ಸಾಹಿತ್ಯ ಮತ್ತು ಮಾಧ್ಯಮಗಳ: ಪರಸ್ಪರ ಪ್ರಭಾವಗಳು

Main Article Content

ಶಿವಾನಂದ ತಡವಳ

Abstract

ಸಾಹಿತ್ಯವು ಮಾನವನ ಆಂತರಿಕ ಭಾವನೆ, ಚಿಂತನೆ ಮತ್ತು ಅನುಭವಗಳ ಪ್ರತಿಬಿಂಬವಾಗಿದ್ದು, ಮಾಧ್ಯಮವು ಆ ಭಾವನೆಗಳನ್ನು ಸಮಾಜದ ಮುಂದೆ ತಲುಪಿಸುವ ಸೇತುವೆಯಾಗಿದೆ. ಹಳೆಯ ಕಾಲದಲ್ಲಿ ಸಾಹಿತ್ಯವು ಮೌಖಿಕ ಸಂಪ್ರದಾಯ, ಪಾಠಮಾಲೆ, ಪುಸ್ತಕಗಳ ಮೂಲಕ ಮಾತ್ರ ಜನರಿಗೆ ತಲುಪುತ್ತಿದ್ದರೆ, ಇಂದಿನ ಯುಗದಲ್ಲಿ ಪತ್ರಿಕೆ, ರೇಡಿಯೋ, ದೂರದರ್ಶನ, ಸಿನೆಮಾ, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ತ್ವರಿತವಾಗಿ ವಿಶ್ವವ್ಯಾಪಕವಾಗುತ್ತಿದೆ. ಈ ಪ್ರಕ್ರಿಯೆಯಿಂದ ಸಾಹಿತ್ಯವು ವಿಸ್ತಾರವಾಗಿರುವುದಲ್ಲದೆ ಅದರ ರೂಪಶೈಲಿಗಳಲ್ಲಿಯೂ ಮಹತ್ವದ ಬದಲಾವಣೆಗಳು ಸಂಭವಿಸಿವೆ. ಮಾಧ್ಯಮಗಳ ಪ್ರಭಾವದಿಂದ ಹೊಸ ಸಾಹಿತ್ಯ ಪ್ರಕಾರಗಳು ಹುಟ್ಟಿಕೊಂಡಿವೆ. ರೇಡಿಯೋ ನಾಟಕ, ಟಿವಿ ಧಾರಾವಾಹಿ, ಚಲನಚಿತ್ರ, ಇಪುಸ್ತಕ, ಬ್ಲಾಗ್, ಮೈಕ್ರೋಫಿಕ್ಷನ್ ಮುಂತಾದವು. ಓದುಗರ ವಿಸ್ತರಣೆ, ಚರ್ಚೆವಿಮರ್ಶೆಯ ನೂತನ ವೇದಿಕೆಗಳು, ಸಾಹಿತ್ಯದ ಜೀವಂತಿಕೆ ಹೆಚ್ಚಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿವೆ. ಸಾಹಿತ್ಯ–ಮಾಧ್ಯಮಗಳು ಪರಸ್ಪರ ಪೂರಕವಾಗಿದ್ದು, ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಮೌಲ್ಯಾಧಾರಿತ ಸಾಹಿತ್ಯದ ವಿಸ್ತಾರ ಸಾಧ್ಯವಾಗುತ್ತದೆ.

Article Details

Section

Research Articles

Author Biography

ಶಿವಾನಂದ ತಡವಳ

ಸಹಾಯಕ ಪ್ರಾಧ್ಯಾಪಕರು, ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳ್ಕರ ವಿಶ್ವವಿದ್ಯಾಲಯ, ಸೊಲ್ಲಾಪುರ, ಮಹಾರಾಷ್ಟ್ರ.

How to Cite

ಶಿವಾನಂದ ತಡವಳ. (2025). ಸಾಹಿತ್ಯ ಮತ್ತು ಮಾಧ್ಯಮಗಳ: ಪರಸ್ಪರ ಪ್ರಭಾವಗಳು. ಅಕ್ಷರಸೂರ್ಯ (AKSHARASURYA), 8(01), 22 to 28. https://aksharasurya.com/index.php/latest/article/view/1355

References

ಪೂರ್ಣಿಮಾ ಟಿ.ಸಿ., (2006), ಆಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡದ ಅಭಿವೃದ್ಧಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಶಿವರಾಮ ಅಸುಂಡಿ, (2013), ಮಾಧ್ಯಮ ಮೌಢ್ಯ, ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ, ಕಲಬುರಗಿ.

ಸಿಬಂತಿ ಪದ್ಮನಾಭ ಕೆ.ವಿ., (2022), ಮಾಧ್ಯಮ ತಂತ್ರಜ್ಞಾನ, ಅಂಕುರ್ ಮೀಡಿಯಾ ಪಬ್ಲಿಕೇಶನ್ಸ್, ತುಮಕೂರು.

ಸಾರ್ವಜನಿಕ ಶಿಕ್ಷಣ ಇಲಾಖೆ, (2014-15), ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು.

ಸತೀಶ್ ಕುಮಾರ್ ಅಂಡಿಂಜ, (2022), ಸಮೂಹ ಮಾಧ್ಯಮ ಸಂಶೋಧನೆ, ಸ್ನೇಹಾ ಎಂಟರ್‌ಪ್ರೈಸಸ್, ಬೆಂಗಳೂರು.