ಪಂಪನ ಕಾವ್ಯಗಳಲ್ಲಿ ಮೌಲ್ಯ ವಿವೇಚನೆ

Authors

  • Vikas Kumar V.

Abstract

ಪಂಪ ತನ್ನ ಕಾಲದ ಒಟ್ಟು ಅನುಭವಗಳನ್ನು ತನ್ನ ಕಾವ್ಯಗಳ ಮೂಲಕ ಕಟ್ಟಿಕೊಟ್ಟಿದ್ದಾನೆ. ಅವನು ವಾಸ್ತವವಾಗಿ ಹೇಳಲು ಹೊರಟಿರುವು ಧರ್ಮ ‘ಅರಿವಂ ಪೊಸಯಿಸುವುದೇ ಧರ್ಮ’ ಎಂದು. ತನ್ನ ಒಂದು ಕೃತಿಯಲ್ಲಿ ಜಿನಧರ್ಮದ ವೈರಾಗ್ಯವನ್ನು, ಮತ್ತೊಂದರಲ್ಲಿ ಯುದ್ಧದ ವರ್ಣನೆಯೇ ಅವನಿಗೆ ಮುಖ್ಯವಲ್ಲ, ಎರಡು ವಿಭಿನ್ನ ಮಾರ್ಗಗಳ ಮೂಲಕ ಮನುಷ್ಯ ಕುಲ ಒಂದೇ ಎಂಬುದನ್ನು ಹೇಳಲು ಹೊರಟ ಪಂಪ, ಈ ಮನುಷ್ಯರಿಗೆ ಇರಬೇಕಾದ ದಯೆ, ದಾನ, ತಪ, ಶೀಲ, ತ್ಯಾಗ ಇವುಗಳನ್ನು ಪ್ರತಿಪಾದಿಸಲು ಹೊರಟಿದ್ದಾನೆ ಇವುಗಳ ಜೊತೆಗೆ ಶೌರ್ಯ, ಸಾಹಸ ಇವುಗಳನ್ನು ಹೇಳಿದ್ದಾನೆ. ಅವನ ಧರ್ಮಕ್ಕೆ ಮಾತೃತ್ವದ ಛಾಯೆ ಇದೆ. ಅದು ಸಮಗ್ರತೆಯನ್ನು ಒಳಗೊಂಡ ವಿಸ್ತಾರವಾದ ನೋಟ. ‘ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಂ’ ಎಂದು ಭೋಗ-ಯೋಗ ಸಮನ್ವಯವನ್ನು ಸಾಧಿಸಿದ್ದಾನೆ. ಸಮಾಜವನ್ನು ಬೆಳಗಿಸಬಹುದಾದ ಮೌಲ್ಯಗಳನ್ನು ನೀಡಿದ್ದಾನೆ, ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಈ ಸಮಯದಲ್ಲಿ ಪಂಪನ ಕಾವ್ಯಗಳು ನಮಗೆ ಮಾನವೀಯ ಮೌಲ್ಯಗಳನ್ನು ತಿಳಿಸುತ್ತವೆ. ಈ ಮೌಲ್ಯಗಳನ್ನು ತಿಳಿಸಿದುದರಿಂದಲೇ ಪಂಪ ‘ನಾಡೋಜ’ನಾಗಿರುವುದು.

Downloads

Published

05.03.2023

How to Cite

Vikas Kumar V. (2023). ಪಂಪನ ಕಾವ್ಯಗಳಲ್ಲಿ ಮೌಲ್ಯ ವಿವೇಚನೆ. AKSHARASURYA, 2(03), 39–42. Retrieved from https://aksharasurya.com/index.php/latest/article/view/75

Issue

Section

Article