ತತ್ವಪದಕಾರರು ಮತ್ತು ಬದುಕುಬರಹ: ಒಂದು ನೋಟ
Main Article Content
Abstract
ಜನಪದರ ಬದುಕಿನ ಬೇರಿನಿಂದ ಜನಪದ ಸಾಹಿತ್ಯ ಬೆಳವಣಿಗೆ ಕಂಡಿರುವಂತೆ ತತ್ವಪದಕಾರರೂ ಕೂಡ ಜನಪದ ಸಾಹಿತ್ಯದಿಂದಲೇ ಬೆಳೆದ ಕವಿಗಳು. ಅವರು ಆಧ್ಯಾತ್ಮಿಕ ಜೀವಿಗಳಷ್ಟೇ ಅಲ್ಲ, ಅನುಭಾವಿಗಳು ಹೌದು. ಆಧ್ಯಾತ್ಮವೇ ಜೀವಾಳವಾಗಿಸಿಕೊಂಡ ತತ್ವಪದಗಳ ಉಗಮ 12ನೇ ಶತಮಾನದಲ್ಲಿ ಆಯಿತು.
ತತ್ವಪದಕಾರರು ಒಂದೇ ಒಂದು ಮತಕ್ಕೆ ಸೀಮಿತವಾದವರಲ್ಲ. ಅವರ ತತ್ವಗಳು ಸಾಮಾಜಿಕಧಾರ್ಮಿಕ ಪರಿಕಲ್ಪನೆಗಳಾಗಿವೆ. ಅವರದು ವೈವಿಧ್ಯತೆಯಲ್ಲಿ ಏಕತೆಯನ್ನು ಮೂಡಿಸುವ ಮನೋಧರ್ಮವಾಗಿದೆ. ಸಮಾಜದಲ್ಲಿ ತುಂಬಿರುವ ಅಸಮಾನತೆಯ ಭಾವನೆಯನ್ನು ತೊಡೆದು ಹಾಕಲು ತತ್ವಪದಕಾರರು ಆಯ್ಕೆ ಮಾಡಿಕೊಂಡಿರುವ ಸಾಧನವೆಂದರೆ ಅದುವೇ ಆಧ್ಯಾತ್ಮಿಕತೆ. ಆಡು ಭಾಷೆಯನ್ನೇ ಬಳಸಿ ಅನೇಕ ತತ್ವಪದಗಳನ್ನು ರಚಿಸುವುದರ ಮೂಲಕ ಜನತೆಯಲ್ಲಿ ವೈಚಾರಿಕತೆಯ ಪ್ರಜ್ಞೆಯನ್ನು ಬಿತ್ತುವ ಪ್ರಯತ್ನ ಮಾಡಿದರು ಎಂದರೆ ತಪ್ಪಾಗಲಾರದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಮಲ್ಲಿಕಾರ್ಜುನ ಜೆ. ಆಮ್ಣೆ, (2008), ದಲಿತ ತತ್ವಪದಕಾರ ಕಾಶಿನಾಥ ಪಂಚಶೀಲ ಗವಾಯಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ಮೀನಾಕ್ಷಿ ಬಾಳಿ, 2021, ತತ್ವಪದ ಒಳಗಿನ ತಿಳಿವು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ನಂಜುಂಡಸ್ವಾಮಿ ಬಿ., (2020), ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ಕೆಂಪಣ್ಣವರ ಸಿ.ಜೆ., (2007), ಜ್ಞಾನ ಒಂದು ಇದ್ದ ಮ್ಯಾಲ ಮಾನ ಕೇನ ಕಡ್ಮಿ ಇಲ್ಲ, ಕನ್ನಡ ಜಾಗೃತಿ ಪುಸ್ತಕ ಮಾಲೆ, ರಾಯಚೂರು.
ಪಂಚಾಕ್ಷರಿ ಬಿ. ಪೂಜಾರಿ, (2006), ತತ್ವ ಸಂಪದ: ದಂಡಗುಂಡ, ಬಸವೇಶ್ವರ ಪ್ರಕಾಶನ, ಕಲಬುರಗಿ.
ವಿಜಯಶ್ರಿ ಸಬರದ, (1997), ಗುರು ಶಿಷ್ಯರ ತತ್ವಪದಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.
ರಾಜಶ್ರೀ ಕಿಶೋರ್, (2021), ತತ್ವಪದಕಾರರ ಸಾಹಿತ್ಯ ಧಾರೆ, ಶೇಖರಯ್ಯ ನಂದಿ ಪ್ರಕಾಶನ, ರಾಯಚೂರು.
ಮೀನಾಕ್ಷಿ ಬಾಳಿ, (2021), ತತ್ವಪದದೊಳಗಿನ ತಿಳಿವು, ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ, ಕಲಬುರಗಿ.
ಪೀರ್ ಭಾಷಾ ಬಿ., (2006), ಶಿವಪ್ಪನವರ ತತ್ವಪದಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.