ಇತಿಹಾಸದ ಆಕರ ಸಾಮಗ್ರಿಯಾಗಿ ಐತಿಹಾಸಿಕ ಲಾವಣಿಗಳು
Main Article Content
Abstract
ರಾಷ್ಟ್ರದ ಇತಿಹಾಸವನ್ನು ನಿರ್ಮಿಸಲು ಶಾಸನ ಹಾಗೂ ಸಾಹಿತ್ಯದಂತೆ ಜನಪದ ಹಾಡುಗಳು, ವಿಶೇಷವಾಗಿ ಐತಿಹಾಸಿಕ ಲಾವಣಿಗಳು ಪ್ರಮುಖ ಆಕರ ಸಾಮಗ್ರಿಗಳಾಗಿವೆ. ಉತ್ತರ ಕರ್ನಾಟಕದ ಹುಲಕುಂದ ಲಾವಣಿ ಸಂಪ್ರದಾಯದ ಶಿವಲಿಂಗ ಕವಿ, ಭೀಮ ಕವಿ ಮುಂತಾದವರು ರಚಿಸಿದ ಕೃತಿಗಳಲ್ಲಿ ಐತಿಹಾಸಿಕ ವೀರರ ಸಾಂಸ್ಕೃತಿಕ ಜೀವನ ಚಿತ್ರಣವಿದೆ. ಕಿತ್ತೂರ ಕೋಟೆ, ಕಿತ್ತೂರ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಶೂರ ಸಂಗೊಳ್ಳಿ ರಾಯಣ್ಣ ಮತ್ತು ರಾಮದುರ್ಗ ದುರಂತಗಳನ್ನು ಕುರಿತಾದ ಲಾವಣಿಗಳು ಕೇವಲ ಉತ್ಪ್ರೇಕ್ಷೆಯಲ್ಲದೆ, ನಡೆದ ಘಟನೆಗಳ ನಿಖರ ಮತ್ತು ನೈಜ ಮಾಹಿತಿಯನ್ನು ಒದಗಿಸುತ್ತವೆ. ಗತವೈಭವ, ಯುದ್ಧದ ವಿವರಗಳು, ಬ್ರಿಟಿಷರೊಂದಿಗಿನ ಹೋರಾಟ ಹಾಗೂ ವೀರರ ಬಲಿದಾನದ ಇತಿಹಾಸವನ್ನು ಮರುಸೃಷ್ಟಿಸಲು ಈ ಜನಪದ ಕಾವ್ಯಗಳು ಲಿಖಿತ ದಾಖಲೆಗಳಿಗಿಂತಲೂ ಅತ್ಯಂತ ಮಹತ್ವದ ಮತ್ತು ವಿಶ್ವಾಸಾರ್ಹ ಚಾರಿತ್ರಿಕ ಆಧಾರಗಳಾಗಿವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಡಾ. ಬಿ. ಎಸ್. ಭಜಂತ್ರಿ ಹುಲಕುಂದದ ಲಾವಣಿ ಸಂಪ್ರದಾಯ, ಪು-40.
ಡಾ. ರಾ. ಯ. ಧಾರವಾಡಕರ: ಹೊಸಗನ್ನಡ ಸಾಹಿತ್ಯದ ಉದಯಕಾಲ, ಪು-60.
ಭೀಮಕವಿ ಕೃತಿಗಳು: ಸರ್ವೋದಯ ಗ್ರಾಮೀಣ ಜನಪದ ಗೀತೆಗಳು.
ಕಂದಭೀಮಕವಿ: ರಾಷ್ಟ್ರೀಯ ಗೀ ಗೀ ಪದಗಳು.
ಶಿವಲಿಂಗಕವಿ ಕೃತಿಗಳು: (ಸಂ) ಧುಂಡಿರಾಜ ಲಿಮಯೆ, ಕನ್ನಡ ಗೀಗೀ ಪದಗಳು.