಯಾವ ರೀತಿಯಲ್ಲಿ ಪ್ರಸ್ತುತವಾಗಿದೆ ಎಂಬುದನ್ನು ಇದು ಚರ್ಚಿಸುತ್ತದೆ. ಈ ಪ್ರಬಂಧದಲ್ಲಿ ಜಾನಪದವು ಸಂಪೂರ್ಣವಾಗಿ ನಾಶವಾಗದೆ, ಹೊಸ ಕಾಲಕ್ಕೆ ತಕ್ಕಂತೆ ಹೊರಳು ದಾರಿಯಲ್ಲಿದೆ ಎಂಬ ಪ್ರಮುಖ ಅಂಶವನ್ನು ಪರಿಶೀಲನೆಗೆ ಒಳಪಡಿಸಿ ನೋಡಲಾಗಿದೆ. ಡಾ. ಹಾ. ಮಾ. ನಾಯಕ ಅವರು ಫೋಕ್ಲೋರ್ (Folkore) ಎಂಬ ಪಾಶ್ಚಾತ್ಯ ಪದಕ್ಕೆ ಜಾನಪದ ಎಂಬ ಶಬ್ದವನ್ನು ಸಮಾನಾರ್ಥಕವಾಗಿ ಬಳಕೆಗೆ ತಂದರು, ಇದು ಜನಪದರ ಸಾಹಿತ್ಯ, ಸಂಗೀತ, ನೃತ್ಯ ಮತ್ತು ಆಟ ಸೇರಿದಂತೆ ಅವರ ಸಮಗ್ರ ಜ್ಞಾನವನ್ನು ಒಳಗೊಂಡಿದೆ. ಪ್ರಸ್ತುತ ಪ್ರಬಂಧದಲ್ಲಿ ವಿಷಯದ ಬಹುಆಯಾಮಗಳನ್ನು ಗಹನವಾಗಿ ಪರಿಶೀಲಿಸುವ ಯೋಜನೆ ಹೊಂದಿದೆ.


 

Article Details

Section

Research Articles

Author Biography

ಗುರುರಾಜ ಎಸ್. ನವಲಗುಂದ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಸ್‌ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಜಯಚಾಮರಾಜ ನಗರ, ಹುಬ್ಬಳ್ಳಿ.

How to Cite

ಗುರುರಾಜ ಎಸ್. ನವಲಗುಂದ. (2025). ಜಾನಪದ ಸಾಹಿತ್ಯ ಮತ್ತು ಆಧುನಿಕತೆ. ಅಕ್ಷರಸೂರ್ಯ (AKSHARASURYA), 8(01), 29-36. https://aksharasurya.com/index.php/latest/article/view/1356

References

ಸುನಂದಮ್ಮ ಆರ್., (1994), ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಲಾವಣ್ಯ ಮುದ್ರಣ, ಬೆಂಗಳೂರು.

ನಾಯಕ ಹಾ.ಮಾ., (2012), ಸಂಪ್ರತಿ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

ನಾಯಕ ಹಾ.ಮಾ., (2015), ಜಾನಪದ ಸ್ವರೂಪ, ಗೀತಾಂಜಲಿ ಪುಸ್ತಕ ಪ್ರಕಾಶನ, ಬೆಂಗಳೂರು.

ಚಂದ್ರಶೇಖರ ಕಂಬಾರ, (1964), ಹೇಳತೇನ ಕೇಳ, ಅಕ್ಷರ ಪ್ರಕಾಶನ, ಹೆಗ್ಗೋಡು.

ಚಂದ್ರಶೇಖರ ಕಂಬಾರ, (1968), ಬನ್ನೀಸಿ ಹಾಡವ್ವ ನನ್ನ ಬಳಗ, ಅಕ್ಷರ ಪ್ರಕಾಶನ, ಹೆಗ್ಗೋಡು.

ಚಂದ್ರಶೇಖರ ಕಂಬಾರ, (1972), ಜೋಕುಮಾರಸ್ವಾಮಿ, ಅಂಕಿತ ಪುಸ್ತಕ, ಬೆಂಗಳೂರು.

ಚಂದ್ರಶೇಖರ ಕಂಬಾರ, (1991), ಸಿರಿಸಂಪಿಗೆ, ಅಂಕಿತ ಪುಸ್ತಕ, ಬೆಂಗಳೂರು.

ಚಂದ್ರಶೇಖರ ಕಂಬಾರ, (1985), ಜಾನಪದ ವಿಶ್ವಕೋಶ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.