ಕನ್ನಡದ ಪಂಡಿತರು ಗಂಗಾಧರ ಮಡಿವಾಳೇಶ್ವರ ತುರಮರಿಯವರು
Main Article Content
Abstract
ವಿಶ್ವದಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯವನ್ನು ಹೊಂದಿರುವ ಭಾಷೆಯಾಗಿದೆ. ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯಲ್ಲಿ ಅನೇಕ ಕವಿಗಳನ್ನು, ಮಹನೀಯರನ್ನು, ಪಂಡಿತರನ್ನು ಕುರಿತು ಕೇಳಿದ್ದೇವೆ. ಇವರೆಲ್ಲರ ಜೊತೆಗೆ ಕನ್ನಡ ಭಾಷೆ, ಸಾಹಿತ್ಯಕ್ಕೆ ಹಾಗೂ ನಾಡಿಗೆ ರಕ್ಷಣೆ ಕೊಡುವ ಅರಸು ಮನೆತನಗಳನ್ನು, ರಾಜ ಮಹಾರಾಜರನ್ನು, ಅಧಿಕಾರಿಗಳನ್ನು ಕುರಿತು ಕೇಳಿದ್ದೇವೆ. ಹಾಗೆಯೇ 19ನೇ ಶತಮಾನದಲ್ಲಿ ಕನ್ನಡ ಭಾಷೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಮರಾಠಿ ಪ್ರಭಾವದಿಂದ ಬಹಳ ಸಂಕಷ್ಟಗಳು ಎದುರಾಗಿದ್ದವು. ಅಂತಹ ಸನ್ನಿವೇಶದಲ್ಲಿಯೂ ಹಲವು ಕನ್ನಡ ಪಂಡಿತರು ಕನ್ನಡ ಬೆಳವಣಿಗೆಗೆ ಕಂಕಣಬದ್ಧರಾಗಿ ಶ್ರಮಿಸಿದ್ದಾರೆ. ಕನ್ನಡ ಭಾಷೆಯ ಪ್ರಚಾರವನ್ನು ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಅನೇಕ ಸಾಧಕರು ಕನ್ನಡ ಶಾಲೆಗಳನ್ನು ತೆರೆಯುವುದರ ಮೂಲಕ ಹಾಗೂ ಸಾಹಿತ್ಯದ ಹಳಗನ್ನಡದ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಕೊಡುವುದರ ಮೂಲಕ ಹಾಗೂ ಶಬ್ದಕೋಶಗಳನ್ನು ರಚನೆ ಮಾಡುವುದರ ಮೂಲಕ ಕನ್ನಡ ಭಾಷೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿ ಹೋಗಿದ್ದಾರೆ. ಅಂತವರಲ್ಲಿ 19ನೇ ಶತಮಾನಕ್ಕೆ ಒಬ್ಬ ಕನ್ನಡ ಸೇನಾನಿಯಾಗಿ ಬಂದವರು, ಕನ್ನಡದ ಪಂಡಿತರು, ಗಂಗಾಧರ ಮಡಿವಾಳೇಶ್ವರ ತುರಮರಿಯವರು ಒಬ್ಬರು. ಇವರು ನಾಡು-ನುಡಿಗೆ ನೀಡಿದ ಅಪಾರ ಸೇವೆಯನ್ನು ನಾವು ನೆನೆಯಲೇಬೇಕು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಡೆಪ್ಯೂಟಿ ಚೆನ್ನಬಸಪ್ಪನವರು (ಸಂ), (1866 ಫೆಬ್ರುವರಿ), ಮಠಪತ್ರಿಕೆ. ಪುಸ್ತಕ–1, ಸಂಚಿಕೆ-2.
ಡೆಪ್ಯೂಟಿ ಚೆನ್ನಬಸಪ್ಪನವರು (ಸಂ), (1867), ಶಾಲಾಪತ್ರಿಕೆ, ಪುಸ್ತಕ–3, ಸಂಚಿಕೆ-9.
ಹಳಕಟ್ಟಿ ಫ.ಗು., (1930), ಕೈ.ವಾ. ಚೆನ್ನಬಸಪ್ಪ ಬಸಲಿಂಗಪ್ಪ, ಶಿವಾನುಭವ ಗ್ರಂಥಮಾಲೆ, ಧಾರವಾಡ.
ಹಂದ್ರಾಳ ಮ.ಗು., (1987), ಕನ್ನಡ ದೀಪ, ಡೆಪ್ಯೂಟಿ ಚೆನ್ನಬಸಪ್ಪನವರ ಶತಮಾನೋತ್ಸವ ಸಮಿತಿ, ಧಾರವಾಡ.
ಧಾರವಾಡಕರ ರಾ.ಯ., (1975), ಹೊಸಗನ್ನಡ ಸಾಹಿತ್ಯದ ಉದಯಕಾಲ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಸಿದ್ಧಲಿಂಗ ದೇಸಾಯಿ (ಸಂ), (2007), ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ-12, ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ಬಿ.ಎಲ್.ಡಿ.ಇ. ಸಂಸ್ಥೆ.
ಪಾಟೀಲ್ ಪುಟ್ಟಪ್ಪ, (2002), ವ್ಯಕ್ತಿ ಪ್ರಪಂಚ, ಸಪ್ನಾ ಬುಕ್ ಹೌಸ್ ಗಾಂಧಿನಗರ, ಬೆಂಗಳೂರು.
ಬಾಳಣ್ಣ ಸೀಗೀಹಳ್ಳಿ, (1993), ಡೆಪ್ಯೂಟಿ ಚನ್ನಬಸಪ್ಪನವರ ಜೀವನ ಮತ್ತು ಸಾಧನೆ, ವೀರಶೈವ ಅಧ್ಯಯನ ಅಕಾಡೆಮಿ, ಧಾರವಾಡ.