ಗಿರೀಶ ಕಾರ್ನಾಡರ ಜೀವನ ಮತ್ತು ನಾಟಕಗಳ ವೈಶಿಷ್ಟ್ಯಗಳು
Main Article Content
Abstract
ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡ ಸಾಹಿತ್ಯ ಮತ್ತು ನಾಟಕ ಕ್ಷೇತ್ರದ ಮೇರು ದಿಗ್ಗಜ ಗಿರೀಶ ಕಾರ್ನಾಡ. ಇವರು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಮ್ಮ ಶಿಕ್ಷಣವನ್ನು ಮಾಥೇರಾನ, ಧಾರವಾಡ ಮತ್ತು ಮುಂಬೈಯಲ್ಲಿ ಶಿಕ್ಷಣ ಪೂರ್ಣಗೊಳಿಸಿದರು. ಇವರು ಸಮಕಾಲೀನ ಬದುಕಿನ ಸಂಕೀರ್ಣತೆಯನ್ನು ಪರಂಪರೆಯ ಮೌಲ್ಯಗಳೊಂದಿಗೆ ಇಟ್ಟು ಅನುಭವ ಮತ್ತು ಅರ್ಥಸ್ತರಗಳನ್ನು ನಾಟಕ ಮೂಲಕವೇ ವಿಸ್ತರಿಸಿದರು.
ಕನ್ನಡ ನಾಟಕ ಕ್ಷೇತ್ರದಲ್ಲಿ ಕಾರ್ನಾಡರ ಆಗಮನದ ಸಂದರ್ಭ ಗಮನಾರ್ಹವಾದ ಅಂಶ. ಅದು ವಾಸ್ತವ ಮಾರ್ಗದ ನಾಟಕಗಳ ಕೊರತೆಯ ಕಾಲ. ಶ್ರೀರಂಗರಂತಹ ಪ್ರಮುಖ ನಾಟಕಕಾರರೇ ಹೊಸ ನಾಟಕಗಳ ರಚನೆಗೆ ತೊಡಗಿದ ಸಮಯ. ಪಾಶ್ಚಿಮಾತ್ಯ ನಾಟಕಕಾರರ ಕೃತಿಗಳು ಹೊಸ ಸಾಧನೆಯ ದಿಗಂತವನ್ನು ಅವರಿಗೆ ಸೂಚಿಸಿದವು. ಹೊಸ ದೃಷ್ಟಿಕೋನ, ತುಡಿತ ಅವರಲ್ಲಿ ಮೂಡಿತು. ಭಾರತದ ಹಲವಾರು ಭಾಷೆಗಳ ರಂಗಭೂಮಿಯ ಮೇಲೆ ಯಶಸ್ವಿ ಪ್ರಯೋಗ ಕಂಡ ಅವರ ನಾಟಕಗಳು ಪ್ರೇಕ್ಷಕರನ್ನು ಮರುಳುಗೊಳಿಸಿತ್ತು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅಮೂರ ಜಿ.ಎಸ್., (2008), ಸಾತ್ವಿಕ ಪಥ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.
ಮರುಳಯ್ಯ ಸಾ.ಶಿ. (2010), ಭಾರತೀಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಪ್ನ ಬುಕ್ ಹೌಸ್, ಬೆಂಗಳೂರು.
ಶೇಷಗಿರಿರಾವ್ ಎಲ್.ಎಸ್., (2013), ಹೊಸಗನ್ನಡ ಸಾಹಿತ್ಯ ಚರಿತ್ರೆ, ಅಂಕಿತ ಪುಸ್ತಕ, ಬೆಂಗಳೂರು.