ಮೌನೇಶ್ವರರ ಹುಷಾರು, ಪರಾಕು, ಡಂಗುರ ಮತ್ತು ಸುವ್ವಿಹಾಡುಗಳು.

Authors

  • VANAJAKSHI MA. BADIGER

Abstract

ಜಗತ್ತಿನ ಕತ್ತಲೆಯನ್ನು ಕಳೆಯಲೆಂದು ಜನಿಸಿ ಬಂದ ಚೇತನ. ಧರ್ಮಗಳ ಮಧ್ಯ ಭಾವೈಕ್ಯತೆಯನ್ನು ಸಾರಿರುವ ಭಾವೈಕ್ಯತೆಯ ಹರಿಕಾರ. ಸೂಫಿ ಮಾದರಿಯ ಸಂತ ಎನ್ನಿಸಿಕೊಂಡವರು ಶ್ರೀ ತಿಂಥಣಿ ಮೌನೇಶ್ವರರು. ಇವರು ಸಗರನಾಡೆಂದು ಪ್ರಸಿದ್ಧಿಯನ್ನು ಪಡೆದ ಸುರಪುರ ತಾಲೂಕಿನ ದೇವರಗೋನಾಳ ಗ್ರಾಮದ ಹಾವಪ್ಪ ಹಾವಮ್ಮರೆಂಬ ವಿಶ್ವಕರ್ಮ ದಂಪತಿಗಳ ಮಗನಾಗಿ 16-17ನೇ ಶತಮಾನದ ಕಾಲದಲ್ಲಿ ಜನಿಸಿದರು.

 ಮೌನೇಶ್ವರರು ಜನಿಸಿರುವ 16-17ನೇ ಶತಮಾನದಲ್ಲಿ ಮಹ್ಮದೀಯರ ಆಳ್ವಿಕೆಯಿಂದ ಸಾಮಾಜಿಕ ಸ್ಥಿತಿಯು ಬಹಳೇ ಅಸ್ತವ್ಯಸ್ಥವಾಗಿತ್ತು. ಸಾಮಾನ್ಯ ಜನರ ಸ್ಥಿತಿಗತಿಯು ತೊಂದರೆಗೆ ಒಳಗಾಗಿತ್ತು. ಧರ್ಮಗಳ ಮಧ್ಯದಲ್ಲಿ ದ್ವೇಷಾಸೂಯೆಗಳು ಹುಟ್ಟಿಕೊಂಡಿದ್ದವು. ಸಾಮಾಜಿಕ ಕಾಳಜಿಯನ್ನು ಹೊಂದಿರುವ ಮೌನೇಶ್ವರರು ಸಮಾಜದ ಬದಲಾವಣೆಗೆ ಮುಂದಾದರು. ಜನರಲ್ಲಿ ಆಳವಾಗಿ ಬೇರೂರಿರುವ ಅಜ್ಞಾನ, ಮೂಡನಂಬಿಕೆಗಳನ್ನು ಕಳೆದರು. ಸತ್ಯ, ನ್ಯಾಯ ನೀತಿ ಮತ್ತು ಧರ್ಮಗಳಲ್ಲಿ ಸಾಮರಸ್ಯವನ್ನು ಮೂಡಿಸಲೆಂದು ತಾವೇ ವಚನಗಳನ್ನು ರಚಿಸಿ ನಾಡಿನಾದ್ಯಂತ ಸುತ್ತಾಡಿದರು. ವಚನಗಳನ್ನು ಬೋಧಿಸುತ್ತ ಜನತೆಯನ್ನು ಎಚ್ಚರಿಸಿದರು.

 ಮೌನೇಶ್ವರರು ಸುಮಾರು 800ಕ್ಕೂ ಅಧಿಕವಾದ ವಚನಗಳನ್ನು ರಚಿಸಿದ್ದಾರೆ. ಈ ವಚನಗಳು ಜನರಿಗೆ ಬಾಳಿನ ದಾರಿದೀಪಗಳಾಗಿವೆ. ಮೌನೇಶ್ವರರ ವಚನಗಳನ್ನು ಕಾಲಜ್ಞಾನ, ಖಂಡಜ್ಞಾನ, ನೀತಿ ಮತ್ತು ಬೋಧ ಪಧಾನವಾದ ನಾಲ್ಕು ಪ್ರಕಾರದ ವಚನಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕಾಲಜ್ಞಾನಕ್ಕೆ ಸಂಬಂಧಿಸಿರುವ ‘ಹುಷಾರು, ಫರಾಕು, ಡಂಗುರ ಮತ್ತು ಸುವ್ವಿಹಾಡಗಳು’. ಈ ವಚನಗಳ ಕುರಿತಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ತಿಳಿಯೋಣ.

Downloads

Published

05.04.2023

How to Cite

VANAJAKSHI MA. BADIGER. (2023). ಮೌನೇಶ್ವರರ ಹುಷಾರು, ಪರಾಕು, ಡಂಗುರ ಮತ್ತು ಸುವ್ವಿಹಾಡುಗಳು. AKSHARASURYA, 2(04), 08–12. Retrieved from https://aksharasurya.com/index.php/latest/article/view/96

Issue

Section

Article