ಬಸವಣ್ಣನವರ ವಚನಗಳಲ್ಲಿ ಆಧುನಿಕ ಚಿಂತನೆಗಳ ಪ್ರತಿನಿಧೀಕರಣದ ಅನುಸಂಧಾನಗಳು
Main Article Content
Abstract
ಹನ್ನೆರಡನೆಯ ಶತಮಾನ ಎಂದಾಕ್ಷಣ ನಮಗೆಲ್ಲ ಮೈತುಂಬಿಕೊಳ್ಳುವುದು: ಕಲ್ಯಾಣ ಪಟ್ಟಣ. ಬಾಗೇವಾಡಿಯಿಂದ ಕೂಡಲಸಂಗಮ, ಕೂಡಲಸಂಗಮದಿಂದ ಕಲ್ಯಾಣ, ಕಲ್ಯಾಣ ರಾಜ್ಯದ ರಾಜ ಬಿಜ್ಜಳ, ಬಿಜ್ಜಳನ ರಾಜಧಾನಿ ಕಲ್ಯಾಣ ಪಟ್ಟಣ, ಬಸವಣ್ಣನವರು ಕಲ್ಯಾಣ ಬೊಕ್ಕಸದ ಭಂಡಾರಿಯಾಗಿ, ಮಹಾಮಂತ್ರಿಗಳಾಗಿ ಕಲ್ಯಾಣದ ಕೀರ್ತಿಯನ್ನು ಲೋಕದ ಇತಿಹಾಸದಲ್ಲಿ ಬೆಳಗಿ, ನಾಡಿನ ನಾನಾ ಭಾಗಗಳಿಂದ ಸಾಧಕರನ್ನು ಬರಮಾಡಿಕೊಂಡು, ವರ್ಗ, ವರ್ಣ, ಲಿಂಗಭೇದ ರಹಿತ ಶರಣ ಸಮಾಜ ನಿರ್ಮಾಣ ಮಾಡಿದ್ದು, ಬಸವಣ್ಣನವರ ವೈಚಾರಿಕತೆ ಒಪ್ಪದ ಸನಾತನಿಗಳು ರಾಜಶಕ್ತಿಯ ಬಲದಿಂದ ಶರಣರಿಗೆ ಮರಣದಂಡನೆ, ಬಿಜ್ಜಳ ರಾಜನ ಕೊಲೆ, ಕಲ್ಯಾಣ ಕ್ರಾಂತಿ, ಬಸವಣ್ಣನವರ ಸುತ್ತಲೂ ಕಟ್ಟಿ ನಿಂತ ಅನಂತ ಸಾಧಕ ಶರಣರು ಇವೆಲ್ಲವೂ ನಡೆದದ್ದು ಏಕಕಾಲದಲ್ಲಿ. ಬಸವಯುಗವನ್ನು ಎಷ್ಟು ಸಲ ಯಾವ ಮಗ್ಗಲಿನಿಂದಲೂ ಓದಿದರೂ, ಕೇಳಿದರೂ, ಹಾಡಿದರೂ, ತೃಪ್ತಿಯಾಗುವುದಿಲ್ಲ. ಮತ್ತೆ ಮತ್ತೆ ಓದಬೇಕು, ನೋಡಬೇಕು, ಕೇಳಬೇಕು ಬಸವಯುಗದ ಚರಿತ್ರೆಯನ್ನು ಅನ್ನಿಸುವುದು. ಅಷ್ಟೊಂದು ರೋಮಾಂಚನದ ಐತಿಹಾಸಿಕ ಯುಗ ಬಸವಯುಗ.
ಬಾಗೇವಾಡಿಯಿಂದ ಬಸವಣ್ಣನವರ ಬಾಲ್ಯಜೀವನ, ಕೂಡಲಸಂಗಮದಲ್ಲಿ ಸಾಧಕ ಜೀವನ, ಕಲ್ಯಾಣದಲ್ಲಿ ಭಕ್ತಿ ಜೀವನ. ಈ ಮೂರು ಹಂತಗಳಲ್ಲಿ ವರ್ಗ ವ್ಯವಸ್ಥೆ, ಲಿಂಗ ವ್ಯವಸ್ಥೆ, ಪದಾರ್ಥಮಯ ವ್ಯವಸ್ಥೆಯಲ್ಲಿ ಸಮಾಜ ಕಂಡ ಬಸವಣ್ಣನವರು ಭವಿಗಳನ್ನು ಭಕ್ತರನ್ನಾಗಿ, ಅಂಗವ್ಯಸನಿಗಳನ್ನು ಲಿಂಗವ್ಯಸನಿಗಳನ್ನಾಗಿ, ಪದಾರ್ಥವನ್ನು ಪ್ರಸಾದವನ್ನಾಗಿ ಮಾಡಿದವರು. ಜಗತ್ತಿನ ಪ್ರಥಮ ಜನತಾ ಪಾರ್ಲಿಮೆಂಟ್ ಅನುಭವ ಮಂಟಪ ಸ್ಥಾಪಿಸಿ ಅರಮನೆ, ಗುರುಮನೆಯಲ್ಲಿ ಬಂಧಿಸಿದ್ದ ಜ್ಞಾನವನ್ನು ಸಾಮಾನ್ಯರಿಗೆ ದೊರಕುವಂತೆ ಮಾಡಿದವರು ಬಸವಣ್ಣನವರು. ಅದಕ್ಕಾಗಿಯೇ ಬಸವಣ್ಣನವರು ಸಮಾಜದ ಸಮಾನತೆಗಾಗಿ ಮನತುಂಬಿ ಹಾಡಿದ್ದಾರೆ. ಬಸವಣ್ಣನವರ ವಚನಗಳಲ್ಲಿ ಆಧುನಿಕ ಚಿಂತನೆಗಳ ಪ್ರತಿನಿಧೀಕರಣದ ಅನುಸಂಧಾನಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಉಪಾಧ್ಯ ಜಿ.ಎನ್., (2011), ಕಾಯಕಯೋಗಿ ಸೊನ್ನಲಿಗೆಯ ಸಿದ್ಧರಾಮ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು.
ವೀರಣ್ಣ ರಾಜೂರ, (2013), ಬಯಲಬೆಳೆ ಸ್ಮರಣ ಸಂಚಿಕೆ, ಅಖಿಲ ಭಾರತ ಹನ್ನೊಂದನೆಯ ಶರಣ ಸಾಹಿತ್ಯ ಸಮ್ಮೇಳನ, ಧಾರವಾಡ.
ಹಿರೇಮಠ ಆರ್.ಸಿ., (1990), ಶಿವದೀಪ್ತಿ, ಡಾ. ಶಿವಬಸವ ಸ್ವಾಮಿಗಳು ರುದ್ರಾಕ್ಷಿಮಠ ನಾಗನೂರು, ಬೆಳಗಾವಿ.
ಹಿರೇಮಠ ಆರ್.ಸಿ., (1996), ಮಹಾದೇವಿಯಕ್ಕನ ವಚನಗಳು, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ವೀರಣ್ಣ ರಾಜೂರ, (2013), ಸ್ವರವಚನ ನಿರ್ವಚನ, ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಶ್ವರ ಗ್ರಂಥಮಾಲೆ ಶ್ರೀ ಮುರುಘಾಮಠ, ಧಾರವಾಡ.
ಜಗದ್ಗುರು ಮಾತೆ ಮಹಾದೇವಿ, (2012), ಶ್ರೀ ಬಸವೇಶ್ವರ ಪೂಜಾ ವೃತ, ವಿಶ್ವಕಲ್ಯಾಣ ಮಿಶನ್ ಬಸವ ಮಂಟಪ, ಬೆಂಗಳೂರು.