ಉತ್ತಮ ಆಡಳಿತದ ದಿಕ್ಕಿನಲ್ಲಿ ಮಾಹಿತಿ ಹಕ್ಕು ಕಾಯ್ದೆ-2005 & 2019: ಸಿವಿಲ್ ಸೊಸೈಟಿಯ ಸಕ್ರಿಯತೆ ಮತ್ತು ಪರಿಣಾಮಗಳು

Main Article Content

ಸಿದ್ದಯ್ಯ ಎಸ್.ವಿ.
ಅಶೋಕ್ ಕುಮಾರ್ ವಿ. ಪಾಳೇದ

Abstract

ಮಾಹಿತಿ ಹಕ್ಕು ಕಾಯ್ದೆ, 2005 (Right to Information Act, 2005) ಭಾರತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಉತ್ತಮ ಆಡಳಿತವನ್ನು ಬಲಪಡಿಸುವ ಪ್ರಮುಖ ಕಾನೂನು ಸಾಧನವಾಗಿದೆ. ಮಾಹಿತಿ ಹಕ್ಕು ಸಂವಿಧಾನದ ಕಲಂ 19(1)(a) ಅಡಿಯಲ್ಲಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಅವಿಭಾಜ್ಯ ಅಂಗವೆಂದು Supreme Court of India ತೀರ್ಪುಗಳ ಮೂಲಕ ಸ್ಪಷ್ಟಪಡಿಸಿದೆ. ಈ ಅಧ್ಯಯನವು ಉತ್ತಮ ಆಡಳಿತದ ಸಾಧನೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಪಾತ್ರವನ್ನು ವಿಶ್ಲೇಷಿಸಿ, ಅದರ ಪರಿಣಾಮಕಾರಿತ್ವದಲ್ಲಿ ಸಿವಿಲ್ ಸೊಸೈಟಿಯ ಸಕ್ರಿಯತೆಯನ್ನು ಪರಿಶೀಲಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಮತ್ತು ಸರ್ಕಾರದ ಕಾರ್ಯಚಟುವಟಿಕೆಗಳ ಮೇಲಿನ ಸಾರ್ವಜನಿಕ ನಿಯಂತ್ರಣವು ಉತ್ತಮ ಆಡಳಿತದ ಮೂಲ ಅಂಶಗಳಾಗಿವೆ. ಈ ಹಿನ್ನೆಲೆಯಲ್ಲಿ, ಸಿವಿಲ್ ಸೊಸೈಟಿ ಸಂಘಟನೆಗಳು ಮಾಹಿತಿ ಹಕ್ಕಿನ ಜಾಗೃತಿ ಮೂಡಿಸುವುದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವುದು ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿವೆ.
ಈ ಸಂಶೋಧನಾ ಅಧ್ಯಯನವು ಗುಣಾತ್ಮಕ ವಿಧಾನವನ್ನು ಅನುಸರಿಸಿ ದ್ವಿತೀಯಕ ಮೂಲಗಳ ಆಧಾರದ ಮೇಲೆ ವಿಶ್ಲೇಷಣೆಯನ್ನು ನಡೆಸುತ್ತದೆ. ಮಾಹಿತಿ ಹಕ್ಕು ಕಾಯ್ದೆ ಆಡಳಿತದ ಹೊಣೆಗಾರಿಕೆಯನ್ನು ಬಲಪಡಿಸಿದರೂ, ಅದರ ಪರಿಣಾಮಕಾರಿತ್ವವು ಸಿವಿಲ್ ಸೊಸೈಟಿಯ ಚಟುವಟಿಕೆಗಳು, ಸಾರ್ವಜನಿಕ ಜಾಗೃತಿ ಹಾಗೂ ಮಾಹಿತಿ ಆಯೋಗಗಳ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿದೆ. ಜೊತೆಗೆ, ವಿಳಂಬ, ಅಪೂರ್ಣ ಮಾಹಿತಿ, ಹಾಗೂ ಕಾನೂನು ಜಾರಿಗೆ ಸಂಬಂಧಿಸಿದ ಸವಾಲುಗಳು ಇನ್ನೂ ಮುಂದುವರಿದಿವೆ.

Article Details

Section

Research Articles

Author Biographies

ಸಿದ್ದಯ್ಯ ಎಸ್.ವಿ.

ಸಂಶೋಧನಾ ವಿದ್ಯಾರ್ಥಿ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ.

ಅಶೋಕ್ ಕುಮಾರ್ ವಿ. ಪಾಳೇದ

ಸಂಶೋಧನಾ ಮಾರ್ಗದರ್ಶಕರು, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ.

How to Cite

ಸಿದ್ದಯ್ಯ ಎಸ್.ವಿ., & ಅಶೋಕ್ ಕುಮಾರ್ ವಿ. ಪಾಳೇದ. (2026). ಉತ್ತಮ ಆಡಳಿತದ ದಿಕ್ಕಿನಲ್ಲಿ ಮಾಹಿತಿ ಹಕ್ಕು ಕಾಯ್ದೆ-2005 & 2019: ಸಿವಿಲ್ ಸೊಸೈಟಿಯ ಸಕ್ರಿಯತೆ ಮತ್ತು ಪರಿಣಾಮಗಳು. ಅಕ್ಷರಸೂರ್ಯ (AKSHARASURYA), 14(05), 135 to 141. https://aksharasurya.com/index.php/latest/article/view/947

References

State of UP v. Raj Narain (1975)

S.P. Gupta v. Union of India (1982)

ಮಾಹಿತಿ ಹಕ್ಕು ಅಧಿನಿಯಮ, 2005 [15ನೇ ಜೂನ್, 2005] (13.02.09ರ ಭಾರತ ವಿಶೇಷ ರಾಜ್ಯ ಪತ್ರದ IXನೇ ಭಾಗದ Iನೇ ವಿಭಾಗದ 39ನೇ ಸಂಪುಟದ 1ನೇ ಸಂಚಿಕೆಯಲ್ಲಿ 115 ರಿಂದ 140 ರ ವರೆಗಿನ ಪುಟಗಳಲ್ಲಿ ಪ್ರಕಟವಾಗಿದೆ)

ಸಾ.ರ. ಸುಳಕೂಡೆ, ಮಾಹಿತಿ ಹಕ್ಕು ಕಾಯ್ದೆಯ ಪರಿಚಯ 2005, ವಿದ್ಯಾ ಮಂದಿರ ಬುಕ್ ಡಿಪೋ ಹುಬ್ಬಳ್ಳಿ.

ಡಾ. ಶೇಖರ್ ಡಿ. ಸಜ್ಜನರ, ಮಾನ್ಯ ಮಾಹಿತಿ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗ ಬೆಂಗಳೂರು.

ಜೆ.ಎಂ. ರಾಜಶೇಖರ್. ಗ್ರಂಥ : “ಮಾಹಿತಿ ಬಂತು ಮಾಹಿತಿ” ಶ್ರೀ ಸಾಮಾನ್ಯರಿಗೆ ಮಾಹಿತಿ ಹಕ್ಕು ಕಾಯ್ದೆ ಪರಿಚಯ, ವಾಸನ್ ಪಬ್ಲಿಕೇಶನ್ಸ್ ಬೆಂಗಳೂರು.

ಜೆ.ಎಂ. ರಾಜಶೇಖರ ‘ಮಾಹಿತಿ ಹಕ್ಕು ದರ್ಬಾರ್’ ರಮ್ಯಾರಾಣಿ ಸೂರಜ್ ಪ್ರಕಾಶನ, #36/ ಅಮ್ಮ. ಮೌಂಟ್ ವೀವ್ ಸ್ಕೂಲ್ ಕ್ರಾಸ್, ಹುಣಸಿಕಟ್ಟೆ ರಸ್ತೆ, ರಾಣೆಬೆನ್ನೂರು, ಜಿಲ್ಲಾ ಹಾವೇರಿ, ಕರ್ನಾಟಕ. ಶ್ರೀ ಭವಾನಿ ಅಪ್ ಸೆಟ್ ಪ್ರಿಂಟರ್ಸ್ ಹುಬ್ಬಳ್ಳಿ.

Supreme Court of India Judgments

World Bank Report on Governance

Mazdoor Kisan Shakti Sangathan Movement Reports

Centre notifies RTI amendments 2019 – Business Standard.

RTI reform challenges – India Legal.

Evolution of RTI & civil society role – PubAdmin Institute.