ಮನ್ವಂತರ ಕವಿ ಕುವೆಂಪು

Authors

  • Ravishankar A. K.

Abstract

ಕವಿ ಹಾಗೂ ಕೃತಿ ಈ ಎರಡೂ ಚೇತನತತ್ವದ ಪರಿಶುದ್ಧಿಗಳು. ಕೃತಿಯು ಒಡಮೂಡಲು ಆಕೃತಿಯೊಂದರ ಕಾರ್ಯ ಅತ್ಯಂತ ಶ್ರೇಷ್ಟವಾದುದು. ಅದು ಕವಿಯ ಶಕ್ತಿಯಾಗಿ ಒಡಮೂಡಿದಾಗ ಭೂತ ಘಟನೆಗಳನ್ನು ಕಲ್ಪನೆಯ ನೆವದಲ್ಲಿ ತೆರೆದಿಡುತ್ತಲೇ ಭವಿಷ್ಯದ ಸೂಕ್ಷ್ಮಗಳನ್ನು ವರ್ತಮಾನಗೊಳಿಸಲು ಸಾಧ್ಯ. ಚೇತನ ತತ್ವವೊಂದು ಅನಿಕೇತನವಾಗುವ ಕ್ರಿಯೆಯಲ್ಲಿ ವಿಚಾರವು ವ್ಯಕ್ತಿತ್ವವನ್ನು ರೂಪಿಸಿರುತ್ತದೆ. ಅದು ಧ್ಯಾನದ ಕಾರ್ಯ. ಎಲ್ಲರೂ ಹುಡುಕುವ ತೃಪ್ತಿ, ಸಿದ್ಧಿ, ಮೋಕ್ಷದ ಸಂಕೇತ.

ಕನ್ನಡ ಸಾಹಿತ್ಯವು ವಿಶ್ವಸಾಹಿತ್ಯವಾಗಿ ಕಣ್ತೆರೆಯಲು ಕನ್ನಡ ಸಂಸ್ಕೃತಿಯ ದಾಖಲು ಕಾರ್ಯ ಬೃಹತ್ತಾಗಿ ಸಾಗಿದೆ. ಇಲ್ಲಿನ ಸೃಜನಶೀಲತೆ, ವಿಮರ್ಶೆ, ಸಂಶೋಧನೆಗಳು ವಿಶ್ವಸಾಹಿತ್ಯದ ವಿವಿಧ ಶ್ರೇಷ್ಠ ಕೃತಿಗಳೊಡನೆ ನಡೆಸಿದ ನಿತ್ಯ ಅನುಸಂಧಾನವೇ ಅದರ ವಿಶಾಲತೆಗೆ ಕಾರಣವಾಗಿದೆ. ದೇಸಿಯವಾಗಿ ಸೃಷ್ಠಿಗೊಂಡ ಜಾನಪದ ಸಂಪತ್ತು, ವಚನಗಳ ವಿಶಾಲತೆ, ಕೀರ್ತನೆಗಳ ಅನುಭಾವ, ತತ್ವಪದಗಳ ತಾತ್ವಿಕ ಚಿಂತನೆಗಳು ಈ ಮಣ್ಣಿನಿಂದ ವಿಶ್ವಕ್ಕೆ ನೀಡಿದ ಕೊಡುಗೆಯೆನ್ನಬಹುದು.

References

ನಾರಾಯಣರಾವ್ ಜಿ.ಟಿ., ಕುವೆಂಪು ದರ್ಶನ ಸಂದರ್ಶನ, ೨೦೦೪, ಅತ್ರಿ ಬುಕ್ ಸೆಂಟರ್, ಮಂಗಳೂರು.

ಕುವೆಂಪು, ವಿಚಾರ ಕ್ರಾಂತಿಗೆ ಆಹ್ವಾನ, ೨೦೧೦, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು.

ಭಂಡಾರಿ ಆರ್.ವಿ., ಕುವೆಂಪು: ದೃಷ್ಟಿ-ಸೃಷ್ಟಿ, ೨೦೧೧, ಸುಮುಖ ಪ್ರಕಾಶನ, ಬೆಂಗಳೂರು.

ಕುವೆಂಪು, ಕೊಳಲು, ೨೦೧೨, ಉದಯರವಿ ಪ್ರಕಾಶನ, ಮೈಸೂರು.

Downloads

Published

05.03.2023

How to Cite

Ravishankar A. K. (2023). ಮನ್ವಂತರ ಕವಿ ಕುವೆಂಪು. ಅಕ್ಷರಸೂರ್ಯ (AKSHARASURYA), 2(03), 14–17. Retrieved from https://aksharasurya.com/index.php/latest/article/view/68

Issue

Section

Article