ಹಂಪಿ ಮತ್ತು ಜೈನ ಧರ್ಮ
Main Article Content
Abstract
ಹಂಪಿ ಧರ್ಮದ ನೆಲೆಬೀಡು, ಹತ್ತು ಹಲವು ಧರ್ಮ ಪಂಥಗಳ ಸಂಗಮ ಕ್ಷೇತ್ರ. ಸಹಸ್ರಾರು ವರ್ಷಗಳಿಂದಲೂ ಪಂಪಾಂಬಿಕೆಯ ಶಕ್ತಿ ಕೇಂದ್ರವಾಗಿದ್ದ ಹಂಪಿಗೆ ಮೊದಲು ಶೈವ ಧರ್ಮ ಪ್ರವೇಶಿಸಿತು. ನಂತರ ಬೌದ್ಧ, ಜೈನ, ವೀರಶೈವ, ಇಸ್ಲಾಂ, ವೈಷ್ಣವ, ಶಾಕ್ತ ಮೊದಲಾದ ಧರ್ಮ ಪಂಥಗಳು ಹಂಪಿ ಪ್ರವೇಶಿಸಿ ತಮ್ಮದೇ ಆದ ನೆಲೆ ಕಂಡುಕೊಂಡದ್ದನ್ನು ನಾವು ಕಾಣಬಹುದು. ಈ ಧರ್ಮ ಪಂಥಗಳು ಹಂಪಿಯನ್ನು ಯಾವಾಗ ಪ್ರವೇಶಿಸಿದವು ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಕಷ್ಟಸಾಧ್ಯ. ಕ್ರಿಸ್ತಪೂರ್ವದಿಂದಲೂ ಇಲ್ಲಿ ಧರ್ಮದ ಚಹರೆಗಳು ಕಂಡುಬರುತ್ತವೆ. ಮೌರ್ಯ ಸಾಮ್ರಾಟ ಅಶೋಕನಿಂದ ಬೌದ್ಧ ಧರ್ಮ ದಕ್ಷಿಣ ಭಾರತ ಪ್ರವೇಶಿಸಿದಂತೆ, ಭದ್ರಬಾಹು ಮುನಿಯಿಂದ ಜೈನ ಧರ್ಮ ಕರ್ನಾಟಕ ಪ್ರವೇಶಿಸಿತು. ಹಂಪಿಯನ್ನು ಜೈನ ಧರ್ಮ ಯಾವಾಗ ಪ್ರವೇಶಿಸಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುವುದಿಲ್ಲ. ಮಹಾನವಮಿ ದಿಬ್ಬದ ಮುಂದೆ ದೊರೆತ ಶಿಲ್ಪಪೆಟ್ಟಿಕೆಯಲ್ಲಿರುವ ಪ್ರಾಕೃತ ಶಾಸನ ಆಧಾರದಿಂದ ಜೈನ ಧರ್ಮವು ಬಹುಶಃ ಕ್ರಿಸ್ತಶಕ 12ನೇ ಶತಮಾನದಲ್ಲಿ ಹಂಪಿಯನ್ನು ಪ್ರವೇಶಿಸಿತೆಂದು ಹೇಳಬಹುದಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ದೇವರಕೊಂಡಾರೆಡ್ಡಿ ಮತ್ತು ಇತರರು (ಸಂ), (೨೦೦೦), ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ -೩, ಹಂಪಿ ಶಾಸನಗಳು, ಶಾಸನ ಸಂಖ್ಯೆ. ೩೯೯, ಪು.ಸಂ. ೨೮೬
ಅದೇ, ಶಾಸನ ಸಂಖ್ಯೆ. ೩೫೦, ಪು.ಸಂ. ೨೫೫
ಅದೇ, ಶಾಸನ ಸಂಖ್ಯೆ. ೩೫೦, ಪು.ಸಂ. ೨೫೫
ಅದೇ, ಶಾಸನ ಸಂಖ್ಯೆ. ೩೨೭, ಪು.ಸಂ. ೨೪೧
ಅದೇ, ಶಾಸನ ಸಂಖ್ಯೆ. ೩೨೭, ಪು.ಸಂ. ೨೪೨
ಅದೇ, ಶಾಸನ ಸಂಖ್ಯೆ. ೩೫೧, ಪು.ಸಂ. ೨೫೬
ಅದೇ, ಶಾಸನ ಸಂಖ್ಯೆ. ೯೭, ಪು.ಸಂ. ೯೦
ಅದೇ, ಶಾಸನ ಸಂಖ್ಯೆ. ೩೫೦, ಪು.ಸಂ. ೨೫೪
ಅದೇ, ಶಾಸನ ಸಂಖ್ಯೆ. ೩೫೦, ಪು.ಸಂ. ೨೫೪
ಅದೇ, ಶಾಸನ ಸಂಖ್ಯೆ. 349
ಅದೇ, ಶಾಸನ ಸಂಖ್ಯೆ. ೨೫೪, ಪು.ಸಂ. ೨೫೫
ಅದೇ, ಶಾಸನ ಸಂಖ್ಯೆ. ೧೨೨, ಪು.ಸಂ. ೧೫೬
ಅದೇ, ಶಾಸನ ಸಂಖ್ಯೆ. ೨೫೪, ಪು.ಸಂ. ೧೯೫
ಅದೇ, ಶಾಸನ ಸಂಖ್ಯೆ. ೮೦, ಪು.ಸಂ. ೭೯
ಅದೇ, ಶಾಸನ ಸಂಖ್ಯೆ. ೩೦೪, ಪು.ಸಂ. ೨೨೧