ಸಂಸ್ಕೃತ ಅಲಂಕಾರ ಗ್ರಂಥಗಳ ಕನ್ನಡ ಅನುವಾದ
Main Article Content
Abstract
ಕನ್ನಡ ಸಾಹಿತ್ಯ ಸುಮಾರು 1300 ವರ್ಷಗಳ ಇತಿಹಾಸದಲ್ಲಿ ಭಾಷಾಂತರಗಳಿಂದ ಸಮೃದ್ಧವಾಗಿದೆ. ಈ ಭಾಷಾಂತರ ಪರಂಪರೆ ಮತ್ತು ಪ್ರಕ್ರಿಯೆಯನ್ನು ಕವಿರಾಜಮಾರ್ಗ ಕಾಲದಿಂದಲೇ ಗುರುತಿಸಬಹುದು. ಸಂಸ್ಕೃತಪ್ರಾಕೃತಗಳಿಂದ ಹಾಗೂ ಇಂಗ್ಲಿಷಿನಿಂದ ಭಾಷಾಂತರ ಗ್ರಂಥಗಳ ರಚನೆಯಾಗಿದೆ. ಆದರೆ ಪ್ರಾಚೀನ ಕನ್ನಡ ಸಾಹಿತ್ಯವೆಲ್ಲ ಭಾಷಾಂತರವೆಂದು ಹೇಳುವುದು ಸೂಕ್ತವಲ್ಲ. ಆದರೆ ಹಿಂದಿನ ಕನ್ನಡ ಕವಿಗಳು ಸಂಸ್ಕೃತ ಪ್ರಾಕೃತಗಳಿಂದ ಸ್ವೀಕರಿಸುತ್ತಿದ್ದರೆಂಬ ವಿಶಾಲ ಅರ್ಥದಲ್ಲಿ ಅವರ ಕೃತಿಗಳನ್ನು ಭಾಷಾಂತರ ಎನ್ನಬಹುದು. ಆದರೆ ಕವಿಗಳ ಕಾವ್ಯದಲ್ಲಿ ಪ್ರತಿಭೆ, ಸ್ವೋಪಜ್ಞತೆಗಳನ್ನು ಕಾಣಬಹುದಾದ್ದರಿಂದ ಅವುಗಳನ್ನು ಭಾಷಾಂತರವೆಂಬುದಕ್ಕಿಂತ ಸ್ವತಂತ್ರ ಕೃತಿಗಳೆಂದೇ ಹೇಳಬೇಕಾಗುತ್ತದೆ. ಒಟ್ಟಿನಲ್ಲಿ ಪ್ರಾಚೀನ ಕನ್ನಡ ಕೃತಿಗಳು ಸ್ಥೂಲವಾಗಿ ಅಂಶತಃ ಭಾಷಾಂತರಗಳೇ ಆಗಿವೆ. ಅಲಂಕಾರಶಾಸ್ತ್ರ ಗ್ರಂಥಗಳ ಕನ್ನಡ ಭಾಷಾಂತರದ ವಿಷಯಕ್ಕೆ ಬಂದರೆ ಆಧುನಿಕವಾಗಿ ನಮ್ಮ ಕಣ್ಣಮುಂದೆ ನಿಲ್ಲುವ ವ್ಯಕ್ತಿಯೆಂದರೆ ಡಾ. ಕೆ ಕೃಷ್ಣಮೂರ್ತಿಯವರು. ಇವರು ಭಾಗಶಃ ಹೆಚ್ಚಿನ ಎಲ್ಲ ಸಂಸ್ಕೃತ ಲಾಕ್ಷಣಿಕ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಿ ವಿಮರ್ಶಿಸಿದ್ದಾರೆ ಕೂಡ. ಕನ್ನಡ ಧ್ವನ್ಯಾಲೋಕ ಮತ್ತು ಲೋಚನ ಸಾರ (1961), ಕನ್ನಡ ಕಾವ್ಯಾಲಂಕಾರ (1961), ಕನ್ನಡ ಕಾವ್ಯಾಲಂಕಾರಸೂತ್ರವೃತ್ತಿ (1967), ಕನ್ನಡ ಕಾವ್ಯಪ್ರಕಾಶ (1973) ಕನ್ನಡ ಕಾವ್ಯಮೀಮಾಂಸೆ (1969), ಕನ್ನಡ ಕಾವ್ಯಾದರ್ಶ (1975), ಔಚಿತ್ಯ ವಿಚಾರ ಚರ್ಚಾ, ರಸೋಲ್ಲಾಸ, ಭಾರತೀಯ ಕಾವ್ಯಮೀಮಾಂಸೆ ತತ್ತ್ವ ಮತ್ತು ಪ್ರಯೋಗ (1971) ಕೃಷ್ಣಮೂರ್ತಿಯವರ ಪ್ರಸಿದ್ಧ ಭಾಷಾಂತರ ಗ್ರಂಥಗಳು. ಅದೇ ರೀತಿ ಧನಂಜಯನ ದಶರೂಪಕವನ್ನು (1958) ಕೆ.ವಿ. ಸುಬ್ಬಣ್ಣ ಕನ್ನಡಕ್ಕೆ ಅನುವಾದಿಸಿದ್ದಾರೆ.
ಸಂಸ್ಕೃತ ಅಲಂಕಾರಶಾಸ್ತ್ರ ಗ್ರಂಥಗಳ ಕನ್ನಡ ಭಾಷಾಂತರಗಳ ಪರಿಶೀಲನೆಯ ಈ ಪ್ರಕ್ರಿಯೆಯಲ್ಲಿ ಡಾ. ಕೆ. ಕೃಷ್ಣಮೂರ್ತಿಯವರ ಹೆಸರಿಗೆ ಅಗ್ರಪಟ್ಟ. ಆದರೂ ಪ್ರಸ್ತುತ ಪ್ರಬಂಧದಲ್ಲಿ ಅವರ ಎಲ್ಲಾ ಅನುವಾದ ಗ್ರಂಥಗಳ ಪರಿಶೀಲನೆ ಸಾಧ್ಯವಾಗಲಿಲ್ಲ. ಸಮಯಾಭಾವವೊಂದೆಡೆಯಾದರೆ ಪ್ರಬಂಧವಿಸ್ತಾರತೆಯ ಭಯ ಕೂಡ ಅದಕ್ಕೆ ಬಹುಮುಖ್ಯ ಕಾರಣ. ಆದರೂ ದೊರೆತ ಅವರ ಪುಸ್ತಕಗಳನ್ನು ಯಥಾಮತಿ ಚರ್ಚಿಸಿ ವಿಶ್ಲೇಷಿಸಲಾಗಿದೆ. ಶಾಸ್ತ್ರಗ್ರಂಥಗಳನ್ನು ಕನ್ನಡದಲ್ಲಿ ಓದುವ ಮತ್ತು ಅರ್ಥೈಸಿಕೊಳ್ಳುವ ಸುಯೋಗ ಈ ಭಾಷಾಂತರ ಪ್ರಕ್ರಿಯೆಯಿಂದ ಸಾಧ್ಯವಾಗಿದೆ ಎಂಬಲ್ಲಿಗೆ ಪ್ರತಿಯೊಬ್ಬ ಓದುಗನ ಜೀವನ ಹಾಗೂ ಭಾಷಾಂತರಕಾರರ ಶ್ರಮ ಸಾರ್ಥಕವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮುಗಳಿ ರಂ.ಶ್ರೀ., (2010), ಕನ್ನಡ ಸಾಹಿತ್ಯ ಚರಿತ್ರೆ (ಪರಿಷ್ಕೃತ ಸಂಸ್ಕರಣ), ಗೀತಾ ಬುಕ್ ಹೌಸ್, ಮೈಸೂರು.
ಶೇಷಗಿರಿರಾವ್ ಎಲ್.ಎಸ್., (1974), ಹೊಸಗನ್ನಡ ಸಾಹಿತ್ಯ ಚರಿತ್ರೆ, ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು.
ಶ್ರೀಕಂಠಯ್ಯ ತೀ.ನಂ., (1990), ಭಾರತೀಯ ಕಾವ್ಯಮೀಮಾಂಸೆ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
ತಿಪ್ಪೆರುದ್ರಸ್ವಾಮಿ ಎಚ್., (1998), ತೌಲನಿಕ ಕಾವ್ಯಮೀಮಾಂಸೆ, ಡಿ ವಿ ಕೆ ಮೂರ್ತಿ ಪ್ರಕಾಶಕರು, ಮೈಸೂರು.
ಕೃಷ್ಣಮೂರ್ತಿ ಕೆ., (1975), ಕನ್ನಡ ಕವಿಕಾವ್ಯಮಾಲೆ, ಶಾರದಾಮಂದಿರ, ಮೈಸೂರು.
ಕೃಷ್ಣಮೂರ್ತಿ ಕೆ., (2014), ರಾಜಶೇಖರನ ಕನ್ನಡ ಕಾವ್ಯಮೀಮಾಂಸೆ, ಸಂಸ್ಕೃತ ಸಂಶೋಧನ ಪ್ರತಿಷ್ಠಾನ (ರಿ), ಮೈಸೂರು.
ಕೃಷ್ಣಮೂರ್ತಿ ಕೆ., (2007), ಆನಂದವರ್ಧನನ ಕಾವ್ಯಮೀಮಾಂಸೆ ಮತ್ತು ಕನ್ನಡ ಧ್ವನ್ಯಾಲೋಕ, ಅಭಿನವ ಪ್ರಕಾಶನ, ಬೆಂಗಳೂರು.
ಸುಬ್ಬಣ್ಣ ಕೆ.ವಿ., (1992), ಧನಂಜಯನ ದಶರೂಪಕ, ಅಕ್ಷರ ಪ್ರಕಾಶನ, ಹೆಗ್ಗೋಡು, ಕರ್ನಾಟಕ.