ಕನ್ನಡ ಶಾಸ್ತ್ರಸಾಹಿತ್ಯ ಪಠ್ಯ ಮತ್ತು ಸಂಪಾದನೆ

Main Article Content

ಸುನೀಲ್ ಐ.ಎಸ್.

Abstract

ಸಾಹಿತ್ಯ ಜೀವನದ ಪ್ರತಿಬಿಂಬ. ಸಾಹಿತ್ಯದ ಹೂರಣ ಬಗೆಬಗೆಯಲ್ಲಿ ಮಾನವನನ್ನು ನೈತಿಕ ವ್ಯಕ್ತಿಯನ್ನಾಗಿಸುತ್ತದೆ. ಈ ನೆಲೆಯಲ್ಲಿ ಶಾಸ್ತ್ರ ಸಾಹಿತ್ಯವು ಸಾಹಿತ್ಯದ ಜೊತೆಯಲ್ಲಿಯೇ ಕನ್ನಡ ಸಾಹಿತ್ಯಾದ್ಯಂತ ಸಂಸ್ಕೃತಿಯನ್ನು ಪ್ರಸರಿಸಿದೆ. ಶಾಸ್ತ್ರಸಾಹಿತ್ಯವು ಮಾನವನ ಆಧ್ಯಾತ್ಮಿಕ ಮತ್ತು ಲೌಕಿಕ ಬದುಕಿಗೆ ನೇರವಾಗಿ ಮಾರ್ಗದರ್ಶನ ಮಾಡುವುದರ ಮೂಲಕ ಆತನನ್ನು ಸರಿದಾರಿಯಲ್ಲಿ ಮುನ್ನಡೆಸಲು ಸಹಕರಿಸುತ್ತದೆ. ಆಹಾರದ ಕುರಿತಾದ ಸೂಪಶಾಸ್ತ್ರ, ಆರೋಗ್ಯದ ಕುರಿತಾದ ವೈದ್ಯಶಾಸ್ತ್ರ, ಯುದ್ಧ ಸಂಬಂಧಿ ಕಲೆಗಳಿಗೆ ಅಶ್ವ, ಗಜಶಾಸ್ತ್ರ; ಆಂತರಿಕ ಬದುಕಿಗೆ ಮಾರ್ಗದರ್ಶಕವಾಗಿ ಆಗಮಿಕ ಶಾಸ್ತ್ರ, ಕಾಮಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ - ಹೀಗೆ ಶಾಸ್ತ್ರದ ಹರವು ತುಂಬಾ ವಿಸ್ತಾರವಾದದ್ದು. ಅಂಥ ಶಾಸ್ತ್ರದ ಸ್ವರೂಪ ಮತ್ತು ಪ್ರಕಾರಗಳನ್ನು, ಅದರ ಸಂಪಾದನೆಯಲ್ಲಿ ಆಗಿರುವ ಪಠ್ಯೀಕರಣದ ಭಿನ್ನ ನೆಲೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

Article Details

Section

Research Articles

Author Biography

ಸುನೀಲ್ ಐ.ಎಸ್.

ಸಂಶೋಧನಾ ವಿದ್ಯಾರ್ಥಿ, ಹಸ್ತಪ್ರತಿಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

How to Cite

ಸುನೀಲ್ ಐ.ಎಸ್. (2025). ಕನ್ನಡ ಶಾಸ್ತ್ರಸಾಹಿತ್ಯ ಪಠ್ಯ ಮತ್ತು ಸಂಪಾದನೆ. ಅಕ್ಷರಸೂರ್ಯ (AKSHARASURYA), 7(04), 129 to 137. https://aksharasurya.com/index.php/latest/article/view/1308

References

ಅಂಗಡಿ ಎಸ್.ಎಸ್., (2003), ಕನ್ನಡ ಸಂಪಾದನೆ ಶಾಸ್ತ್ರ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ಅಂಗಡಿ ಎಸ್.ಎಸ್., (2010), ಹಸ್ತಪ್ರತಿ ಅಧ್ಯಯನ ಸಂಪುಟ-೭, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ನಟರಾಜ್ ಬೂಧಾಳ್ ಎಸ್., (2020), ಸಂಸ್ಕೃತಿ ಮೀಮಾಂಸೆ, ಸಪ್ನ ಬುಕ್ ಹೌಸ್, ಬೆಂಗಳೂರು.

ಕೃಷ್ಣಮೂರ್ತಿ ಕೆ., (2017), ಆನಂದ ವರ್ಧನನ ಕಾವ್ಯ ಮೀಮಾಂಸೆ, ಸತ್ಯಶ್ರೀ ಪ್ರಿಂಟರ್ಸ್, ಬೆಂಗಳೂರು.

ಶೇಷಯ್ಯಂಗಾರ್ ಹೆಚ್. (ಸಂ), (೧೯೫೦), ಲೋಕೋಪಕಾರ ಗೌರ್ನಮೆಂಟ್ ಓರಿಯಂಟಲ್ ಮ್ಯಾನ್ಯುಸ್ಕ್ರಿಪ್ಟ್ ಲೈಬ್ರರಿ, ಮದ್ರಾಸ್.

ವಿರೇಶ ಬಡಿಗೇರ, (2006), ಕನ್ನಡ ಹಸ್ತಪ್ರತಿಗಳ ಬಹುಪಠ್ಯೀಯ ನೆಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಮಲ್ಲೇಪುರಂ ಜಿ. ವೆಂಕಟೇಶ್‌ (ಸಂ), (1999), ಶಿವತತ್ವರತ್ನಾಕರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.