ನಾಗರಿಕ ಸಮಾಜದಲ್ಲಿ ವಂಶ ಪಾರಂಪರ್ಯ ರಾಜಕಾರಣ

Main Article Content

ವೀರಭದ್ರಪ್ಪ ಎ.
ಎಸ್.ಎ. ಗೋವರ್ಧನ

Abstract

ವಂಶ ಪಾರಂಪರ್ಯ ರಾಜಕಾರಣವು ಸಮಕಾಲೀನ ಪ್ರಜಾಪ್ರಭುತ್ವದ ಪ್ರಮುಖ ಸವಾಲುಗಳಲ್ಲೊಂದು ಆಗಿದೆ. ರಾಜಕೀಯ ಅಧಿಕಾರವು ಕುಟುಂಬದೊಳಗೆ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಆಗುತ್ತಿರುವುದು ಪ್ರಜಾಪ್ರಭುತ್ವದ ಸಮಾನ ಅವಕಾಶ, ನಾಗರಿಕರ ಭಾಗವಹಿಸುವಿಕೆ ಮತ್ತು ಹೊಣೆಗಾರಿಕೆ ಎಂಬ ಮೂಲಭೂತ ತತ್ವಗಳಿಗೆ ಧಕ್ಕೆಯನ್ನು ಉಂಟುಮಾಡುತ್ತಿದೆ. ನಾಗರಿಕ ಸಮಾಜವು ಪ್ರಜಾಪ್ರಭುತ್ವದ ನೈತಿಕ ಹಾಗೂ ಸಂಸ್ಥಾತ್ಮಕ ಆಧಾರವಾಗಿರುವ ಸಂದರ್ಭದಲ್ಲಿ, ವಂಶ ಪಾರಂಪರ್ಯ ರಾಜಕಾರಣವು ಅದರ ಸ್ವಾಯತ್ತತೆ, ಚೈತನ್ಯ ಮತ್ತು ವಿಮರ್ಶಾತ್ಮಕ ಪಾತ್ರವನ್ನು ದುರ್ಬಲಗೊಳಿಸುತ್ತಿದೆ. ಈ ಸಂಶೋಧನಾ ಪತ್ರಿಕೆಯು ವಂಶ ಪಾರಂಪರ್ಯ ರಾಜಕಾರಣವು ನಾಗರಿಕ ಸಮಾಜದ ಮೇಲೆ ಉಂಟುಮಾಡುವ ಸಾಮಾಜಿಕ, ರಾಜಕೀಯ ಮತ್ತು ಪ್ರಜಾಸತ್ತಾತ್ಮಕ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. ಭಾರತೀಯ ಮತ್ತು ವಿಶೇಷವಾಗಿ ಕರ್ನಾಟಕದ ಸನ್ನಿವೇಶದಲ್ಲಿ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್ - ADR) (2025) ವರದಿಗಳ ಆಧಾರದ ಮೇಲೆ ವಂಶ ಪಾರಂಪರ್ಯ ರಾಜಕಾರಣ ಪ್ರವೃತ್ತಿಯ ವ್ಯಾಪ್ತಿ, ಪರಿಣಾಮ ಹಾಗೂ ಸುಧಾರಣೆಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿದೆ.

Article Details

Section

Research Articles

Author Biographies

ವೀರಭದ್ರಪ್ಪ ಎ.

ಸಂಶೋಧನಾರ್ಥಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಎಸ್.ಎ. ಗೋವರ್ಧನ

ಸಹಾಯಕ ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

How to Cite

ವೀರಭದ್ರಪ್ಪ ಎ., & ಎಸ್.ಎ. ಗೋವರ್ಧನ. (2026). ನಾಗರಿಕ ಸಮಾಜದಲ್ಲಿ ವಂಶ ಪಾರಂಪರ್ಯ ರಾಜಕಾರಣ. ಅಕ್ಷರಸೂರ್ಯ (AKSHARASURYA), 14(05), 142 to 152. https://aksharasurya.com/index.php/latest/article/view/948

References

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ರಿಪೋರ್ಟ್ (ಎಡಿಆರ್) (2025). ಅನಲಿಸಿಸ್ ಆಫ್ ಡೈನಸ್ಟಿಕ್ ಪೊಲಿಟಿಷಿಯನ್ಸ್ ಇನ್ ಇಂಡಿಯಾ. ನ್ಯೂ ಡೆಲ್ಲಿ.

ಚಿಬ್ಬರ್, ಪಿ., & ನೂರುದ್ದಿನ್, ಐ. (2014). ಡೈನಸ್ಟಿಕ್ ಪಾರ್ಟಿಸ್: ಆರ್ಗಾನೈಜೆಷನ್, ಫೈನಾನ್ಸ್ ಅಂಡ್ ಇಂಪಾಕ್ಟ್ ಆನ್ ಡೆಮೋಕ್ರಸಿ. ಪಾರ್ಟಿ ಪಾಲಿಟಿಕ್ಸ್, 20(2), 277–295.

ಆಂಟೋನಿಯೋ ಗ್ರಾಂಸ್ಕಿ ಎ. (1971). ಸೆಲೆಕ್ಷನ್ಸ್ ಫ್ರಮ್ ದಿ ಪ್ರಿಸನ್ ನೋಟ್ ಬುಕ್ಸ್ (ಕ್ಯೂ. ಹೊರೇ & ಜಿ. ಎನ್. ಸ್ಮಿತ್, ಎಡಿಟರ್ಸ್. & ಟ್ರಾನ್ಸ್.). ಇಂಟರ್ನ್ಯಾಷನಲ್ ಪಬ್ಲಿಷರ್ಸ್.

ಪುಟ್ನಂ, ಆರ್. ಡಿ. (1993). ಮೇಕಿಂಗ್ ಡೆಮೋಕ್ರಸಿ ವರ್ಕ್: ಸಿವಿಕ್ ಟ್ರಡಿಷನ್ಸ್ ಇನ್ ಮಾಡ್ರನ್ ಇಟಲಿ. ಪ್ರಿನ್ಸ್ಟನ್ ಯೂನಿವರ್ಸಿಟಿ ಪ್ರೆಸ್.

ಜಾಫ್ರೆಲಾಟ್, ಸಿ. (2012). ಇಂಡಿಯಾಸ್ ಸೈಲೆಂಟ್ ರೆವೊಲ್ಯೂಷನ್: ದಿ ರೈಸ್ ಆಫ್ ದಿ ಲೋಯರ್ ಕಾಸ್ಟ್ಸ್ ಇನ್ ನಾರ್ತ್ ಇಂಡಿಯಾ. ಪರ್ಮನೆಂಟ್ ಬ್ಲಾಕ್.

ಚಂದ್ರ, ಕೆ. (2016). ಡೆಮೋಕ್ರಟಿಕ್ ಡೈನಸ್ಟಿಸ್: ಸ್ಟೇಟ್, ಪಾರ್ಟಿ ಅಂಡ್ ಫ್ಯಾಮಿಲಿ ಇನ್ ಕಂಟೆಂಪರರಿ ಇಂಡಿಯನ್ ಪಾಲಿಟಿಕ್ಸ್. ಕೆಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.

ಮನೋರ, ಜೆ. (2013). ಡೆಮೋಕ್ರಟಿಕ್ ಪಾಲಿಟಿಕ್ಸ್ ಅಂಡ್ ಡೈನಸ್ಟಿಕ್ ರೂಲ್ ಇನ್ ಇಂಡಿಯಾ. ಡೆಲ್ಲಿ: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್.

ರೂಡೋಲ್ಫ್, ಎಲ್. ಐ., & ರೂಡೋಲ್ಫ್, ಎಸ್. ಎಚ್. (2008). ಎಕ್ಸ್ ಪ್ಲೈನಿಂಗ್ ಇಂಡಿಯನ್ ಡೆಮೋಕ್ರಸಿ: ಎ ಫಿಫ್ಟಿ ಇಯರ್ಸ್ ಪರ್ಸ್ಪೆಕ್ಟಿವ್, 1956–2006. ನ್ಯೂ ಡೆಲ್ಲಿ: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್.

ವೈಷ್ಣವಿ, ಎಂ. (2017). ಡೈನಸ್ಟಿಕ್ ಪಾಲಿಟಿಕ್ಸ್ ಅಂಡ್ ಡೆಮೋಕ್ರಸಿ ಇನ್ ಇಂಡಿಯಾ. ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, 52(1), 88–95.

ಕೊಠಾರಿ, ಆರ್. (1989). ಪಾಲಿಟಿಕ್ಸ್ ಅಂಡ್ ದಿ ಪೀಪಲ್: ಇನ್ ಸರ್ಚ್ ಆಫ್ ಎ ಹ್ಯೂಮನ್ ಇಂಡಿಯಾ. ಅಜಂತಾ ಪಬ್ಲಿಕೇಷನ್ಸ್.