ಅಕ್ಕಮಹಾದೇವಿಯ ವಚನಗಳಲ್ಲಿ ಸ್ತ್ರೀ ಚಿಂತನೆಗಳು
Main Article Content
Abstract
ಹನ್ನೆರಡನೆಯ ಶತಮಾನವೆಂದರೆ; ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಬದಲಾವಣೆಗೊಂಡ ಕಾಲ. ಅದನ್ನು ಕ್ರಾಂತಿ ಎಂದೇ ಕರೆಯಬೇಕಾಗುತ್ತದೆ. ಹಿಂದೆ ಸಮಾಜದಲ್ಲ್ಲಿದ್ದ ಅಸಮಾನತೆ, ಶೋಷಣೆಗಳನ್ನು ಕಂಡು ಅನುಭವಿಸಿದ್ದ ಶರಣ, ಶರಣೆಯರು ಮೇಲು-ಕೀಳು ಸ್ತ್ರೀ-ಪುರುಷ ಇತ್ಯಾದಿ ಭೇದ ರಹಿತವಾದ ವರ್ಗರಹಿತವಾದ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. 12ನೇ ಶತಮಾನದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿ. ಬಸವಣ್ಣನವರ ಸಮಕಾಲೀನಳಾಗಿ ಬದುಕಿದಳು. ಈಕೆ ಶಿವಶರಣೆಯಾಗಿ, ವಚನಕಾರ್ತಿಯಾಗಿ, ಚೆನ್ನಮಲ್ಲಿಕಾರ್ಜುನನ ಭಕ್ತೆಯಾಗಿ ಪ್ರಸಿದ್ಧಳಾದವಳು. ಈಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಎಂಬ ಗ್ರಾಮದಲ್ಲಿ ನಿರ್ಮಲ ಮತ್ತು ಸುಮತಿಯರ ಮಗಳಾಗಿ ಜನಿಸಿದಳು. ಬಾಲ್ಯದಲ್ಲೇ ಶಿವಭಕ್ತಿಯನ್ನು ಹೊಂದಿದ್ದ ಈಕೆಗೆ ಶಿವಪೂಜೆ ಶಿವಧ್ಯಾನಗಳೇ ಆಟಗಳಾಗಿದ್ದವು. ಪರಮಾತ್ಮನಾದ ಚೆನ್ನಮಲ್ಲಿಕಾರ್ಜುನನ ಮೇಲೆ ಅತೀವವಾದ ಪ್ರೀತಿ ಇಟ್ಟುಕೊಂಡಿದ್ದ ಈಕೆ ವೈವಾಹಿಕ ಬದುಕನ್ನು ತ್ಯಜಿಸಿ ದೇವರ ಸೇವೆಗೆ ತನ್ನನ್ನು ಅರ್ಪಿಸಿಕೊಂಡಳು. ಇದು ಮಹಿಳೆರ ಆಯ್ಕೆಯ ಸ್ವಾತಂತ್ರ್ಯವನ್ನು ತೋರಿಸುತ್ತದೆ. ಇವರ ವಚನಗಳು ಸಾಮಾಜಿಕ ಸುಧಾರಣೆಗೆ ಪ್ರೇರಣೆಯಾಗಿದ್ದು, ವಿಶೇಷವಾಗಿ ಸ್ತ್ರೀಯರ ಸ್ಥಿತಿ, ಸ್ವಾತಂತ್ರ್ಯ ಮತ್ತು ಅವರ ಮನೋಭಾವನೆಗಳಿಗೆ ಮಹತ್ವವನ್ನು ನೀಡಿವೆ. ಅಕ್ಕಮಹಾದೇವಿ ದೈಹಿಕ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡದೆ, ಅದನ್ನು ಕ್ಷಣಿಕ ಮತ್ತು ವ್ಯರ್ಥವೆಂದು ಪ್ರತಿಪಾದಿಸುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ಸಮಾಜ ಕಂಟಕರನ್ನು, ಸ್ತ್ರೀ ಶೋಷಕರನ್ನು ಹತ್ತಿಕ್ಕಿ ಇಲ್ಲ್ಲಿಯೇ ಇದ್ದು ಗೆಲ್ಲಬೇಕೆಂಬ ಆಶಯ ಅಕ್ಕಮಹಾದೇವಿಯದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಬಸವರಾಜು ಎಲ್. (ಸಂ.), (1997), ಅಕ್ಕನ ವಚನಗಳು, ಗೀತಾ ಬುಕ್ ಹೌಸ್, ಮೈಸೂರು.
ನಾಗಭೂಷಣಸ್ವಾಮಿ ಓ.ಎಲ್., (2014), ವಚನ ವಿಚಾರ, ಅಲ್ಲಮ ಪ್ರಕಾಶನ, ಮೈಸೂರು.
ಶೈಲಜಾ ಉಡಚಣ, (1996), ವಚನಕಾರ್ತಿಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಸವಿತ ಕೊಟಬಾಗಿ, (2014), ಸಾಹಿತ್ಯ ಮಂಥನ, ಆತ್ಮಶ್ರಿ ಪ್ರಕಾಶನ, ಬೆಂಗಳೂರು.