ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು

Main Article Content

ಕುಮಾರ ಹೆಚ್.ಸಿ.

Abstract

ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶಿಷ್ಟ ಮಾದರಿಯ ಸಾಹಿತ್ಯ ಪ್ರಕಾರವಾಗಿದ್ದು, ಕಾಯಕಕ್ಕೆ, ಮಾನವೀಯ ಸಂಬಂಧಗಳಿಗೆ ಹಾಗೂ ಸೃಜನಶೀಲತೆಗೆ ಪ್ರಮುಖ ಸ್ಥಾನವನ್ನು ನೀಡಿ ಗೌರವಿಸಿದೆ. ಶಿವಶರಣರು ತಮ್ಮ ದಿನನಿತ್ಯದ ನಡೆನುಡಿಗಳನ್ನೇ ವಚನಗಳೆಂಬ ಹಾಡುಗಬ್ಬವಾಗಿ ರಚಿಸಿದರು. ಬಸವಣ್ಣ, ಅಕ್ಕ, ಅಲ್ಲಮ ದಾಸಿಮಯ್ಯ, ಸಿದ್ದರಾಮರಂಥಹ ಅನೇಕ ವಚನಕಾರರರು ಕಾಯಕಕ್ಕೆ ಮಹತ್ವ ಕೊಟ್ಟು ಜನರಲ್ಲಿದ್ದ ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಹೊಸ ವಿಶ್ವಾಸದ ಹಾದಿಯನ್ನು ತೋರಿಸಿದರು.
ಲಿಂಗ ತಾರತಮ್ಯ, ವರ್ಗ ಸಂಘರ್ಷ, ಜಾತಿ ಪದ್ಧತಿ ಅಸಮಾನತೆ ಮುಂತಾದ ವ್ಯವಸ್ಥೆಗಳ ವಿರುದ್ಧ ಹೋರಾಡಿ ಸಭ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆದರು. ನಡೆ ನುಡಿ ಶುದ್ಧವಾಗಿರಬೇಕು. ಮನುಷ್ಯನಿಗೆ, ಗಾಳಿ, ನೀರು, ಊಟ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ತತ್ವಗಳು ಆದರ್ಶಗಳು, ಮೌಲ್ಯಗಳು ಎಂದು ತಿಳಿಸಿಕೊಟ್ಟರು. ಕೆಟ್ಟ ಸಮಾಜದ ನಾಶಕ್ಕಾಗಿ ಹಗಲಿರುಳು, ಪ್ರೀತಿಸುವ ಕಾಯಕ ಮಾಡುವ ಸಮಾಜವನ್ನು ನಿರೀಕ್ಷಿಸದೆ ವಚನಕಾರರು, ಅದನ್ನು ಜಾರಿಗೊಳಿಸುವಲ್ಲಿ ಸಫಲರಾದರು.
12ನೇ ಶತಮಾನದಲ್ಲಿ ಬಂದಂಥಹ ಈ ವಚನ ಸಾಹಿತ್ಯವು ಸಮಾಜದ ದಿಕ್ಕುದಿಸೆಯನ್ನೇ ಬದಲಾಯಿಸಿ ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿ ಎಂದೂ ಅಳಿಯದ ಅಚ್ಚನ್ನು ಒತ್ತಿದೆ. ಈ ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು, ಜೀವನ ಮೌಲ್ಯಗಳು ತುಂಬಾ ಇವೆ ಎಂದು ಹೇಳಬಹುದು.

Article Details

Section

Research Articles

Author Biography

ಕುಮಾರ ಹೆಚ್.ಸಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಎನ್.ಐ.ಇ. ಪ್ರಥಮ ದರ್ಜೆ ಕಾಲೇಜು, ವಿಶ್ವೇಶ್ವರ ನಗರ, ಮೈಸೂರು.

 

References

ಚಿದಾನಂದ ಮೂರ್ತಿ ಎಂ., (2009), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ: ವಚನ ಸಾಹಿತ್ಯ, ಸಪ್ನ ಬುಕ್‌ ಹೌಸ್‌, ಬೆಂಗಳೂರು.

ತಿಪ್ಪೇರುದ್ರಸ್ವಾಮಿ ಎಚ್., (2019), ಶರಣರ ಅನುಭಾವ ಸಾಹಿತ್ಯ, ಡಿ.ವಿ.ಕೆ. ಮೂರ್ತಿ ಪ್ರಕಾಶನ, ಮೈಸೂರು.