ಕನಕದಾಸರ ಕೀರ್ತನೆಗಳಲ್ಲಿನ ಪಾರಂಪರಿಕ ಹಾಗೂ ಆಧುನಿಕ ಅಂಶಗಳು

Main Article Content

ಕವಿತಾ ಬಾಯಿ

Abstract

ಕನಕದಾಸರು (1509–1609) ಕನ್ನಡದ ಪ್ರಸಿದ್ಧ ಹರಿದಾಸರು, ಭಕ್ತಿಪಂಥದ ಪ್ರಮುಖ ಶರಣರು, ಕವಿಗಳು ಮತ್ತು ದಾರ್ಶನಿಕರು. ಅವರು ವಿಷ್ಣುವಿನ ಭಕ್ತರಾಗಿದ್ದು, ವಿಷ್ಣುಭಕ್ತಿಯಿಂದ ತುಂಬಿದ ಹಲವಾರು ಕೀರ್ತನೆಗಳು, ಉಗಾಭೋಗಗಳು, ಹರಿಕಥೆಗಳು ಮತ್ತು ತಾತ್ವಿಕ ಬರಹಗಳನ್ನು ರಚಿಸಿದ್ದಾರೆ. “ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು” ಎಂಬ ಕೀರ್ತನೆಯ ಸಾಲು ಸಮಾಜದ ಒಳಿತಿಗೆ ಧರ್ಮಾಚರಣೆಯ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಕನ್ನಡದಲ್ಲಿ ದಾಸವಾಙ್ಮಯದ ದೊಡ್ಡ ಭಂಡಾರವಿದೆ. ಕೀರ್ತನ ಸಾಹಿತ್ಯ ಕನ್ನಡ ಜನತೆಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕನಕದಾಸರ ಕೀರ್ತನೆಗಳಲ್ಲಿ ತತ್ವಚಿಂತನೆಯ (ದಾರ್ಶನಿಕ) ಅಂಶಗಳು ತುಂಬಾ ಪ್ರಬಲವಾಗಿವೆ. ಅವರು ಭಕ್ತಿ ಭಾಷೆಯಲ್ಲಿ ಸಾಮಾನ್ಯ ಜನರಿಗೂ ತಲುಪುವ ರೀತಿ ತಮ್ಮ ತಾತ್ವಿಕ ವಿಚಾರಗಳನ್ನು ಮಂಡಿಸುತ್ತಾರೆ. ಈ ಕೀರ್ತನೆಗಳು ಅತೀವ ಭಾವನಾತ್ಮಕವಾಗಿದ್ದರೂ, ಅದರಲ್ಲಿ ದಾರ್ಶನಿಕವಾದ, ನೈತಿಕತೆ, ಶರಣಪಥ, ಅಹಂಕಾರತ್ಯಾಗ, ಜಗತ್ತಿನ ನಾಶವರ್ತಿತ್ವ ಇತ್ಯಾದಿ ಮಹತ್ವದ ವಿಚಾರಗಳು ಇಲ್ಲಿವೆ. ಸಂಸಾರದ ಅಶಾಶ್ವತತೆಯನ್ನು ಎತ್ತಿ ಹಿಡಿದು ಆ ಮೂಲಕ ಲೌಕಿಕ ಆಸೆ ಆಮಿಷಗಳಲ್ಲಿ ತುಂಬಿ ತುಳುಕುವ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸುವ ಉತ್ತಮ ಸಾಧನವೆಂಬುದನ್ನು ಮನಗಂಡು ಕೀರ್ತನೆಗಳನ್ನು ರಚಿಸಿದರು. ವೈಯಕ್ತಿಕ ಮೋಕ್ಷವಲ್ಲದೆ ಸಾಮಾಜಿಕ ವಿಮುಕ್ತಿಗೂ, ಸಮಾಜದ ಉನ್ನತಿಗೂ ಪ್ರಯತ್ನಿಸಿದ ಈ ಭಕ್ತ ಪರಂಪರೆಯ ದೃಷ್ಟಿ ವಿಶಿಷ್ಟವಾದುದು ಮತ್ತು ಸಾಮಾಜಿಕವಾಗಿ ಮಹತ್ವಪೂರ್ಣವಾದದ್ದು. ಈ ಹಿನ್ನೆಲೆಯಲ್ಲಿ ಸಂಶೋಧನಾ ಪ್ರಬಂಧ ಸಂರಚನೆಗೊಂಡಿದೆ.

Article Details

Section

Research Articles

Author Biography

ಕವಿತಾ ಬಾಯಿ

ಸಂಶೋಧನ ವಿದ್ಯಾರ್ಥಿ, ಸಂತ ಜೋಸೆಫ್ಸ್ ವಿಶ್ವವಿದ್ಯಾನಿಲಯ, ಬೆಂಗಳೂರು.

 

How to Cite

ಕವಿತಾ ಬಾಯಿ. (2025). ಕನಕದಾಸರ ಕೀರ್ತನೆಗಳಲ್ಲಿನ ಪಾರಂಪರಿಕ ಹಾಗೂ ಆಧುನಿಕ ಅಂಶಗಳು. ಅಕ್ಷರಸೂರ್ಯ (AKSHARASURYA), 7(03), 110 to 119. https://aksharasurya.com/index.php/latest/article/view/1194

References

ರುದ್ರಮೂರ್ತಿ ಶಾಸ್ತ್ರಿಶಾಸ್ತ್ರಿ ಸು., (2017), ಕನಕದಾಸ, ಐ ಬಿ ಎಚ್ ಪ್ರಕಾಶನ, ಬೆಂಗಳೂರು.

ಮುಗಳಿ ರಂ.ಶ್ರೀ., ರಂಗನಾಥ್ ಎಚ್.ಕೆ., & ಕೃಷ್ಣಮೂರ್ತಿ ಶಾಸ್ತ್ರಿ ಎಚ್.ಎಸ್. (ಸಂ), (1984), ದಾಸ ಸಾಹಿತ್ಯ ದರ್ಶನ, ಮಂಗಳಭಾರತಿ ಪ್ರಕಾಶನ, ಮೈಸೂರು.