ನೂರ್ ಜಹಾನ್ ಅವರ ಸಣ್ಣ ಕಥೆಗಳಲ್ಲಿನ ವಸ್ತು ವೈಶಿಷ್ಟ್ಯತೆ

Main Article Content

ವಿಜಯಲಕ್ಷ್ಮಿ ಎನ್.

Abstract

ಕಥೆ, ಕವನ, ಕಾದಂಬರಿ ಹೀಗೆ ಭಿನ್ನ ಆಯಾಮಗಳ ಸಾಹಿತ್ಯ ಪ್ರಕಾರಗಳಲ್ಲಿ ರೂಪುಗೊಂಡಿರುವ ನೂರ್ ಜಹಾನ್ ಅವರ 6ನೆಯ ಪುಸ್ತಕವಾದ “ಪರಿವರ್ತನೆ” ಕಥಾ ಸಂಕಲನವು ತನ್ನ ಒಡಲಲ್ಲಿ ಹತ್ತು ಕಥೆಗಳನ್ನು ಇರಿಸಿಕೊಂಡಿದ್ದು, ಪ್ರತಿಯೊಂದು ಕಥೆಯು ವಿಭಿನ್ನ ವಸ್ತು ವಿಷಯಗಳನ್ನು ಒಳಗೊಂಡಿರುವ ವೈವಿಧ್ಯಮಯ ಕಥಾ ಗುಚ್ಛವನ್ನು ಕಾಣಬಹುದು. ಈ ಎಲ್ಲಾ ಕಥೆಗಳು ಮನುಷ್ಯನ ಬದುಕಿಗೆ ಪ್ರಾಮುಖ್ಯತೆ ನೀಡುವ ಮತ್ತು ಬದುಕಿನ ಸವಾಲುಗಳಿಗೆ ಎದೆಗುಂದದೆ ಮುನ್ನಡೆಯುವ, ಜೀವನುತ್ಸಾಹದ ಬದುಕೇ ಅರ್ಥಪೂರ್ಣವಾದ ಅರಿವು ಎಂಬುದನ್ನು ಮನದಟ್ಟು ಮಾಡುವ ಕಡೆಗೆ ರಚಿತವಾಗಿವೆ.
ಕುಟುಂಬದೊಳಗಿನ ಸಂಬಂಧ, ಸ್ನೇಹಪರತೆ, ಗಂಡ-ಹೆಂಡತಿಯ ನಡುವೆ ಇರಬೇಕಾದ ಅನ್ಯೋನ್ಯತೆ, ಆಸ್ತಿ ವಿಚಾರದಲ್ಲಿನ ಒಡಕು, ಪರಿಸ್ಥಿತಿಗಳ ಒಡೆತಕ್ಕೆ ಸಿಲುಕಿ ನಲುಗಿದ ಮನಸ್ಸುಗಳು, ಇತರರ ಸಂತೋಷದಲ್ಲಿ ನೋವನ್ನು ಮರೆಯುವ ಸಾರ್ಥಕತೆ, ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮಾನವೀಯತೆ ಹೀಗೆ ಹಲವು ವಿಷಯಗಳ ಮೂಲಕ ಮೈತಳೆದಿರುವ ಈ ಕಥಾ ಸಂಕಲನ ಓದುಗರನ್ನು ಮತ್ತಷ್ಟು ಆಳಕ್ಕಿಳಿಸಿ ಓದಿಸಿಕೊಳ್ಳುವ ಕೃತಿಯಾಗಿದೆ.

Article Details

Section

Research Articles

Author Biography

ವಿಜಯಲಕ್ಷ್ಮಿ ಎನ್.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನ ಭಾರತಿ, ಬೆಂಗಳೂರು.

How to Cite

ವಿಜಯಲಕ್ಷ್ಮಿ ಎನ್. (2025). ನೂರ್ ಜಹಾನ್ ಅವರ ಸಣ್ಣ ಕಥೆಗಳಲ್ಲಿನ ವಸ್ತು ವೈಶಿಷ್ಟ್ಯತೆ. ಅಕ್ಷರಸೂರ್ಯ (AKSHARASURYA), 7(04), 138 to 145. https://aksharasurya.com/index.php/latest/article/view/1309

References

ಆನಂದ್ ಋಗ್ವೇದಿ, (2011), ಕಥಾ ಸ್ವರೂಪ, ರೂಪ ಪ್ರಕಾಶನ, ಮೈಸೂರು.

ನೂರ್ ಜಹಾನ್, (2023), ಪರಿವರ್ತನೆ, ಅಚಲಾ ಪ್ರಕಾಶನ, ನೆಲಮಂಗಲ.

ಕಮಲೇಶ್ವರ್ (ಸಂ), ಹೆಗಡೆ ಆರ್.ಪಿ. (ಅನು), (2007), ಕಥಾ ಸಂಸ್ಕೃತಿ: ಭಾಗ–1, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು.