ಮಾನವೀಯ ಸಮಾಜ ರೂಪಿಸುವಲ್ಲಿ ವಚನಗಳ ಪಾತ್ರ

Main Article Content

ಜ್ಯೋತಿ ಎನ್. ಭಟ್

Abstract

ವಚನ ಸಾಹಿತ್ಯವು 12ನೇ ಶತಮಾನದ ಕನ್ನಡದ ವಿಶಿಷ್ಟ ಸಾಹಿತ್ಯಪ್ರಕಾರವಾಗಿದೆ. ಇದನ್ನು ಪಂಡಿತರಿಗೆ ಮೀಸಲಾಗಿದ್ದ ಸಾಹಿತ್ಯದ ಮೀರೆದು, ಸಾಮಾನ್ಯ ಜನರ ಬದುಕು, ಅನುಭವ, ತತ್ವಗಳನ್ನು ಸರಳವಾದ ಭಾಷೆಯಲ್ಲಿ ವ್ಯಾಖ್ಯಾನಿಸಿ ಸಮಾಜದಲ್ಲಿ ಜಾಗೃತಿ ತರಲು ಶರಣರು ಬಳಸಿದರು. ಮಾತನ್ನು ಮತಿಸಿದಾಗ ಮಾತ್ರ ವಚನವಾಗುವುದು ಎಂಬ ತತ್ವದೊಂದಿಗೆ, ವಚನಗಳು ಅನುಭವದ ಭಾವಗೀತೆಗಳಾಗಿವೆ. ಇದರಲ್ಲಿ ಧರ್ಮ, ನೀತಿ, ಜ್ಞಾನ, ಶ್ರಮ, ಸಮಾನತೆ, ಕಾಯಕ ಮತ್ತು ದಾಸೋಹದಂತಹ ಮಾನವ ಮೌಲ್ಯಗಳು ಸೊಗಸಾಗಿ ಪ್ರತಿಬಿಂಬಿಸುತ್ತವೆ. ಜಾತಿ, ಲಿಂಗ, ಧರ್ಮಗಳ ಭೇದವನ್ನು ತಿರಸ್ಕರಿಸಿ ಎಲ್ಲರಿಗೂ ಸಮಾನ ಸ್ಥಾನವಿರಬೇಕು ಎಂಬ ಸಂದೇಶ ನೀಡುತ್ತವೆ. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣನಂತಹ ಶರಣರು ಸಮಾಜ ಸುಧಾರಣೆಗೆ ಮುಂಚೂಣಿಯಲ್ಲಿದ್ದರು. ಅವರು ಪುರಾಣಕಥೆಗಳನ್ನು ಬಳಸದೆ, ತಾವು ಅನುಭವಿಸಿದ ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯಗಳನ್ನು ವಚನಗಳ ಮೂಲಕ ಪ್ರತಿಭಟಿಸಿದರು. ಕೃತಕ ಆಚರಣೆಗಳನ್ನು ತಿರಸ್ಕರಿಸಿ, ನೈತಿಕ ಶುದ್ಧತೆಯನ್ನು ಬಲಪಡಿಸಿದರು. ವಚನಗಳು ಕೇವಲ ಸಾಹಿತ್ಯವಲ್ಲದೆ, ಜೀವನ ದರ್ಶನವನ್ನೂ ನೀಡುತ್ತವೆ. ಇವುಗಳಲ್ಲಿ ಕಲಿತ ಮೌಲ್ಯಗಳು ಇಂದಿನ ಸವಾಲುಗಳಿಗೂ ಮಾರ್ಗದರ್ಶನ ನೀಡುತ್ತವೆ. ವಚನ ಸಾಹಿತ್ಯವು ಕನ್ನಡದಿಂದ ವಿಶ್ವಸಾಹಿತ್ಯಕ್ಕೆ ನೀಡಬಹುದಾದ ಅತ್ಯುನ್ನತ ಕೊಡುಗೆಯಾಗಿದೆ. 
ವಚನ ಸಾಹಿತ್ಯವು ಕೇವಲ ಧಾರ್ಮಿಕ ಭಾವನೆಗಳನ್ನು ಮಾತ್ರವಲ್ಲ, ಬದಲಾಗಿ ಸಮಾಜದ ಬದಲಾವಣೆಗಾಗಿ ಹೊಸ ಚಿಂತನೆಗಳನ್ನು ನೀಡುವ, ಸಮಾನತೆಯ ಪರಿಕಲ್ಪನೆಯನ್ನು ನಾಟಿದ, ಜಾಗೃತಿ ಮೂಡಿಸುವ ಜೀವಂತ ವಾಕ್ಯಮಾಲೆಯಾಗಿದೆ. ಇಂದಿಗೂ ಈ ಸಾಹಿತ್ಯವು ಸಮಕಾಲೀನ ಸಮಸ್ಯೆಗಳಿಗೆ ಸಮಯೋಚಿತ ಪರಿಹಾರವಾಗುತ್ತದೆ. 

Article Details

Section

Research Articles

Author Biography

ಜ್ಯೋತಿ ಎನ್. ಭಟ್

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು, ಬೆಂಗಳೂರು.

References

ಚಿದಾನಂದಮೂರ್ತಿ ಎಂ., (1967), ಬಸವವಾಣಿ ಮತ್ತು ಶರಣರ ಬೋಧನೆ, ಶ್ರೀಕಂಠೇಶ್ವರ ಪ್ರೆಸ್‌ ಮತ್ತು ಡಿಪೋ, ಬೆಂಗಳೂರು.

ಕಲಬುರ್ಗಿ ಎಂ.ಎಂ., (1993), ಬಸವಣ್ಣನವರ ವಚನ ಸಂಪುಟ-1, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.