ವಚನ ಸಾಹಿತ್ಯ: ಮಾನವ ಮೌಲ್ಯಗಳ ಪ್ರತಿಬಿಂಬ
Main Article Content
Abstract
ವಚನವೆಂಬುದು ಕೇವಲ ಸಾಹಿತ್ಯ ಪ್ರಕಾರವಲ್ಲ ಅದು ಒಂದು ಚಳುವಳಿ ಕೂಡ ಆಗಿದೆ. ಅದನ್ನು ಸಮಾಜೋ ಧಾಶ್ರಮಿಕ ಚಳುವಳಿ, ಕಾಯಕ ಜೀವಿಗಳ, ಚಳುವಳಿ ಪರಿಪೂರ್ಣ ಚಳುವಳಿ ಎಂದು ಬಗೆಬಗೆಯಾಗಿ ಕನ್ನಡ ವಿದ್ವಾಂಸರು ಅದರ ಸ್ವರೂಪ ಮಹಿಮೆಯನ್ನು ಬಣ್ಣಿಸಿದ್ದಾರೆ. ವಚನ ಸಾಹಿತ್ಯ ಇಡೀ ಭಾರತೀಯ ಭಾಷೆಗಳಲ್ಲಿಯೇ ವಿಶಿಷ್ಟವಾದುದು. ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಆದಾಗಿದೆ ಎಂದರೂ ನಡೆಯುತ್ತದೆ.
ಮಾನವ ಕುಲದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸಿದ ಮಹಾತ್ಮರಾದ ಶಿವಶರಣರು ಅನನ್ಯ ಕೊಡುಗೆ ನೀಡಿರುವ ಜಗತ್ತಿನ ಅಪರೂಪದ ಸಾಹಿತ್ಯ ವಚನಗಳು. ವಚನಗಳು ಎಂದಾಕ್ಷಣ ನೆನಪಾಗುವುದೇ ಶಿವಶರಣರು. ಶರಣ ಪಂಥಕ್ಕೆ ಭಕ್ತಿಯ ಶಕ್ತಿಯೇ ಕೇಂದ್ರ ಬಿಂದು. ವಚನ ಸಾಹಿತ್ಯವು ಸವಿಸ್ತಾರವಾದ ಸಮುದ್ರದ ಆಳದಲ್ಲಿನ ಮುತ್ತು, ರತ್ನಗಳನ್ನು ಹೆಕ್ಕಿ ಅಳೆದು, ತೂಗಿ ಸಂಭ್ರಮಿಸಿ, ಅನುಭವಿಸಬೇಕು.
ವಚನಗಳಿಂದ ನಾವು ಜೀವನದಲ್ಲಿ ನೈತಿಕವಾಗಿ ಬದುಕುವುದನ್ನು ಅರಿಯಬಹುದು. ವಚನ ಎನ್ನುವ ಪದದಲ್ಲೇ ಮೌಲ್ಯವಿದೆ. ವಚನ ಎಂದರೆ ಸಂಸ್ಕ್ರತದಲ್ಲಿ ಮಾತು, ಮಾತನಾಡುವುದು, ವ್ಯಕ್ತಪಡಿಸುವುದು ಇತ್ಯಾಧಿ ಅರ್ಥಗಳಿವೆ. ಮುಖ್ಯವಾಗಿ ವಚನ ಎಂದರೆ ಪ್ರಮಾಣ, ಆಣೆ ಎಂತಲೂ ಅರ್ಥವಿದೆ. ಬಸವಣ್ಣ ಮುಂತಾದ ವಚನಕಾರರಲ್ಲಿ ವಚನ ಎಂಬ ಮಾತು ಬಳಕೆಯಾಗಿದೆ.
ಅನ್ಯರ ವಚನವ ಕೊಂಡಾಡಲು ಕರ್ಮ ಬಿಡದು/ಮೃದು ವಚನ ಸಕಲ ಜಪಂಗಳಯ್ಯ ಇತ್ಯಾಧಿ ಉಕ್ತಿಗಳಿವೆ.
ಮಾನವ ಸಂಕಲ್ಪ ಸಿದ್ಧಿಗಾಗಿ ಕೈಗೊಂಡ ಕಾರ್ಯಗಳನ್ನು ಕೈಗೂಡಿಸುವಂತೆ ಮಾಡುವ ಮೌಲ್ಯಗಳು ವಚನಗಳಲ್ಲಿವೆ. ಜೀವನ ಮೌಲ್ಯಗಳ ಉದ್ದೇಶವೇ ಸಮಾಜದ ಹಿತವನ್ನು ಕಾಪಾಡುವುದು. ಇಂತಹ ವಚನಗಳಿಂದ ಜೀವನಕ್ಕಾಗಿ ಮೌಲ್ಯಗಳನ್ನೇ ವಚನಕಾರರೇ ಹೇಳಿದ್ದಾರೆ. ಜೀವನ ಮೌಲ್ಯ ಎಂದರೇ ತನ್ನ ಸ್ವಾರ್ಥವನ್ನು ಬಿಟ್ಟು ಸ್ವಲ್ಪ ಮಟ್ಟಿಗಾದರೂ ಇತರರ ಕಡೆಗೂ ಗಮನಿಸುವುದು ಮತ್ತು ಆ ನಿಟ್ಟಿನಲ್ಲಿ ಕರ್ತವ್ಯ ನಿಷ್ಠೆಯನ್ನು ಹೆಚ್ಚಿಸುವುದೇ ಆಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಶಾಮರಾಯ ತ.ಸು., (2012), ಕನ್ನಡ ಸಾಹಿತ್ಯ ಚರಿತ್ರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಮುಗಳಿ ರಂ.ಶ್ರೀ. (2014), ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್ ಹೌಸ್, ಮೈಸೂರು.
ಶ್ರೀನಿವಾಸಮೂರ್ತಿ ಎಂ.ಆರ್., (2023), ವಚನ ಧರ್ಮಸಾರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಕನ್ನಡ ಪುಸ್ತಕ ಪ್ರಾಧಿಕಾರ, (2021), ಸಮಗ್ರ ವಚನ ಸಾಹಿತ್ಯ ಸಂಪುಟಗಳು: 1-15, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ಚಿದಾನಂದಮೂರ್ತಿ ಎಂ., (2015), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ: ವಚನ ಸಾಹಿತ್ಯ, ಸಪ್ನ ಬುಕ್ ಹೌಸ್, ಬೆಂಗಳೂರು.