ಬಂಡಾಯ ಧೋರಣೆಯ ವಿಶಿಷ್ಟ ಧ್ವನಿ ಬಸವರಾಜ ಸಬರದ

Main Article Content

ಆಂಜನೇಯ
ಮಹಾದೇವಿ ಆರ್ ಹಿರೇಮಠ

Abstract

ಪ್ರಸ್ತುತ ಲೇಖನದಲ್ಲಿ ಬಂಡಾಯ ಕವಿ ಬಸವರಾಜ ಸಬರದರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಅವಲೋಕಿಸಲಾಗಿದೆ. ಅವರ ಸಾಹಿತ್ಯದ ಮೇಲೆ ಅಂಬೇಡ್ಕರ್, ಲೋಹಿಯಾ, ಕಾರ್ಲ್ ಮಾರ್ಕ್ಸ್ ರ ಚಿಂತನೆಗಳ ಪ್ರಭಾವವನ್ನು ಗಮನಿಸಲಾಗಿದೆ. ಅವರ ಸೃಜನ ಮತ್ತು ಸೃಜನೇತರ ಸಾಹಿತ್ಯದ ಕೃತಿಗಳ ಪಟ್ಟಿಯೊಂದಿಗೆ ಸಾಹಿತ್ಯದ ಧೋರಣೆಯನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಸಬರದರ ಕಾವ್ಯ, ನಾಟಕ, ವಿಚಾರ ಸಾಹಿತ್ಯ, ಸಂಶೋಧನೆ, ವಿಮರ್ಶೆ, ಸಂಪಾದನಾ ಕ್ಷೇತ್ರದಲ್ಲಿನ ಕೃತಿಗಳನ್ನು ಪ್ರತ್ಯೇಕಿಸಿ ವಿವರಿಸಲಾಗಿದೆ. ಮಹಿಳಾ ಮತ್ತು ಜನಪದ ಸಾಹಿತ್ಯ ವಿಮರ್ಶೆಗೆ ನೀಡಿದ ವಿಶೇಷ ಸೇವೆಯನ್ನು ಸ್ಮರಿಸಲಾಗಿದೆ. ಸಬರದ ಸಾಹಿತ್ಯದ ಕುರಿತು ಅವರ ಒಡನಾಡಿಗಳಾದ ಚೆನ್ನಣ್ಣ ವಾಲೀಕರ್, ಬರಗೂರು ರಾಮಚಂದ್ರಪ್ಪನವರ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ.

Article Details

Section

Research Articles

Author Biographies

ಆಂಜನೇಯ

ಸಂಶೋಧನಾರ್ಥಿ, ಡಾ.ಆರ್.ಸಿ.ಹಿರೇಮಠ, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.

ಮಹಾದೇವಿ ಆರ್ ಹಿರೇಮಠ

ಸಹ ಪ್ರಾಧ್ಯಾಪಕರು ಹಾಗೂ ಸಂಶೋಧನಾ ಮಾರ್ಗದರ್ಶಕರು, ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ.

References

ಪೋತೆ ಎಚ್.ಟಿ., (2017), ಸಬರದ ಸಾಹಿತ್ಯ ಸಮೀಕ್ಷೆ, ಶ್ರೀಸಿದ್ದಲಿಂಗೇಶ್ವರ ಪ್ರಕಾಶನ ಸರಸ್ವತಿ ಗೋದಾಮ, ಕಲಬುರಗಿ.

ವಿಜಯಶ್ರೀ ಸಬರದ, (2015), ನಡೆದದ್ದೇ ದಾರಿ (ಸಬರದ ಸಾಹಿತ್ಯ ಸೂಚಿ), ಪಲ್ಲವಿ ಪ್ರಕಾಶನ, ಕಲಬುರಗಿ.

ರಮ್ಯಾ ಎನ್‌., (2021), ಬಸವರಾಜ ಸಬರದ ಅವರ ನಾಟಕಗಳ ಅಧ್ಯಯನ, ಅಪ್ರಕಟಿತ ಸಂಶೋಧನಾ ಪ್ರಬಂಧ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಬಸವರಾಜ ಸಬರದ, (1976), ಮೂಡಲಕ ಕೆಂಪು ಮೂಡ್ಯಾವ, ಪಲ್ಲವಿ ಪ್ರಕಾಶನ, ಬೀದರ್.

ಬಸವರಾಜ ಸಬರದ, (2020), ಬಯಲ ಬೆಳಕು, ಕ್ರಿಯಾ ಮಾಧ್ಯಮ, ಬೆಂಗಳೂರು.