ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚಕವಿಯ ‘ಯಯಾತಿ ನಾಟಕದಲ್ಲಿನ ಪರಂಪರೆ ಮತ್ತು ಆಧುನಿಕ ಚಿಂತನೆಯ ಸ್ವರೂಪ’

Main Article Content

ಸೌಮ್ಯ ಕೆ.ಎ.

Abstract

ಕನ್ನಡ ಸಾಹಿತ್ಯ ಲೋಕದಲ್ಲಿ ಕ್ರಿ.ಶ 1960ರಲ್ಲಿ ಗಿರೀಶ್ ಕಾರ್ನಾಡರು ರಚಿಸಿದ ‘ಯಯಾತಿ’ ನಾಟಕ ತನ್ನದೇ ಆದ ಛಾಪನ್ನು ಮೂಡಿಸಿದ ವಿಶಿಷ್ಟವಾದ ಕೃತಿ. ಕ್ರಿ.ಶ 1959ರಲ್ಲಿ ಮರಾಠಿ ಲೇಖಕರಾದ ವಿ.ಎಸ್. ಖಾಂಡೇಕರ್‌ರವರು ‘ಯಯಾತಿ’ ಕೃತಿಯನ್ನು ಮರಾಠಿ ಭಾಷೆಯಲ್ಲಿ ಪ್ರಕಟಿಸಿದರು. ವಿಭಿನ್ನ ಸಂಸ್ಕೃತಿ, ವಿಶೇಷ ಪರಿಸರವನ್ನು ಹೊಂದಿದ ಕೊಡಗು ಭಾಗದಲ್ಲಿ ಆದಿಕವಿ ಎಂದು ಬಿರುದಾಂಕಿತ ಹರದಾಸ ಅಪ್ಪಚ್ಚಕವಿ ಎಲೆ ಮರೆಯ ಕಾಯಿಯಂತೆ ಕ್ರಿ.ಶ 1906ರ ಇಸವಿಯಲ್ಲಿ ‘ಯಯಾತಿ’ ಎಂಬ ಪೌರಾಣಿಕ ನಾಟಕವನ್ನು ಕೊಡವ ಭಾಷೆಯಲ್ಲಿ ರಚಿಸಿದ್ದರೆಂಬುದು ಗಮನಾರ್ಹ. ಯಯಾತಿ ರಾಜನ ಚರಿತೆಯಾದರೂ, ವೃಷಪರ್ವ ರಾಜನ ಮಗಳಾದ ರಾಜಕುಮಾರಿ ಶರ್ಮಿಷ್ಟೆ ಹಾಗೂ ಶುಕ್ರಾಚಾರಿ ಋಷಿಯ ಪುತ್ರಿಯಾದ ದೇವಯಾನಿಯರ ಸುತ್ತ ಹೆಣೆದ ಕಥೆಯಾಗಿದೆ. ಅಪ್ಪಚ್ಚಕವಿಯ ಈ ನಾಟಕದ ವಿಶೇಷತೆಯೆಂದರೆ ಬ್ರಿಟೀಷರ ಆಳ್ವಿಕೆಯ ಪರಿಣಾಮವಾಗಿ ಪರಂಪರೆಯ ಮೇಲಾದ ಪ್ರಭಾವ ಹಾಗೂ ಆಧುನಿಕ ಸಂಸ್ಕೃತಿಯ ಚಿತ್ರಣ. ನಾಟಕದ ಆರಂಭದ ಸನ್ನಿವೇಶದಲ್ಲಿ ರಾಜಕುಮಾರಿ ಶರ್ಮಿಷ್ಟೆ ದೇವಯಾನಿಗೆ ‘ಗುಡ್ ಮಾರ್ನಿಂಗ್’ ಎಂದು ಶೇಕ್‌ಹ್ಯಾಂಡ್ ಮಾಡುತ್ತಾಳೆ. ಆಗ ದಾಸಿ “ಹಿಂದೆಲ್ಲಾ ಅದೆಂತಹ ಸಂಪ್ರದಾಯವಿತ್ತು. ಇದೀಗ ಎಲ್ಲವೂ ಬದಲಾಗಿದೆ. ವಿಚಿತ್ರ ಉಡುಗೆ-ತೊಡುಗೆಯಾಗಿ ಬೂಟು, ಸೂಟುಗಳು ಬಂದಿದೆ!” ಎಂದು ಬದಲಾದ ಆಧುನಿಕ ಸ್ಥಿತಿಯನ್ನು ನೆನೆಯುತ್ತಾಳೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ವಿಸ್ಕಿ, ಬ್ರಾಂಡಿಯಂತಹ ಆಧುನಿಕ ಜೀವನ ಶೈಲಿಯ ವಿವರಣೆ ಪೌರಾಣಿಕ ಪಾತ್ರಗಳೊಂದಿಗೆ ನಾಟಕದಲ್ಲಿ ಸಾಗಿ ಬಂದಿದೆ. ಪರಂಪರಾಗತವಾಗಿ ಬಂದ ಸಂಪ್ರದಾಯಗಳಿಗೆ ವಿರುದ್ಧವಾದ ಆಧುನಿಕ ನಡಾವಳಿಯ ಕುರಿತ ವಿಷಾದದ ನೋಟವನ್ನು ಕಾಣಬಹುದು. 1906ರ ಕಾಲಘಟ್ಟದಲ್ಲೇ ಈ ರೀತಿಯ ಚಿಂತನೆ ಕಂಡುಬರುತ್ತದೆ. ‘ಯಯಾತಿ’ ನಾಟಕದಲ್ಲಿ ಪರಂಪರೆ ಹಾಗೂ ಆಧುನಿಕತೆ ಮುಖಾಮುಖಿಯಾದ ಸಂದರ್ಭ, ಆಧುನಿಕತೆಯ ಕುರಿತ ವಿಭಿನ್ನ ವ್ಯಾಖ್ಯಾನವಿದೆ. ಪರಂಪರೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಈ ನಾಟಕವು ಪ್ರಸ್ತುತ ಎಂದೆನಿಸುತ್ತದೆ.
ಪೂರ್ಣ ಲೇಖನದಲ್ಲಿ ಹರದಾಸ ಅಪ್ಪಚ್ಚಕವಿ ‘ಯಯಾತಿ’ ನಾಟಕದಲ್ಲಿ ಚಿತ್ರಿಸಿದ ಪರಂಪರೆ ಹಾಗೂ ಆಧುನಿಕತೆಯ ಸ್ವರೂಪವನ್ನು ತಿಳಿಸಲಾಗುವುದು.

Article Details

Section

Research Articles

Author Biography

ಸೌಮ್ಯ ಕೆ.ಎ.

ಸಂಶೋಧನ ವಿದ್ಯಾರ್ಥಿನಿ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳ ಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು.

How to Cite

ಸೌಮ್ಯ ಕೆ.ಎ. (2025). ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚಕವಿಯ ‘ಯಯಾತಿ ನಾಟಕದಲ್ಲಿನ ಪರಂಪರೆ ಮತ್ತು ಆಧುನಿಕ ಚಿಂತನೆಯ ಸ್ವರೂಪ’. ಅಕ್ಷರಸೂರ್ಯ (AKSHARASURYA), 7(03), 230 to 235. https://aksharasurya.com/index.php/latest/article/view/1207

References

ಹರದಾಸ ಅಪ್ಪಚ್ಚ, (2010), ಕವೀರ ನಾಲ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ.

ಐತಿಚಂಡ ರಮೇಶ್ ಉತ್ತಪ್ಪ, (2017), ಕೊಡಗಿನ ಕಾಳಿದಾಸ: ಹರದಾಸ ಅಪ್ಪ ನೆರದಂಡ ಅಪ್ಪಚ್ಚಕವಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ.

ರೇಖಾ ವಸಂತ್, (2006), ಕೊಡವ ರಂಗಭೂಮಿ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ.