ವಚನ ಸಾಹಿತ್ಯದಲ್ಲಿ ಪರಂಪರೆ ಹಾಗೂ ಆಧುನಿಕ ಚಿಂತನೆಗಳು

Main Article Content

ಶೋಭ ಎನ್.

Abstract

ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕಾಲದಿಂದ ಇಂದಿನವರೆಗೆ ಚಳುವಳಿಗಳು ಎಂದು ನೋಡಿದಾಗ ಅದು ಪಂಪನಿಂದಲೇ ಆರಂಭವಾಗಿರುವುದನ್ನು ಕಾಣಬಹುದು. ಆತ ಬಂಡಾಯದ ದನಿ ಎತ್ತಿದ ಮೊದಲ ಕವಿಯಾಗಿದ್ದಾನೆ. ನಂತರದಲ್ಲಿ ವಚನ ಸಾಹಿತ್ಯದಲ್ಲಿ ಆದ ಚಳುವಳಿಯನ್ನು ನಿಜವಾದ ಸಾಮಾಜಿಕ ಚಳುವಳಿ ಎಂದೇ ಹೇಳಲಾಗಿದೆ. ಇದುವರೆಗೂ ಅರಮನೆಯಲ್ಲಿ ಪಂಡಿತಮಾನ್ಯರಿಗೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯ, ಜನಸಾಮಾನ್ಯರ ಮನೆಯ ಅಂಗಳಕ್ಕೆ ಬಂದ ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಇಲ್ಲಿ ಎಲ್ಲಾ ಸ್ತರದ ಜನರು ಇದ್ದಾರೆ. ಇದು ಪ್ರಮುಖವಾಗಿ ಭಕ್ತಿ ಚಳುವಳಿ ಆದರೂ ಸಮಾಜದ ಓರೆ ಕೋರೆಗಳನ್ನು ತಿದ್ದುವ ಪ್ರಯತ್ನವನ್ನು ಮಾಡಿತು. ಜೇಡರ ದಾಸಿಮಯ್ಯ, ಅಲ್ಲಮ ಪ್ರಭು, ಬಸವಣ್ಣ, ಚೆನ್ನಬಸವಣ್ಣ, ಸಿದ್ದರಾಮ, ಅಕ್ಕಮಹಾದೇವಿ ಮುಂತಾದ ಪ್ರಮುಖ ವಚನಕಾರರನ್ನು ಕಾಣುತ್ತೇವೆ. ಇವರುಗಳು ಕಾಯಕವೇ ಕೈಲಾಸ ಎಂದು ನುಡಿದಂತೆ ನಡೆದು, ಅದನ್ನು ಸಮಾಜದ ಜನತೆಗೂ ಸಾರಿದರು. ಇವರ ಕಾಲದಲ್ಲಿ ಕೇಂದ್ರೀಕೃತ ರಾಜವ್ಯವಸ್ಥೆ ಇದ್ದರೂ ಅಂದಿನ ಸಮಾಜದಲ್ಲಿ ಜನರು ಎದುರಿಸುತ್ತಿದ್ದ ಸಮಸ್ಯೆಗಳು ಅಂದರೆ ವರ್ಗ ಸಂಘರ್ಷ, ಜಾತಿ ವ್ಯವಸ್ಥೆ, ಮೇಲು-ಕೀಳು, ಬಡವ-ಬಲ್ಲಿದ, ಲಿಂಗ ತಾರತಮ್ಯ, ಮೂಢನಂಬಿಕೆಗಳು ಮುಂತಾದವುಗಳ ವಿರುದ್ಧ ಹೋರಾಡಿ ಎಲ್ಲರೂ ಸಮಾನರು, ಸಾಮರಸ್ಯದಿಂದ ಬದುಕಬೇಕು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಭಕ್ತಿಯಿಂದ ಎಲ್ಲರೂ ಮುಕ್ತಿ ಪಡೆಯಲು ಸಾಧ್ಯ ಎಂಬುದನ್ನು ಸಾರಿದರು. ಹೀಗೆ ಪ್ರಭುತ್ವ ವ್ಯವಸ್ಥೆಯಲ್ಲಿದ್ದುಕೊಂಡೇ ಅವರು ಅಷ್ಟೆಲ್ಲಾ ಸುಧಾರಣೆಗಳನ್ನು ತಂದಿದ್ದಾರೆಂದರೆ ಇಂದು ಸಮಾಜದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಜೊತೆಗೆ ಎಲ್ಲಾ ಅನುಕೂಲಗಳಿದ್ದರೂ ಏನಾಗುತ್ತಿದೆ? ಅದೇ ಸಮಸ್ಯೆಗಳನ್ನು ಇಂದಿಗೂ ಕಾಣುತ್ತಿದ್ದೇವೆ, ಅವು ಎಷ್ಟರಮಟ್ಟಿಗೆ ಸುಧಾರಣೆಯಾಗಿದೆ? ಎಂಬುದನ್ನು ಮೊದಲು ಮನಗಾಣಬೇಕು. ಆದ ಕಾರಣ ನಮ್ಮ ಕನ್ನಡ ಸಾಹಿತ್ಯದಲ್ಲಿ ಇಂದಿಗೂ ಅಂತಹ ಬರವಣಿಗೆಗಳು, ಚಳುವಳಿಗಳು ನಡೆದು ಎಲ್ಲರೂ ಸಮಾನತೆ, ಸಾಮರಸ್ಯ ಬದುಕು ಹಾಗೂ ಮಾನವೀಯ ಮೌಲ್ಯಗಳ ಮುಖಾಂತರ ಉತ್ತಮ ಜೀವನವನ್ನು ನಡೆಸಬೇಕೆಂಬುದು ಈ ಲೇಖನದ ಆಶಯವಾಗಿದೆ.

Article Details

Section

Research Articles

Author Biography

ಶೋಭ ಎನ್.

ಮೈಸೂರು.

References

ಕಲಬುರ್ಗಿ ಎಂ.ಎಂ. (ಸಂ), (1993), ಸಮಗ್ರ ವಚನ ಸಂಪುಟ: ಒಂದು; ಬಸವಣ್ಣನವರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಶ್ರೀನಿವಾಸಮೂರ್ತಿ ಎಂ.ಆರ್. (ಪ್ರ.ಸಂ), (1956), ವಚನ ಧರ್ಮಸಾರ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಮರುಳ ಸಿದ್ದಪ್ಪ ಕೆ. & ನಾಗರಾಜ ಕಿ.ರಂ. (ಸಂ), (2015), ವಚನ ಕಮ್ಮಟ, ಸಪ್ನ ಬುಕ್ ಹೌಸ್, ಬೆಂಗಳೂರು.

ಮಲ್ಲಾಪುರ ಬಿ.ವಿ. (ಸಂ), (1993). ಸಮಗ್ರ ವಚನ ಸಂಪುಟ: ಎರಡು; ಅಲ್ಲಮ ಪ್ರಭುದೇವರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ವಿದ್ಯಾಶಂಕರ ಎಸ್. (ಸಂ), (1993), ಸಮಗ್ರ ವಚನ ಸಂಪುಟ: ಏಳು; ಸಂಕೀರ್ಣ ವಚನ ಸಂಪುಟ-2, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ವೀರಣ್ಣ ರಾಜೂರ (ಸಂ), (1993), ಸಮಗ್ರ ವಚನ ಸಂಪುಟ: ಐದು; ಶಿವಶರಣೆಯರ ವಚನ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.