ನಾರಿಶಕ್ತಿ ವಂದನ ಅಧಿನಿಯಮ, 2023 ಮತ್ತು ಮಹಿಳಾ ರಾಜಕೀಯ ಸಬಲೀಕರಣ: ಒಂದು ವಿಶ್ಲೇಷಣೆ
Main Article Content
Abstract
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌ರವರು “ನಾನು ಸಮುದಾಯವೊಂದರ ಪ್ರಗತಿಯನ್ನು ಆ ಸಮುದಾಯದಲ್ಲಿ ಮಹಿಳೆಯರು ಸಾಧಿಸಿರುವ ಪ್ರಗತಿಯಿಂದ ಅಳೆಯುತ್ತೇನೆ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರ ಈ ಅಭಿಪ್ರಾಯವು ಈ ಮಹಿಳೆಯರ ಸಾಮಾಜಿಕ, ರಾಜಕೀಯ, ಆರ್ಥಿಕ ಸಬಲೀಕರಣಕ್ಕೆ ಪ್ರಾಧಾನ್ಯತೆ ನೀಡುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರನ್ನು ರಾಜಕೀಯವಾಗಿ ಸಬಲೀಕರಿಸುವ ಉದ್ದೇಶದಿಂದ ಭಾರತ ಸರ್ಕಾರವು ನಾರಿಶಕ್ತಿ ವಂದನ ಅಧಿನಿಯಮ, 2023 ಅನ್ನು ರೂಪಿಸಿದೆ. ಅಧಿನಿಯಮವು ಮಹಿಳೆಯರಿಗೆ ಶಾಸನಗಳನ್ನು ರೂಪಿಸುವ ಹಾಗೂ ನಿರ್ಣಯಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತದೆ. ಈ ಸಂಶೋಧನಾ ಲೇಖನವು ಭಾರತದ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರ ಪ್ರಸ್ತುತ ಪ್ರಾತಿನಿಧ್ಯತೆ, ನಾರಿಶಕ್ತಿ ವಂದನ ಅಧಿನಿಯಮ, 2023ರ ಹಿನ್ನೆಲೆ, ಸಾಂವಿಧಾನಿಕ ಉಪಬಂಧಗಳು, ಇದುವರೆಗೆ ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ನಡೆದಿರುವ ಪ್ರಯತ್ನಗಳು ಮುಂತಾದ ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದರೊಂದಿಗೆ ಈ ಸಂಶೋಧನಾ ಲೇಖನದಲ್ಲಿ ಬಹುಮುಖ್ಯವಾಗಿ ನಾರಿಶಕ್ತಿ ವಂದನ ಅಧಿನಿಯಮ, 2023ನ್ನು ಅನುಷ್ಠಾನಗೊಳಿಸುವಲ್ಲಿ ಮುಖಾಮುಖಿಯಾಗುವ ಸವಾಲುಗಳು ಮತ್ತು ಪರಿಹಾರಗಳು ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯಿಂದ ಆಡಳಿತದ ಮೇಲೆ ಉಂಟಾಗುವ ಪರಿಣಾಮಗಳು ಹಾಗೂ ಸಾಧಕ ಬಾಧಕಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ಸಂಶೋಧನಾ ಲೇಖನವನ್ನು ಪುಸ್ತಕಗಳು, ವರ್ತಮಾನ ಪತ್ರಿಕೆಗಳು, ಮಾಸಿಕಗಳು, ಸಮೀಕ್ಷೆಗಳು ಮ್ಯಾಗಜಿನ್‌ಗಳು ಅಂತರ್ಜಾಲ ತಾಣಗಳು ಮುಂತಾದ ಅನುಷಂಗಿಕ ದತ್ತಾಂಶಗಳ ನೆರವಿನಿಂದ ರಚಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
Election Commission of India (results.eci.gov.in) - https://www.myneta.info / PRS-chhattisgarh.
The Constitution of India. https://www.india.gov.in
Jain. M (2022). A Study on Women Reservation in the Legislature and its impact. Nyayashastra Law Review, volume II, Issue II.
Panda. S (2001), Reservation for women in Union and State Legislative : A perspective, Indian Journal of PA, Vol. XLVIII.
Madhu. K (1996) Women and Politics beyond quotas, EPW, Oct 20, 1996.
West Bengal Assembly / India www.themirror.com
www.tribuneindia.com