ಭಾರತೀಯ ಸಂಸ್ಕೃತಿಯಲ್ಲಿ ಮಣ್ಣಿನ ಹಬ್ಬಗಳ ಮಹತ್ವ

Main Article Content

ಕೆ.ಎಲ್. ಗುಡಿಮನಿ

Abstract

ಭರತಭೂಮಿಯನ್ನು ಹಬ್ಬಗಳ ನಾಡು ಎಂದು ಕರೆಯಬಹುದಾಗಿದೆ. ಗ್ರಾಮೀಣ ಹಬ್ಬಗಳ ರಾಷ್ಟ್ರವಾಗಿರುವುದರಿಂದ ಋತುಮಾನ, ಸುಗ್ಗಿ, ಮಳೆ ಮತ್ತು ಹುಣ್ಣಿಮೆಯಂತಹ ದಿನಗಳಲ್ಲಿ ಹಬ್ಬಗಳನ್ನು ಹರುಷದಿಂದ ಆಚರಿಸುವ ಸಂಪ್ರದಾಯ ಇನ್ನೂ ಜೀವಂತವಾಗಿದೆ. ವಿಭಿನ್ನ ಸಂಸ್ಕೃತಿ, ಭಾಷೆ ಮತ್ತು ಧರ್ಮಗಳ ಸಮ್ಮಿಲನಗೊಂಡಿರುವ ಈ ನಾಡಿನಲ್ಲಿ ಕಾಲಮಾನಕ್ಕನುಸಾರ ಇಲ್ಲಿಯ ಜನರು ಮಣ್ಣನ್ನೇ ನಂಬಿ, ಮಣ್ಣೇ ದೇವರೆಂದು ಬಗೆದು ದೈವತ್ವದ ಭಾವದಲ್ಲಿ ಬದುಕುತ್ತಿದ್ದಾರೆ. ಮಣ್ಣಿನೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದಂತಹ ನಮ್ಮ ಜನಪದರು ಕಾರಹುಣ್ಣಿಮೆ, ಗುಳ್ಳವ್ವನ ಪೂಜೆ, ನಾಗರಪಂಚಮಿ, ಗಣೇಶ ಚವತಿ, ಜೋಕುಮಾರ, ವಿಜಯದಶಮಿ, ಶಿಗವ್ವ-ಗೌರವ್ವ, ದೀಪಾವಳಿ, ಭಾರತ ಹುಣ್ಣಿಮೆ, ಶಿವರಾತ್ರಿ, ಹೋಳಿ ಹುಣ್ಣಿಮೆಯಂತಹ ಹಬ್ಬಗಳನ್ನು ಆಚರಣೆಗೈಯುತ್ತಾ ಬಂದಿರುವ ನಾಡಿನ ಭವ್ಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರಸ್ತುತ ಲೇಖನ ಪ್ರಚುರಪಡಿಸುತ್ತದೆ. 

Article Details

Section

Research Articles

Author Biography

ಕೆ.ಎಲ್. ಗುಡಿಮನಿ

ಕನ್ನಡ ಉಪನ್ಯಾಸಕರು, ದಾನಮ್ಮದೇವಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯ, ಮುಧೋಳ.

How to Cite

ಕೆ.ಎಲ್. ಗುಡಿಮನಿ. (2025). ಭಾರತೀಯ ಸಂಸ್ಕೃತಿಯಲ್ಲಿ ಮಣ್ಣಿನ ಹಬ್ಬಗಳ ಮಹತ್ವ. ಅಕ್ಷರಸೂರ್ಯ (AKSHARASURYA), 6(02), 133 to 140. https://aksharasurya.com/index.php/latest/article/view/1120

References

ಹಲಸಂಗಿ ಮಧುರಚೆನ್ನರು ಮತ್ತು ಗೆಳೆಯರು (ಸಂ), (1990), ಗರತಿಯ ಹಾಡು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ಪು.ಸಂ. 49

ಯಜ್ಞನಾರಾಯಣ ಉಡುಪ, (2003), ಭಾರತ ಚೂಡಾಮಣಿ, ಜನಪ್ರೀಯ ಪುಸ್ತಕ ಮಾಲೆ, ಬೆಂಗಳೂರು, ಪು.ಸಂ. 217

ಪ್ರಕಾಶ ಖಾಡೆ, (2024), ಗ್ರಾಮ್ಯ, ಖಾಡೆ ಪ್ರಕಾಶನ, ಬಾಗಲಕೋಟೆ, ಪು.ಸಂ. 153

ಅಂಬಳಿಕೆ ಹಿರಿಯಣ್ಣ, (2001), ನಮ್ಮ ಜಾನಪದ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಪು.ಸಂ. 116