ಬೆಳ್ವೊಳ ನಾಡಿನ ಸೂಫಿ ಸಂತರು
Abstract
ಸೂಫಿಗಳ ಆಸ್ಮಿತೆಯ ಹುಡುಕಾಟದಲ್ಲಿ ಬೆಳ್ವೊಳ ಪರಿಸರದ ಸೂಫಿ ಸಂತರ ಸಂಗತಿಗಳು ಗಮನಾರ್ಹವಾಗಿವೆ. ಪ್ರಾಚೀನ ಕರ್ನಾಟಕದ ಚರಿತ್ರೆಯಲ್ಲಿ ‘ಬೆಳ್ವಲನಾಡು ಫಲವತ್ತಾದ ದವಸ ಧಾನ್ಯಗಳನ್ನು ಬೆಳೆಯುವಲ್ಲಿ ಈ ನಾಡು ಪ್ರಸಿದ್ಧವಾಗಿತ್ತು. ಬೆಳ್ವಲ ಎಂದರೆ ಬೆಳೆಯುವ ಹೊಲ ಎಂದರ್ಥ, ಶ್ವೇತವರ್ಣದ ನಾಡು, ಇದು ಹೆಚ್ಚು ಫಲವತ್ತಾದ ಭೂಮಿ ಸಮತಟ್ಟಾದ ಕಪ್ಪು ಮಣ್ಣಿನ ಪ್ರದೇಶ ಎಂಬ ಅರ್ಥಗಳನ್ನು ಸೂಚಿಸುತ್ತದೆ. ಈ ಪ್ರದೇಶದಲ್ಲಿ ಹೆಚ್ಚು ಹತ್ತಿ ಬಳಿಯೋ ಕಾರಣದಿಂದಾಗಿ ಇದಕ್ಕೆ ಬೆಳ್ವೊಳನಾಡು ಎಂದು ಕರೆಯುತ್ತಾರೆ.’ ಕಲ್ಯಾಣಿ ಚಾಲುಕ್ಯರ ಆಡಳಿತ ಪ್ರದೇಶವಾಗಿತ್ತು. ಬೆಳ್ವಲ ನಾಡಿನ ಭಾಷೆ ನಡುಗನ್ನಡ, ಪುಲಿಗೇರಿಯ ಕನ್ನಡ ಭಾಷೆಯಾಗಿದೆ. ಬೆಳ್ವಲ ನಾಡಿನ ಪ್ರದೇಶವು ಗದಗ ಜಿಲ್ಲೆಯ ಗದಗ, ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಹುಬ್ಬಳ್ಳಿ ತಾಲ್ಲೂಕಿನ ಕೆಲಭಾಗ ಮತ್ತು ಬಾಗಲಕೋಟ್ ಜಿಲ್ಲೆಯ ಬಾಗಲಕೋಟೆ, ಬಾದಾಮಿ ತಾಲ್ಲೂಕುಗಳ ಕೆಲಭಾಗ. ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ ತಾಲ್ಲೂಕುಗಳ ಕೆಲ ಭಾಗ ಹಾಗೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕೂಕನೂರ ತಾಲ್ಲೂಕಿನ ಕೆಲ ಭಾಗ ಈ ಬೆಳ್ವಲ ನಾಡಿನಲ್ಲಿ ಸಮಾವೇಶಗೊಂಡಿದ್ದವೆಂದು ತಿಳಿದುಬರುತ್ತದೆ. ಇದು ಲೇಖನದ ವ್ಯಾಪ್ತಿಯು ಹೌದು, ಬೆಳ್ವೊಳ ನಾಡಿನ ವ್ಯಾಪ್ತಿಯು ಹೌದು. ಹೆಚ್ಚು ಮಳೆ ಬೀಳುವ ಪ್ರದೇಶ ಬಯಲು ಸೀಮೆ ಬಯಲುನಾಡು ಬೆಳ್ವೊಲ ನಾಡು. ಬೆಳ್ವೊಳ ನಾಡಿನ ಸ್ಥಳಿಯ ಸೂಫಿ ಸಂತರನ್ನು ಅಧ್ಯಯನ ಮಾಡುವ ಉದ್ದೇಶವೂ ಇದಾಗಿದೆ.