ಕುವೆಂಪು ಮತ್ತು ಭಾರತೀಯ ಜ್ಞಾನ ಪರಂಪರೆ: ಬುದ್ಧ-ಬಸವ-ಗಾಂಧೀಜಿ ಅವರನ್ನು ಅನುಲಕ್ಷಿಸಿ

Main Article Content

ಬಿ.ಆರ್. ಸತ್ಯನಾರಾಯಣ

Abstract

ರಾಷ್ಟ್ರಕವಿ ಕುವೆಂಪು ಅವರ ಬದುಕು-ಬರಹಗಳೆರಡೂ ಕಾಲದೇಶಗಳನ್ನು ಮೀರಿದ ಅಚ್ಚರಿಗೆ ಕಾರಣವಾಗಿವೆ. ಆ ಮಹಾಪ್ರತಿಭೆಯ ಅನಾವರಣಕ್ಕೂ ಮೊದಲು, ಬುದ್ಧ, ಬಸವ, ಪರಮಹಂಸ-ವಿವೇಕಾನಂದ ಮತ್ತು ಗಾಂಧಿ ಮೊದಲಾದವರ ಪ್ರಭಾವಕ್ಕೆ ಕುವೆಂಪು ಒಳಗಾಗಿದ್ದಾರೆ. ಹಲವಾರು ಪರಂಪರೆಗಳ, ಜ್ಞಾನಶಾಖೆಗಳ, ಮತಧರ್ಮಗಳ ಸಾರಸರ್ವಸ್ವವನ್ನೂ, ಮಹಾಪುರುಷರ ಬದುಕನ್ನಷ್ಟೇ ಅಲ್ಲದೆ ಜನಸಾಮಾನ್ಯರ ಬದುಕನ್ನೂ ಕುವೆಂಪು ಪರಿಭಾವಿಸಿದ್ದಾರೆ.
ಕುವೆಂಪು ಅವರ ಬದುಕು ಬರಹಗಳನ್ನು ಬಹುವಾಗಿ ಪ್ರಭಾವಿಸಿದ ಇಬ್ಬರು ಮಹನೀಯರೆಂದರೆ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರು. ಇವರಿಬ್ಬರ, ಕುವೆಂಪು ಅವರ ಮೇಲಿನ ಪ್ರಭಾವ ಪ್ರೇರಣೆಗಳನ್ನು ಕುರಿತು ಹಾಗೂ ಅವರಿಬ್ಬರ ಬಗೆಗಿನ ಕುವೆಂಪು ಗ್ರಹಿಕೆ ಮತ್ತು ಅಭಿವ್ಯಕ್ತಿಯನ್ನು ಕುರಿತು ಹಲವಾರು ಅಧ್ಯಯನಗಳು ನಡೆದಿವೆ. ಇದೇ ಮಾತನ್ನು ಬುದ್ಧ, ಬಸವ ಮತ್ತು ಮಹಾತ್ಮಾ ಗಾಂಧಿಯವರ ಬಗ್ಗೆ ಹೇಳಲಾಗುವುದಿಲ್ಲ. ಗಾಂಧಿಯವರ ಬಗ್ಗೆ ಹಲವಾರು ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ, ಭಾಷಣಗಳನ್ನು ಮಾಡಿದ್ದಾರೆ. ಗಾಂಧಿಯವರನ್ನು ನೋಡಲು ಬೆಳಗಾವಿಗೂ ಹೋಗಿದ್ದರು. ಬುದ್ಧ ಮತ್ತು ಬಸವಣ್ಣನವರ ಬಗ್ಗೆ ಮೂರ್ನಾಲ್ಕು ಪದ್ಯಗಳು ಮತ್ತು ಬಸವಣ್ಣನವರ ಬಗ್ಗೆ ಒಂದು ಪುಟ್ಟ ಲೇಖನವನ್ನೂ ಬರೆದಿದ್ದಾರೆ. ಅವರ ‘ಮಹಾರಾತ್ರಿ’ ಬುದ್ಧನ ಕುರಿತಾದ ಮಹತ್ವದ ನಾಟಕಗಳಲ್ಲಿ ಒಂದಾಗಿದೆ. ಆದರೆ, ಇವುಗಳನ್ನು ಯಾರೂ ಪರಿಶೀಲಿಸಿದಂತೆ ಕಾಣುವುದಿಲ್ಲ. ಕುವೆಂಪು ಅವರು ಬುದ್ಧ, ಬಸವ ಮತ್ತು ಗಾಂಧಿಯವರನ್ನು ಹೇಗೆ ಪರಿಭಾವಿಸಿದ್ದಾರೆ ಮತ್ತು ಅವರನ್ನು ಅಭಿವ್ಯಕ್ತಿಯಲ್ಲಿ ಹೇಗೆ ಕಂಡರಿಸಿದ್ದಾರೆ ಎಂಬ ಬಗ್ಗೆ ಹಾಗೂ ಕುವೆಂಪು ಅವರ ಮೇಲೆ ಅವರ ಪ್ರಭಾವಗಳೇನು ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಿದೆ.
ಕುವೆಂಪು ಅವರ ಸಾಹಿತ್ಯವನ್ನು ಓದಿದ ಯಾರಿಗಾದರೂ, ವಿಭಿನ್ನ ವಿಚಾರಧಾರೆಗಳ ನಡುವೆಯೂ ಸಮನ್ವಯ ಸೂತ್ರವನ್ನು ಕಾಣುವ ಪೂರ್ಣದೃಷ್ಟಿಯನ್ನು ಕವಿ ಸಾಧಿಸಿರುವುದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಪ್ರಸ್ತುತ, ಉದ್ದೇಶಿತ ಪ್ರಬಂಧದಲ್ಲಿ, ಕುವೆಂಪು ಅವರು ಬುದ್ಧ, ಬಸವ, ಮತ್ತು ಗಾಂಧೀಜಿ – ಈ ಮೂರೂ ಸಾಧಕರನ್ನು ಕುವೆಂಪು ಹೇಗೆ ಗ್ರಹಿಸಿದ್ದಾರೆ ಹಾಗೂ ಅವರನ್ನು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಸಿದ್ದಾರೆ ಎಂಬುದನ್ನು ಪರಿಶೋಧಿಸುವ ಪ್ರಯತ್ನ ನಡೆದಿದೆ.
ಮಾನವೀಯ ಹಾಗೂ ಮೌಲ್ಯಯುತ ಪರಂಪರೆ ಮಾತ್ರ ಸಶಕ್ತ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ಅಧ್ಯಯನಗಳು ನಮ್ಮ ಪರಂಪರೆಯ ಮಹತ್ವವನ್ನು ಅರಿಯಲು ನೆರವಾಗುತ್ತವೆ ಹಾಗೂ ಮುಂದಿನ ತಲೆಮಾರುಗಳಿಗೆ ಸಾಗಿಸುವ ವಾಹಿನಿಗಳೂ ಆಗಿರುತ್ತವೆ.

Article Details

Section

Research Articles

Author Biography

ಬಿ.ಆರ್. ಸತ್ಯನಾರಾಯಣ

ಗ್ರಂಥಪಾಲಕರು, ಸುರಾನಾ ಕಾಲೇಜು (ಸ್ವಾಯತ್ತ), ಸೌತ್‌ ಎಂಡ್‌ ರಸ್ತೆ, ಬಸವನಗುಡಿ, ಬೆಂಗಳೂರು. 

References

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಗದ್ಯ: ಸಂಪುಟ-2, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 496 (“ಮೌಢ್ಯದಿಂದ ಪಾರು ಮಾಡಲು ಎರಡು ಪ್ರಯತ್ನಗಳು ನಡೆದವು. ಒಂದು ಬುದ್ಧಿಸಂ, ಬುದ್ಧದೇವ ಬಹಳ ಪ್ರಯತ್ನ ಮಾಡಿದ, ಈ ಮೌಢ್ಯದಿಂದ ನಮ್ಮನ್ನು ಪಾರುಮಾಡಬೇಕೆಂದು. ಕಡೆಗೆ ಏನಾಯಿತು? ಒಂದಷ್ಟು ದೂರ ನಡೆಯಿತು. ಆಮೇಲೆ ಬಿದ್ದುಹೋಯಿತು. 12ನೆಯ ಶತಮಾನದಲ್ಲಿ ಜಾತಿವಿನಾಶ ಮಾಡಬೇಕೆಂದು ಹೇಳಿ ಬಸವೇಶ್ವರರು ಜಗತ್ತಿನಲ್ಲಿ ಯಾರೂ ಮಾಡದೆ ಇರುವ ಪ್ರಯತ್ನ ಪ್ರಾರಂಭ ಮಾಡಿದರು.”)

ಅದೇ, ಪು.ಸಂ. 633

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ನಾಟಕ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 125

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 513

ಅದೇ, ಪು.ಸಂ. 368-69

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಗದ್ಯ: ಸಂಪುಟ-2, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 29

ಅದೇ, ಪು.ಸಂ. 850

ಅದೇ, ಪು.ಸಂ. 933

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಗದ್ಯ: ನೆನಪಿನ ದೋಣಿಯಲ್ಲಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 1023

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಗದ್ಯ: ಸಂಪುಟ-1, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 299

ಅದೇ, ಪು.ಸಂ. 299 (“ಅವರ ಉದ್ದೇಶ ಕೃತಿಲೋಕದ ರಸಾನುಭವಲ್ಲ; ಭವಲೋಕಕ್ಕೆ ಅಭವಾಲೋಕವನ್ನು ತರುವ ಗುರುತರ ಕಾರ್ಯ. ಅವರು ಬಾರಿಸಲು ಆಸೆಪಟ್ಟಿದ್ದು ವೀಣೆಯನ್ನಲ್ಲ, ಒಡಲನ್ನು. ಅವರು ಹಸನುಗೊಳಿಸಲಿ ಎಳಸಿದ್ದು ಕಿನ್ನರಿಯ ತಂತಿಗಳನ್ನಲ್ಲ, ನರನ ನರಗಳನ್ನು... ಮನುಷ್ಯನ ಹೃದಯದಲ್ಲಿ ಮಹೇಶ್ವರನನ್ನು ಕಡೆದು ರಚಿಸುವ ಮಹತ್ತರವಾದ ಭವ್ಯೋದ್ದೇಶ ಅವರದಾಗಿತ್ತು”)

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಗದ್ಯ: ಸಂಪುಟ-2, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 962

ಅದೇ, ಪು.ಸಂ. 1053-54

ಅದೇ, ಪು.ಸಂ. 853

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 883

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಗದ್ಯ: ಸಂಪುಟ-1, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 298-302

ಅದೇ, ಪು.ಸಂ. 52

ಅದೇ, ಪು.ಸಂ. 715

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಗದ್ಯ: ನೆನಪಿನ ದೋಣಿಯಲ್ಲಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 304 [1-4-1924]

ಗಾಂಧಿಯವರನ್ನು ಕುರಿತ ಕುವೆಂಪು ಬರಹಗಳ ಸಮಗ್ರ ಅವಲೋಕನಕ್ಕೆ, ʻಗಾಂಧಿ – 150: ಕುವೆಂಪು ಮತ್ತಿತರ ಕವಿಗಳ ಆಯ್ದ ಬರಹಗಳುʼ ಕೃತಿಯನ್ನು ನೋಡಬಹುದಾಗಿದೆ. (ಸಂಪಾದಕರು: ಡಾ. ಬಿ.ಆರ್. ಸತ್ಯನಾರಾಯಣ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ, 2019)

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಕಾವ್ಯ: ಶ್ರೀರಾಮಾಯಣ ದರ್ಶನಂ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 1-1-36-50

ಅದೇ, ಪು.ಸಂ. 1-1-139-263

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 95-97

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಗದ್ಯ: ಸಂಪುಟ-2, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 337-344

ಅದೇ, ಪು.ಸಂ. 481

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 945-47

ಕುವೆಂಪು, ಶಿವಾರೆಡ್ಡಿ ಕೆ.ಸಿ. (ಸಂ), (2020), ಕುವೆಂಪು ಸಮಗ್ರ ನಾಟಕ, (ಶ್ಮಶಾನ ಕುರುಕ್ಷೇತ್ರಂ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ, ಪು.ಸಂ. 120-21