ಚಿಕ್ಕಮಗಳೂರಿನಲ್ಲಿ ಸ್ವಸಹಾಯ ಸಂಘಗಳು ಮತ್ತು ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರ
Main Article Content
Abstract
ಆರ್ಥಿಕ ಅಸಮಾನತೆಯಿಂದ ಕೂಡಿದ ನಮ್ಮ ಸಾಮಾಜಿಕ ಸ್ತರ ವಿನ್ಯಾಸದಲ್ಲಿ ಮಹಿಳಾ ಶೋಷಣೆಯು ಯಾವುದೇ ಒಬ್ಬ ವ್ಯಕ್ತಿಯ ಉದ್ದೇಶಿತ ಕ್ರಿಯೆಯಾಗಿರದೆ ಬಂಡವಾಳಶಾಹಿ ವ್ಯವಸ್ಥೆಯ ದ್ಯೋತಕಗಳಾದ ರಾಜಕೀಯ, ಆರ್ಥಿಕ, ಹಾಗೂ ಸಾಮಾಜಿಕ ರಚನೆಗಳಿಂದ ಸೃಷ್ಟಿಯಾದಂತಹ ಒಂದು ವ್ಯವಸ್ಥೆ. ಈ ವ್ಯವಸ್ಥೆಯನ್ನು ಹೋಗಲಾಡಿಸಿ ಮಹಿಳೆಯರು ಆರ್ಥಿಕ ಸಬಲೀಕರಣದತ್ತ ಮುನ್ನಡೆಯಬೇಕು. ಪ್ರತಿಯೊಬ್ಬ ಮಹಿಳೆಯಲ್ಲೂ ಸುಪ್ತವಾಗಿರುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಾಮರ್ಥ್ಯ ಅತ್ಯದ್ಭುತವಾದುದು. ಮಹಿಳೆಯಿಲ್ಲದ ಮನೆ, ಸಮಾಜ, ದೇಶ ಅಷ್ಟೇ ಏಕೆ ಮಾನವನ ಅಸ್ತಿತ್ವವೂ ಸಹ ಕುಸಿದುಬೀಳುತ್ತದೆ. ಮಹಿಳೆ ಮಾಡಲಾಗದ ಕೆಲಸ ಈ ಭೂಮಿಯಲ್ಲೇ ಇಲ್ಲ. ಆದ್ದರಿಂದ ಈ ಸುಪ್ತ ಶಕ್ತಿಯನ್ನು ಬಡಿದೆಬ್ಬಿಸಿ ಚಲನಾತ್ಮಕ ಶಕ್ತಿಯಾಗಿ ಪರಿವರ್ತನೆ ಮಾಡಿದಾಗ ಮಹಿಳೆಯ ಜೀವನ ಮತ್ತು ಮಾನವ ಕುಲದ ಬದುಕು ಅರ್ಥಪೂರ್ಣವಾಗುತ್ತದೆ. ಈ ಪತ್ರಿಕೆಯಲ್ಲಿ ಚಿಕ್ಕಮಗಳೂರಿನಲ್ಲಿ ಸ್ವಸಹಾಯ ಸಂಘಗಳು ಮತ್ತು ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರವನ್ನು ಕುರಿತು ಚರ್ಚಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಎನ್.ಸೇತುರಾಮ್: ಮಹಾತ್ಮ ಗಾಂಧಿಯವರ ಮನೋರಂಗ- ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ-2011
ನೀಲತ್ತಹಳ್ಳಿ ಕಸ್ತೂರಿ ;ಗಾಂಧೀಜಿ ಮತ್ತು ಗ್ರಾಮೀಣ ಭಾರತ- ಪ್ರಸಾರಂಗ ಮೈಸೂರು ವಿಶ್ವವಿದ್ಯಾಲಯ ಮೈಸೂರು-2006
ಆದಿತ್ಯಕುಮಾರ್ : 2009 “ಸ್ವ ಸಹಾಯ ಸಂಘಗಳು ಮತ್ತು ಕಿರು-ಹಣಕಾಸು ಗ್ರಾಮೀಣಾಭಿವೃದ್ಧಿಗೆ ಒಂದು ಸಮಗ್ರೀಕರಣ:”-ಮಿತ್ತಲ್ ಪಬ್ಲಿಕೇಷನ್ಸ್, ನವದೆಹಲಿ
ಲಕ್ಷ್ಮೀಶ ಎ. ಎಸ್. ಮತ್ತು ಶ್ಯಾಂಸುಂದರ್ (2009) “ಕಿರು ಹಣಕಾಸು ಮತ್ತು ಕರ್ನಾಟಕದಲ್ಲಿ ಸ್ವ-ಸಹಾಯ ಸಂಘಗಳು” ಮಿತ್ತಲ್ ಪಬ್ಲಿಕೇಷನ್ಸ್, ನವದೆಹಲಿ
ಹನುಮಂತರಾಯ ಎಸ್.ಆರ್. ಮತ್ತು ಅಶೋಕ ಕೆ.ವಿ. (2013 “ಸ್ವ-ಸಹಾಯ ಸಂಘಗಳ ಮೂಲಕ ಹಣಕಾಸಿನ ಒಳಗೊಳ್ಳುವಿಕೆ ಮತ್ತು ಕರ್ನಾಟಕದಲ್ಲಿ ಮಹಿಳಾ ಆರ್ಥಿಕ ಸಬಲೀಕರಣ:” ಪ್ರಸಾರಾಂಗ- ತುಮಕೂರು ವಿಶ್ವವಿದ್ಯಾಲಯ, ತುಮಕೂರು. ಪು.ಪು. 64-69.
ಶಿವಾನಂದನಾರಿ (2013) “ಸ್ವ-ಸಹಾಯ ಗುಂಪು ಬ್ಯಾಂಕು ಸಂಪರ್ಕ ಮಾದರಿ ಮತ್ತು ಹಣಕಾಸಿನ ಒಳಗೊಳ್ಳುವಿಕೆ.- ಒಂದು ಅಧ್ಯಯನ” ಪ್ರಸಾರಾಂಗ – ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು. ಪು.ಪು.116-130.
ಕ.ಬೈರಪ್ಪ ಸಮಗ್ರ ಗ್ರಾಮೀಣ ಸಮಾಜ ಮತ್ತು ಅಭಿವೃದ್ಧಿ
ವೆಂಕಟರಾವ್. ವಿ ಮತ್ತು ಹಜಾರಿಕ್ ಎನ್. (1980) ಲೋಕಲ್ ಸೆಲ್ಪ್ ಗವರ್ನಮೆಂಟ್ ಇನ್ ಇಂಡಿಯಾ, ಚಾಂದ್ ಅಂಡ್ ಕೋ ಪಬ್ಲಿಕೇಷನ್ ನ್ಯೂಡೆಲ್ಲಿ
ಶ್ರೀಧರ್ ಎ (2002) ವಿಕೇಂದ್ರೀಕರಣ ಮತ್ತು ಗ್ರಾಮ ಪಂಚಾಯಿತಿ, ಪ್ರಸಾರಾಂಗ , ಕನ್ನಡ ವಿ.ವಿ.ಹಂಪಿ
ಮೋಹನದಾಸ್ ಕರಮಚಂದ್ ಗಾಂಧಿ (ಮೂಲ) ನನ್ನ ಆದರ್ಶ ಗ್ರಾಮ (ಸಂ)ಡಾ.ಹೋ.ನ ಶ್ರೀನಿವಾಸಯ್ಯ, ಗಾಂಧಿ ಭವನ, ಬೆಂಗಳೂರು
ಮೊ.ಕ.ಗಾಂಧಿ-ಪಂಚಾಯತ್ ರಾಜ್ 2006 ನವಜೀವನ ಮುದ್ರಣಾಲಯ ಅಹ್ಮದಾಬಾದ್