ಪುರಂದರ ದಾಸರ ಕೀರ್ತನೆಗಳಲ್ಲಿ ಲೋಕ ನೀತಿಯ ಅಂಶಗಳು
Main Article Content
Abstract
“ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರೆಂದು ಪ್ರಸಿದ್ಧರಾದವರು.” ಪುರಂದರದಾಸರು 1480 ರಲ್ಲಿ ಜನಿಸಿದರು ಮತ್ತು 1564, ಜನವರಿ ಎರಡರಂದು ನಿಧನರಾದರು. ವರದಪ್ಪ ನಾಯಕ ಮತ್ತು ತಾಯಿ ರುಕ್ಮಿಣಿಯವರು ಪುರಂದರದಾಸರ ತಂದೆ ತಾಯಿಗಳು. ಪುರಂದರದಾಸರ ತಂದೆ ಚಿನ್ನ, ಬೆಳ್ಳಿ ಮತ್ತು ರತ್ನಭರಣಗಳ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದುಬರುತ್ತದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕರು ಎಂಬುದಾಗಿತ್ತು. ಶಿಕ್ಷಣದ ಮೂಲಕ ಸಂಗೀತದಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನು ಗಳಿಸಿದರು. ಶ್ರೀನಿವಾಸ ನಾಯಕರು ತಮ್ಮ 16ನೇ ವಯಸ್ಸಿನಲ್ಲಿ ಸರಸ್ವತಿ ಬಾಯಿ ಎಂಬ ಕನ್ಯೆಯೊಂದಿಗೆ ವಿವಾಹವಾದರು. ನಂತರ ಶ್ರೀನಿವಾಸ ನಾಯಕರು ರತ್ನಪಡಿ ವ್ಯಾಪಾರ ಮಾಡುತ್ತಿದ್ದರು. ಕೆಲವು ವರ್ಷಗಳ ನಂತರ ಅವರ ಬದುಕಿನಲ್ಲಿ ನಡೆದ ಒಂದು ಮೂಗುತಿಯ ಘಟನೆಯ ಕಾರಣದಿಂದಾಗಿ ಶ್ರೀಮಂತಿಕೆಯಲ್ಲಿ ಜಿಗುಪ್ಸೆ ಹೊಂದಿ ತಮ್ಮ ಬಳಿಯಲ್ಲಿದ್ದ ಎಲ್ಲ ಸಂಪತ್ತನ್ನು, ತಮ್ಮ 30ನೇ ವಯಸ್ಸಿನಲ್ಲಿ ದಾನ ಮಾಡಿ, ತಮ್ಮ ಕುಟುಂಬದೊಂದಿಗೆ ಭಿಕ್ಷುಕ ಜೀವನ ನಡೆಸಲು ಮುಂದಾದರು. ಅದರೊಂದಿಗೆ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಶ್ರೀನಿವಾಸ ಹಾವನೂರ & ಸತ್ಯನಾರಾಯಣ ರಾವ್ ಹೊ.ರಾ., (2002), ಪುರಂದರದಾಸರ ಜನಪ್ರಿಯ ಕೀರ್ತನೆಗಳು, ಅಂಕಿತ ಪುಸ್ತಕ, ಬೆಂಗಳೂರು.
ಅರಳು ಮಲ್ಲಿಗೆ ಪಾರ್ಥಸಾರಥಿ (ಸಂ), (2016), ಪುರಂದರದಾಸರ ಸಾವಿರಾರು ಹಾಡುಗಳು, ಓಂಕಾರ್ ಪ್ರಕಾಶನ, ಬೆಂಗಳೂರು.