ಶರಣರ ವಚನಗಳಲ್ಲಿ ಪರಿಸರ ಪ್ರಜ್ಞೆ
Main Article Content
Abstract
ವಚನಕಾರರು ಪರಿಸರವನ್ನು ದೇವರ ಸಮಾನವಾಗಿ ಕಂಡು ಅದನ್ನು ಪೂಜಿಸುವುದು ಮತ್ತು ಸಂರಕ್ಷಿಸುವುದನ್ನು ಪ್ರತಿಪಾದಿಸಿದ್ದಾರೆ. ಪರಿಸರವನ್ನು ಭೌತಿಕ ವಸ್ತುವಾಗಿ ನೋಡದೆ, ಅದು ದೈವತ್ವದ ಅಭಿವ್ಯಕ್ತಿ ಮತ್ತು ಮನುಷ್ಯ-ಪ್ರಕೃತಿ ಒಂದೇ ಎಂದು ನಂಬಿದವರು ಅವರು. ಪಶು, ಪ್ರಾಣಿ, ಕೀಟ, ಸಸ್ಯ, ಸಂಕುಲ ಸಮತೋಲನದಲ್ಲಿದ್ದರೆ ಜಗತ್ತು ಚೆನ್ನಾಗಿರುತ್ತದೆ, ಪರಿಸರ ಉತ್ತಮವಾಗಿದ್ದರೆ ಮಾತ್ರ ಎಲ್ಲರೂ ಸುಖವಾಗಿ ಬಾಳಲು ಸಾಧ್ಯವಾಗುತ್ತದೆ. ಪರಿಸರದ ಮೇಲೆ ಮಾನವನ ದೌರ್ಜನ್ಯ ನಿಲ್ಲಬೇಕು. ಪಂಚಭೂತಗಳು ದೇವರ ಭಿಕ್ಷೆ, ಅವುಗಳನ್ನು ಕಲುಷಿತಗೊಳಿಸುವುದು ಮನುಷ್ಯನಿಗೆ ಸಲ್ಲದು. ಬಸವಣ್ಣನವರು ಒಂದು ಜೀವಿಗೂ ತೊಂದರೆ ಕೊಡದಂತೆ ಬದುಕಬೇಕೆಂದು “ಕೊಲ್ಲೆನ್ನಯ್ಯ, ಮೆಲ್ಲೆನ್ನಯ್ಯ” ಎಂದು ಜೀವನದ ಪವಿತ್ರತೆಯನ್ನು ಸಾರಿದ್ದಾರೆ. “ದಯವೇ ಧರ್ಮದ ಮೂಲ. ಭಯದ ಧರ್ಮ ಬೇಡ” ಎಂದು ಶರಣರು ಬೋಧಿಸಿದ್ದಾರೆ. ಶರಣರ ಚಿಂತನಾ ಕ್ರಮದಲ್ಲಿ ಪ್ರಜ್ಞೆ ಎನ್ನುವುದು ಮನುಷ್ಯನಲ್ಲಿ ಆಂತರಿಕವಾಗಿ ನಡೆಯುವ ಕ್ರಿಯೆ. ಪ್ರಜ್ಞೆ ಇಲ್ಲಿ ಅಂತರಂಗದ ದನಿ. ಪರಿಸರ- ಮನುಷ್ಯನ ಸುತ್ತಮುತ್ತಲಿನ ಹೊರಲೋಕ. ಜೀವಜಾಲವನ್ನು ತನ್ನ ಒಡಲಲ್ಲಿ ಇಟ್ಟುಕೊಂಡ ಬಾಹ್ಯ ಲೋಕ. ಒಂದು ಅಂತರಂಗದ ಅರಿವಾದರೆ, ಇನ್ನೊಂದು ಜೀವಲೋಕವನ್ನು ಹೊರಗಿನಿಂದ ಪೊರೆಯುವಂತಹುದು ಮತ್ತು ಜಾಗತಿಕ ತಾಪಮಾನ ನಿಯಂತ್ರಿಸಲು ಮೂಡಿಸುವ ಅರಿವು ಪರಿಸರ ಪ್ರಜ್ಞೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಪ್ರಕೃತಿ ಸಂರಕ್ಷಣೆಯೇ ಮನುಷ್ಯನಿಗಿರಬೇಕಾದ ಪರಿಸರ ಪ್ರಜ್ಞೆ. ನಿರುಪಾದಿಕವಾಗಿರುವ ಭೂಮಿ, ಆಕಾಶ, ಅಗ್ನಿ, ವಾಯು, ಜಲ ಎಲ್ಲವೂ ಕೂಡಿದ ಒಟ್ಟು ಅಂಶವೇ ಪ್ರಕೃತಿಯಲ್ಲವೇ? ವಚನ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯನ್ನು ಪ್ರಕೃತಿ ಶಬ್ದದ ಹಿನ್ನೆಲೆಯಲ್ಲಿ ಗ್ರಹಿಸುವ ಚಿಕ್ಕ ಪ್ರಯತ್ನ ಈ ಬರಹ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕಲ್ಬುರ್ಗಿ ಎಂ.ಎಂ. (ಸಂ), (1994), ಸಮಗ್ರ ವಚನ ಸಂಪುಟ-೧, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ವೀರಣ್ಣ ರಾಜೂರ (ಸಂ), (2001), ಶಿವಶರಣೆಯರ ವಚನಗಳು ಸಂಪುಟ-೧, ಗುರುದತ್ತ ಪ್ರಿಂಟರ್ಸ್, ಬೆಂಗಳೂರು.
ಮಲ್ಲಾಪುರ ಬಿ.ವಿ. (ಸಂ), (2019), ಅಲ್ಲಮಪ್ರಭುದೇವರ ವಚನ ಸಂಪುಟ: ೧-೨, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
ನಿಜಲಿಂಗಪ್ಪ ಮಟ್ಟಿಹಾಳ (ಸಂ), (2015), ವಚನ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ, ರವಿ ಗ್ರಾಫಿಕ್ಸ್, ಬೆಂಗಳೂರು.